ಸೈಬರ್ ಕ್ರೈಂ ಭೇದಿಸಲು ನಿಪುಣರ ಕೊರತೆ

Contributed bysunilkumarpapuu@gmail.com|Vijaya Karnataka
lack of skilled personnel in cyber crime leads to concerns in crime control
-ಪ್ರಕರಣ ದಾಖಲಿಸಲು ಠಾಣೆಗಳು ಹಿಂದೇಟು | ಸೈಬರ್ ಠಾಣೆ ಸಿಬ್ಬಂದಿಗೆ ಹೆಚ್ಚಿದ ಒತ್ತಡ

ವೆಂ.ಸುನೀಲ್ ಕುಮಾರ್ ಕೋಲಾರ
ಘ್ಕಿs್ಠ್ಞಜ್ಝಿ.k್ಠಞa್ಟ14ಃಠಿಜಿಞಛಿsಟ್ಛಜ್ಞಿdಜಿa.್ಚಟಞ

ಡಿಜಿಟಲ್ ಆರ್ಥಿಕ ವಹಿವಾಟುಗಳು ಹೆಚ್ಚಾದಂತೆ ಸೈಬರ್ ವಂಚನೆ ಪ್ರಕರಣಗಳು ಗಣನೀಯ ಪ್ರಮಾಣದಲ್ಲಿದಾಖಲಾಗುತ್ತಿವೆ. ಆದರೆ, ಠಾಣೆಗಳಲ್ಲಿಸೈಬರ್ ಅಪರಾಧಗಳನ್ನು ಭೇದಿಸಲು ನಿಪುಣರು ಇಲ್ಲದಿರುವುದು ಅಪರಾಧ ನಿಯಂತ್ರಣಕ್ಕೆ ಹಿನ್ನಡೆಯಾಗಿದೆ.

ಡಿಜಿಟಲ್ ಯುಗದಲ್ಲಿಸ್ಮಾರ್ಟ್ ಫೋನ್ ಆಧಾರಿತ ಸೇವೆಗಳು ಹೆಚ್ಚಾಗಿರುವ ಹಿನ್ನೆಲೆಯಲ್ಲಿಡಿಜಿಟಲ್ ಬಂಧನ, ಫಿಶಿಂಗ್ ಮತ್ತು ಒಟಿಪಿ ವಂಚನೆ, ನಕಲಿ ಉದ್ಯೋಗ, ಹೂಡಿಕೆ ಮತ್ತು ಕ್ರಿಪ್ಟೋ ಕರೆನ್ಸಿ ಸೇರಿ ಹಲವಾರು ಮಾದರಿಯ ಆನ್ ಲೈನ್ ವಂಚನೆಗಳಿಗೆ ಲಕ್ಷಾಂತರ ಜನರು ಒಳಗಾಗುತ್ತಿದ್ದಾರೆ.

ಆದರೆ, ಸಾಮಾನ್ಯ ಪೊಲೀಸ್ ಠಾಣೆಗಳಲ್ಲಿಸೈಬರ್ ನಿಪುಣರ ಕೊರತೆಯ ಕಾರಣ ಕೊಟ್ಟು ಸೈಬರ್ ಪ್ರಕರಣ ದಾಖಲಿಸಲು ಪೊಲೀಸರು ಹಿಂದೇಟು ಹಾಕುತ್ತಿದ್ದಾರೆ. ಡಿಜಿಟಲ್ ವಂಚನೆಗಳಿಗೆ ಒಳಗಾದ ಸಂತ್ರಸ್ತರನ್ನು ಸೈಬರ್ ಠಾಣೆಗಳತ್ತ ಕಳಿಸುತ್ತಿದ್ದು, ಸೈಬರ್ ಠಾಣೆ ಪೊಲೀಸರ ಮೇಲಿನ ಒತ್ತಡ ಹೆಚ್ಚುವಂತಾಗಿದೆ.

ಸೈಬರ್ ಅಪರಾಧ ನಡೆದ ಕೆಲವು ಕಡೆಗಳಲ್ಲಿಸಂತ್ರಸ್ತರು ಕಳೆದುಕೊಂಡ ಹಣವನ್ನು ಮರಳಿ ಪಡೆಯಲು ಹೆಚ್ಚಿನ ಅವಕಾಶಗಳಿದ್ದು, ಶೀಘ್ರ ದೂರು ದಾಖಲಿಸಿ ತನಿಖೆ ಆರಂಭಿಸಿದರೆ ವಂಚಕರ ಬ್ಯಾಂಕ್ ಖಾತೆಗಳನ್ನು ಫ್ರೀಜ್ ಮಾಡಿ ಸಂತ್ರಸ್ತರಿಗೆ ಮರಳಿ ಹಣ ಕೊಡಿಸಲು ಅವಕಾಶವಿರುತ್ತದೆ. ಆದರೆ, ದೂರು ದಾಖಲಿಸಿಕೊಳ್ಳದೆ ಸಂತ್ರಸ್ತರನ್ನು ಅಲೆದಾಡಿಸುವುದರಿಂದ ಅವಕಾಶ ಕೈತಪ್ಪುತ್ತದೆ ಎನ್ನುತ್ತಾರೆ ತಜ್ಞರು.

ರಾಜ್ಯದಲ್ಲಿವೆ 46 ಸೈಬರ್ ಠಾಣೆಗಳು:

ರಾಜ್ಯಾದ್ಯಂತ 900ಕ್ಕೂ ಹೆಚ್ಚಿನ ಪೊಲೀಸ್ ಠಾಣೆಗಳಿದ್ದು, ಸೈಬರ್ ಅಪರಾಧ, ಆರ್ಥಿಕ ಅಪರಾಧಗಳು ಮತ್ತು ಮಾದಕ ದ್ರವ್ಯ ಅಪರಾಧಗಳ(ಸಿಇಎನ್ ) ತನಿಖೆಗಾಗಿಯೇ 46 ಠಾಣೆಗಳಿವೆ. ಸಾಮಾನ್ಯ ಠಾಣೆಗಳಲ್ಲಿಯೂ ಸೈಬರ್ ಪ್ರಕರಣ ದಾಖಲು ಮಾಡಬೇಕೆಂಬ ಪೊಲೀಸ್ ಮಹಾನಿರ್ದೇಶಕರ ಆದೇಶ ಪಾಲನೆಯಾಗುತ್ತಿಲ್ಲ.

ಬಾಕ್ಸ್

ಠಾಣೆಗಳಲ್ಲಿಸೈಬರ್ ನುರಿತರ ಕೊರತೆ

ಸೈಬರ್ ಪ್ರಕರಣಗಳನ್ನು ಪತ್ತೆ ಹಚ್ಚಲು ಸಾಮಾನ್ಯ ಠಾಣೆಗಳಲ್ಲಿನುರಿತ ಸಿಬ್ಬಂದಿ ಕೊರತೆ ಇದೆ. ಸಾಮಾನ್ಯ ಠಾಣೆಯ ಹೆಚ್ಚಿನ ಸಂಖ್ಯೆಯ ಸಿಬ್ಬಂದಿಗೆ ಡಿಜಿಟಲ್ ವಂಚಕರು ಬಳಸುವ ಐಪಿ ಅಡ್ರೆಸ್ , ವರ್ಚುವಲ್ ಐಡಿಗಳನ್ನು ಪತ್ತೆ ಮಾಡುವ ಬಗ್ಗೆ ಮಾಹಿತಿಯಿಲ್ಲ. ದೂರು ಪಡೆದರೆ ಎಲ್ಲಿತನಿಖೆ ಮಾಡಲಾಗದೆ ಕೇಸ್ ಬಾಕಿ ಉಳಿಯುತ್ತದೋ ಎಂಬ ಕಾರಣದಿಂದ ಪೊಲೀಸರು ದೂರು ದಾಖಲಿಸಿಕೊಳ್ಳಲು ಹಿಂಜರಿಯುತ್ತಿದ್ದಾರೆ ಎನ್ನಲಾಗುತ್ತಿದೆ.

ಬಾಕ್ಸ್

ಸಂತ್ರಸ್ತರ ಅಲೆದಾಟ

ಸೈಬರ್ ವಂಚನೆಗೆ ಒಳಗಾದವರು ಹತ್ತಿರದ ಸಾಮಾನ್ಯ ಪೊಲೀಸ್ ಠಾಣೆಗೆ ಹೋದರೆ, ಅಲ್ಲಿನ ಸಿಬ್ಬಂದಿ ಸೈಬರ್ ಠಾಣೆಗೆ ಹೋದರೆ ಶೀಘ್ರ ಪರಿಹಾರ ದೊರೆಯುತ್ತದೆ ಎಂದು ಹೇಳುತ್ತಿದ್ದಾರೆ. ಬೆಂಗಳೂರು ಹೊರತುಪಡಿಸಿ ಉಳಿದೆಲ್ಲಕಡೆಗಳಲ್ಲಿಜಿಲ್ಲಾಕೇಂದ್ರದಲ್ಲಿಸೈಬರ್ ಪೊಲೀಸ್ ಠಾಣೆಗಳಿದ್ದು, ದೂರದ ಊರುಗಳ ಜನರು ದೂರು ದಾಖಲಿಸಲು ಜಿಲ್ಲಾಕೇಂದ್ರಗಳಿಗೆ ಬರುವಂತಾಗಿದೆ.

ಕೋಟ್

ಸಾಮಾನ್ಯ ಠಾಣೆಗಳಲ್ಲಿಸೈಬರ್ ಅಪರಾಧಗಳ ಕುರಿತು ಹೆಚ್ಚಿನ ಜ್ಞಾನವಿರುವ ಸಿಬ್ಬಂದಿ ಕೊರತೆಯಿದೆ. ಹೀಗಾಗಿ ಸಂತ್ರಸ್ತರು ಸೈಬರ್ ಠಾಣೆಗಳಲ್ಲಿದೂರು ದಾಖಲಿಸುತ್ತಿದ್ದು, ಪ್ರತಿ ಠಾಣೆಯಲ್ಲಿಸೈಬರ್ ವಂಚನೆ ಪ್ರಕರಣ ದಾಖಲಿಸುವಂತೆ ಸೂಚನೆ ನೀಡಲಾಗುವುದು.

-ಕನ್ನಿಕಾ ಸಿಕ್ರಿವಾಲ್ , ಎಸ್ಪಿ, ಕೋಲಾರ

ಫೋಟೋ ಕ್ಯಾಪ್ಷನ್

20ಕೆಎಲ್ ಆರ್ ಎಸ್ ಕೆ1: ಫೈಲ್ ಫೋಟೋ

20ಕೆಎಲ್ ಆರ್ ಎಸ್ ಕೆ2: ಕನ್ನಿಕಾ ಸಿಕ್ರಿವಾಲ್