ಬೃಹತ್ ಆರೋಗ್ಯ ಉಚಿತ ತಪಾಸಣಾ ಶಿಬಿರ

Contributed bysidduswami25@gmail.com|Vijaya Karnataka
mass free health check up camp successfully conducted in basavakalyan district
ಚಿತ್ರ : (25-ಸೇಡಂಜುಲೈ-01)

ಸೇಡಂ ತಾಲೂಕಿನ ಕೊಡ್ಲಾಗ್ರಾಮದಲ್ಲಿಲಯನ್ಸ್ ಕ್ಲಬ್ , ಸೇಡಂ ಹಾಗೂ ಶ್ರೀ ಶಂಭುಲಿಂಗೇಶ್ವರ ಶಿಕ್ಷಣ ಟ್ರಸ್ಟ್ ಕೊಡ್ಲಾಇವರ ಜಂಟಿ ಆಶ್ರಯದಲ್ಲಿಆರೋಗ್ಯ ಉಚಿತ ತಪಾಸಣೆ ನಡೆಯಿತು.
ಬೃಹತ್ ಆರೋಗ್ಯ ಉಚಿತ ತಪಾಸಣಾ ಶಿಬಿರ

* 450ಕ್ಕೂ ಹೆಚ್ಚು ಜನರಿಗೆ ಆರೋಗ್ಯ ತಪಾಸಣೆ

ವಿಕ ಸುದ್ದಿಲೋಕ ಸೇಡಂ

ಗ್ರಾಮೀಣ ಪ್ರದೇಶದಲ್ಲಿಶಿಕ್ಷಣದ ಜತೆಗೆ ಸಾಮಾಜಿಕ ಕಾಳಜಿ ಮತ್ತು ಆರೋಗ್ಯ ಜಾಗೃತಿ ತರುವುದು ಅತ್ಯಂತ ಮುಖ್ಯವಾಗಿದೆ ಎಂದು ಸೇಡಂ ತಾಲೂಕು ವಕೀಲರ ಸಂಘದ ಅಧ್ಯಕ್ಷ ಶರಣಬಸಪ್ಪ ಹಾಗರಗಿ ತಿಳಿಸಿದರು.

ತಾಲೂಕಿನ ಕೊಡ್ಲಾಗ್ರಾಮದಲ್ಲಿಲಯನ್ಸ್ ಕ್ಲಬ್ ಸೇಡಂ ಹಾಗೂ ಶ್ರೀ ಶಂಭುಲಿಂಗೇಶ್ವರ ಶಿಕ್ಷಣ ಟ್ರಸ್ಟ್ ಕೊಡ್ಲಾಇವರ ಸಂಯುಕ್ತಾಶ್ರಯದಲ್ಲಿಹಮ್ಮಿಕೊಂಡಿದ್ದ ಉಚಿತ ಆರೋಗ್ಯ, ಮೂಳೆ, ಕಣ್ಣು, ಕ್ಯಾನ್ಸರ್ ಹಾಗೂ ಮಕ್ಕಳ ಆರೋಗ್ಯ ತಪಾಸಣಾ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು. ಗ್ರಾಮೀಣ ಭಾಗದ ಜನರಿಗೆ ಇಂತಹ ಉಚಿತ ಆರೋಗ್ಯ ಶಿಬಿರಗಳು ತಲುಪುತ್ತಿರುವುದು ಅತ್ಯಂತ ಶ್ಲಾಘನೀಯ ಕಾರ್ಯ ಎಂದು ಹೇಳಿದರು.

ನ್ಯಾಯವಾದಿ ಹೇಮರೆಡ್ಡಿ ಪಾಟೀಲ್ ಕಲಕಂಬ ಮಾತನಾಡಿದರು. ಕಲಬುರಗಿ ಮತ್ತು ಯಾದಗಿರಿಯ ಪ್ರಸಿದ್ಧ ಯುನೈಟೆಡ್ ಆಸ್ಪತ್ರೆಯ ನುರಿತ ತಜ್ಞ ವೈದ್ಯರು ಈ ಶಿಬಿರದಲ್ಲಿಸಾರ್ವಜನಿಕರನ್ನು ತಪಾಸಣೆ ನಡೆಸಿದರು. ಇಂಡಿಯನ್ ಕ್ಯಾನ್ಸರ್ ಸೊಸೈಟಿಯ ಮುಖ್ಯಸ್ಥ ಡಾ.ಗುರುರಾಜ ಕುಲಕರ್ಣಿ, ಮಕ್ಕಳ ತಜ್ಞ ಡಾ.ವೆಂಕಟರಾಯರೆಡ್ಡಿ ಪಾಟೀಲ್ , ಎಲುಬು ಮತ್ತು ಮೂಳೆ ತಜ್ಞ ಡಾ.ರಾಜವರ್ಧನ್ ಕೊಲ್ಲೂರು, ನೇತ್ರ ತಜ್ಞ ಡಾ.ಪ್ರಮೋದ ಕುಮಾರ, ಕೊಡ್ಲಾಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಶ್ವೇತಾ ರೋಗಿಗಳನ್ನು ತಪಾಸಣೆ ಮಾಡಿದರು.

ಈ ಬೃಹತ್ ಶಿಬಿರದಲ್ಲಿ450ಕ್ಕೂ ಹೆಚ್ಚು ಗ್ರಾಮೀಣರು ಆರೋಗ್ಯ ಉಚಿತ ತಪಾಸಣೆ ಹಾಗೂ ಔಷಧೋಪಚಾರದ ಪ್ರಯೋಜನ ಪಡೆದುಕೊಂಡರು.

ಶಂಭುಲಿಂಗೇಶ್ವರ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಶಂಭುರೆಡ್ಡಿ ಪಾಟೀಲ್ , ಲಯನ್ಸ್ ಕ್ಲಬ್ ಅಧ್ಯಕ್ಷ ಆದಿತ್ಯ ಪಾಟೀಲ್ , ಕಾರ್ಯದರ್ಶಿ ಚಂದ್ರಶೇಖರರೆಡ್ಡಿ ಪಾಟೀಲ್ , ಸಂಸ್ಥೆಯ ಗೌರವ ಅಧ್ಯಕ್ಷ ವೀರಣ್ಣ ಸಾಹು ತಂಬಾಕೆ, ಖಜಾಂಚಿ ಶರಣಯ್ಯಸ್ವಾಮಿ ಖಾನಾಪುರ, ಉಪಾಧ್ಯಕ್ಷ ಶರಣರೆಡ್ಡಿ ಆರುಕೋಟಿ, ಕಾರ್ಯದರ್ಶಿ ಓಂಪ್ರಕಾಶ ಮದ್ನಿ, ಸದಸ್ಯ ಬಸವರಾಜ ಧರ್ಮನ್ , ಬಸಣ್ಣಗೌಡ ಮದ್ನಿ ಹಾಗೂ ಶಾಲಾ ಕಾಲೇಜುಗಳ ಸಿಬ್ಬಂದಿ ಇತರರಿದ್ದರು. ಶಾಲೆಯ ಮುಖ್ಯಗುರು ಶಿವಲಿಂಗಯ್ಯ ಗಚ್ಚಿನಮಠ ಪ್ರಾಸ್ತವಿಕ ಮಾತನಾಡಿದರು. ಸಹ ಶಿಕ್ಷಕ ಸಾಹೇಬರೆಡ್ಡಿ ದೇವನೂರ ನಿರೂಪಿಸಿದರು. ಪ್ರಾಚಾರ್ಯ ಅನಂತರೆಡ್ಡಿ ಗೌಡನಹಳ್ಳಿ ಸ್ವಾಗತಿಸಿದರು. ಆಡಳಿತ ಅಧಿಕಾರಿ ಕಾಶಿನಾಥ ಮುಷ್ಠಿಗೇರ ವಂದಿಸಿದರು.