ಸಿ.ಟಿ.ರವಿ ಅಲ್ಲಓಟಿ ರವಿ

Contributed byskchoudhari121@gmail.com|Vijaya Karnataka
protests against ct ravi in reference to neet
25ಎಎಫ್ ಝಡ್ 1 ಚಿತ್ರ: ಪಪ್ಪು ಪಟೇಲ್

* ಕುಡಿದ ನಶೆಯಲ್ಲಿಪ್ರಚೋದನಕಾರಿ ಹೇಳಿಕೆ ನೀಡಿದ್ದಾರೆ | ಮುಲ್ಲಾಗಳ ಇತಿಹಾಸ ತಿಳಿಸುತ್ತೇನೆ ಬನ್ನಿ | ಕೆಪಿಸಿಸಿ ಸದಸ್ಯ ಪಪ್ಪು ಪಟೇಲ್ ಆಕ್ರೋಶ
ಸಿ.ಟಿ.ರವಿ ಅಲ್ಲಓಟಿ ರವಿ

ಅಫಜಲಪುರ: ಚಿಕ್ಕಮಗಳೂರಿನಲ್ಲಿ‘ಯೂತ್ ಫಾರ್ ನೇಷನ್ ’ ಆಯೋಜಿಸಿದ್ದ ಪ್ರತಿಭಟನಾ ಸಭೆಯಲ್ಲಿಮುಸ್ಲಿಂ ಸಮುದಾಯವನ್ನು ಉದ್ದೇಶಿಸಿ ನೀಟ್ ಪರೀಕ್ಷೆಗೂ ಮುಲ್ಲಾಗಳಿಗೂ ಏನು ಸಂಬಂಧ? ಅವರ ಎದೆ ಸೀಳಿದರೆ ಮೂರು ಅಕ್ಷರವೂ ಇಲ್ಲಎಂದು ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಕುಡಿದ ಮತ್ತಿನಲ್ಲಿಈ ಪ್ರಚೋದನಕಾರಿ ಹೇಳಿಕೆ ನೀಡಿದ್ದಾರೆ ಎಂದು ಕೆಪಿಸಿಸಿ ಸದಸ್ಯ ಪಪ್ಪು ಪಟೇಲ್ ವ್ಯಂಗ್ಯವಾಡಿದ್ದಾರೆ.

ಈ ಕುರಿತು ಸುದ್ದಿಗೋಷ್ಠಿಯಲ್ಲಿಮಾತನಾಡಿದ ಅವರು, ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಹೆಸರು ಸರಿಯಿಲ್ಲ, ಆತನಿಗೆ ಓಟಿ ರವಿ ಎಂದು ನಾಮಕರಣ ಮಾಡಬೇಕಾಗಿದೆ. ಕುಡಿದ ಮತ್ತಿನಲ್ಲಿಪ್ರಚೋದನಕಾರಿ ಹೇಳಿಕೆ ಕೊಡುವುದೇ ಚಾಳಿಯಾಗಿದೆ. ಪದೇಪದೆ ಮುಸ್ಲಿಂ ಸಮುದಾಯಕ್ಕೆ ಗುರಿಯಾಗಿಸಿ ಅವಹೇಳನಕಾರಿ ಹೇಳಿಕೆ ಕೊಡುವುದರಿಂದ ದೊಡ್ಡಮಟ್ಟದ ನಾಯಕನಾಗಿ ಬೆಳೆಯುವುದೆಂಬ ಹುಚ್ಚು ಕಲ್ಪನೆಯಿಂದ ಈ ರೀತಿ ಅಸಂವಿಧಾನಿಕ ಹೇಳಿಕೆ ಕೊಡುತ್ತಿದ್ದಾರೆ. ಹೀಗಾಗಿ ಮುಸ್ಲಿಂ ಸಮುದಾಯದಿಂದ ಸಿ.ಟಿ.ರವಿಗೆ ಸಾರಾಯಿ ಕುಡಿಯುವುದನ್ನು ಬಿಡಿಸಲು ಆಸ್ಪತ್ರೆಗೆ ದಾಖಲಿಸಬೇಕೆಂದು ತೀರ್ಮಾನ ಕೈಗೊಂಡಿದ್ದೇವೆ. ಇಡೀ ದೇಶಕ್ಕೆ ಮುಲ್ಲಾಗಳ ಕೊಡುಗೆ ಏನೆಂದು ಗೊತ್ತಿದೆ. ಇನೊಂದು ಬಾರಿ ಈ ರೀತಿ ಹೇಳಿಕೆ ಕೊಟ್ಟರೆ ಬಾಯಿಗೆ ಸಗಣಿ ಹಾಕಬೇಕಾಗುತ್ತದೆ ಎಂದು ಎಚ್ಚರಿಸಿದರು.

=========

25ಎಎಫ್ ಝಡ್ 2 ಚಿತ್ರ: ಮತೀನ ಪಟೇಲ್

* ಜಿಪಂ ಮಾಜಿ ಸದಸ್ಯ ಮತೀನ ಪಟೇಲ್ ಖಂಡನೆ | ಸಿ.ಟಿ.ರವಿಗೆ ಹುಚ್ಚು ಹಿಡಿದಿದೆ

ಸಿ.ಟಿ.ರವಿಗೆ ತಿಮ್ಮೇಗೌಡ ಏನು ಸಂಬಂಧ?

ಅಫಜಲಪುರ: ನೀಟ್ ಪರೀಕ್ಷೆಗೂ ಹಾಗೂ ಮುಲ್ಲಾಗಳಿಗೂ ಏನು ಸಂಬಂಧ? ಎಂದು ಕೇಳುತ್ತಿರುವ ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿಗೂ ತಿಮ್ಮೇಗೌಡಗೂ ಏನು ಸಂಬಂಧ ಎಂದು ಜಿಪಂ ಮಾಜಿ ಸದಸ್ಯ ಮತೀನ ಪಟೇಲ್ ಪ್ರಶ್ನಿಸಿದ್ದಾರೆ.

ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜಕೀಯ ಲಾಭಕ್ಕಾಗಿ ಪದೇಪದೆ ಮುಸ್ಲಿಂ ಸಮುದಾಯವನ್ನು ಹೀಯಾಳಿಸಿ ಪ್ರಚೋದನಕಾರಿ ಹೇಳಿಕೆ ಕೊಡುವುದೇ ಸಿ.ಟಿ.ರವಿ ಕೆಲಸವಾಗಿದೆ. ಜಾತ್ಯಾತೀತ ದೇಶವಾಗಿರುವ ಭಾರತದಲ್ಲಿಇತ್ತೀಚಿಗೆ ಆರ್ ಎಸ್ ಎಸ್ ಮತ್ತು ಬಿಜೆಪಿಯವರು ದೇಶವನ್ನು ಒಡೆಯುವ ಹುನ್ನಾರದಿಂದ ಅಸಂವಿಧಾನಿಕ ಹೇಳಿಕೆಗಳನ್ನು ಕೊಡುತ್ತಿದ್ದಾರೆ. ದೇಶದಲ್ಲಿಲಕ್ಷಾಂತರ ಮುಸ್ಲಿಂ ಮಕ್ಕಳು ಕೂಡ ನೀಟ್ ಪರೀಕ್ಷೆ ಬರೆದಿರುವುದು ಸಿ.ಟಿ.ರವಿ ಕಣ್ಣಿಗೆ ಕಾಣಿಸುತ್ತಿಲ್ಲಎಂದು ಕಾಣುತ್ತೆ, ದೆಹಲಿಯಲ್ಲಿನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ಖಂಡಿಸಿ ಲಕ್ಷಾಂತರ ಮಕ್ಕಳು ಪ್ರತಿಭಟನೆ ಮಾಡುತ್ತಿದ್ದಾರೆ. ಈ ಬಗ್ಗೆ ಮೊದಲು ಬಿಜೆಪಿಯವರು ಮಾತನಾಡಲಿ, ಅದು ಬಿಟ್ಟು ಪ್ರತಿಭಟನೆ ಮಾಡುತ್ತಿರುವ ವಿದ್ಯಾರ್ಥಿಗಳ ಮೇಲೆ ಲಾಠಿ ಚಾಜ್ ರ್ ಮಾಡುತ್ತಿರುವುದು ಖಂಡನೀಯವಾಗಿದೆ ಎಂದಿದ್ದಾರೆ.