ದೋಷರಹಿತ, ಗುಣಮಟ್ಟದ ಎಸ್ ಐಆರ್ ಸಿದ್ಧಪಡಿಸಿ ಎಸ್ ಐಆರ್ ಕಾರ್ಯಗಳ ಪ್ರಗತಿ ಪರಿಶೀಲಿಸಿ ರಾಜ್ಯದ ಮುಖ್ಯ ಚುನಾವಣಾಧಿಕಾರಿ ವಿ.ಅನ್ಬುಕುಮಾರ್

Contributed byajitha.m@timesofindia.com|Vijaya Karnataka
state election chiefs order to prepare flawless quality voter list
ವಿಕ ಸುದ್ದಿಲೋಕ ಉಡುಪಿ

‘‘ಪ್ರಜಾಪ್ರಭುತ್ವದ ಅಡಿಪಾಯ ಭದ್ರಪಡಿಸುವ ನಿಟ್ಟಿನಲ್ಲಿಚುನಾವಣಾ ಆಯೋಗ ಕೈಗೊಂಡಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ ಕಾರ್ಯದಲ್ಲಿದೋಷರಹಿತ ಹಾಗೂ ಗುಣಮಟ್ಟದ ಮತದಾರರ ಪಟ್ಟಿ ಸಿದ್ಧಪಡಿಸುವ ಕಾರ್ಯವನ್ನು ಯಾವುದೇ ಗೊಂದಲಗಳಿಗೆ ಆಸ್ಪದ ನೀಡದಂತೆ ನಿರ್ವಹಿಸಿ,’’ ಎಂದು ರಾಜ್ಯ ಮುಖ್ಯ ಚುನಾವಣಾಧಿಕಾರಿ ವಿ.ಅನ್ಬುಕುಮಾರ್ ಸೂಚಿಸಿದ್ದಾರೆ.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿಶನಿವಾರ ನಡೆದ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ ಎಸ್ ಐಆರ್ ಕಾರ್ಯಗಳ ಪ್ರಗತಿ ಪರಿಶೀಲಿಸಿ ಮಾತನಾಡಿದರು.

‘‘ರಾಜ್ಯದಲ್ಲಿನಡೆಯುತ್ತಿರುವ ಎಸ್ ಐಆರ್ ಮನೆ ಮನೆ ಸಮೀಕ್ಷೆಯ ನಮೂನೆಗಳಲ್ಲಿ2002ರ ಮತದಾರರ ಪಟ್ಟಿಯಲ್ಲಿಮ್ಯಾಪಿಂಗ್ ಆಗದವರು ವೈಯಕ್ತಿಕ ವಿವರಗಳನ್ನು ಎನ್ಯುಮರೇಶನ್ ಫಾಮ್ ರ್ ನ ಕೊನೆಯ ಕಾಲಂನಲ್ಲಿವಿವರಗಳನ್ನು ಭರ್ತಿ ಮಾಡಿ, ಬಿಎಲ್ ಒಗಳಿಗೆ ನೀಡಬಹುದು. ಒಂದೊಮ್ಮೆ ಬಿಎಲ್ ಒಗಳು ಮನೆ ಭೇಟಿ ನೀಡಿದ ಸಂದರ್ಭ ಮತದಾರರು ಮನೆಯಲ್ಲಿಲ್ಲದಿದ್ದಲ್ಲಿಅವರ ಪರವಾಗಿ ಕುಟುಂಬದ ಯಾವುದೇ ವಯಸ್ಕರು ಸಹಿ ಹಾಕಿ ಗಣತಿ ನಮೂನೆಗಳನ್ನು ಬಿಎಲ್ ಒಗಳಿಗೆ ನೀಡಬಹುದು,’’ ಎಂದರು.

ಉಡುಪಿ ಜಿಲ್ಲೆಯ ಎಲ್ಲವಿಧಾನಸಭೆ ಕ್ಷೇತ್ರಗಳಲ್ಲಿಮತದಾರರಿಂದ ಪಡೆದ ಎನ್ಯುಮರೇಶನ್ ಫಾರಂಗಳ ಡಿಜಿಟಲೀಕರಣ ಕಾರ್ಯದಲ್ಲಿಉಡುಪಿ ಜಿಲ್ಲೆರಾಜ್ಯದಲ್ಲಿಪ್ರಥಮ ಸ್ಥಾನದಲ್ಲಿದ್ದು, ಮುಖ್ಯ ಚುನಾವಣಾಧಿಕಾರಿ ಶ್ಲಾಘಿಸಿದರು.

ಜಿಲ್ಲಾಧಿಕಾರಿ ಸ್ವರೂಪಾ ಟಿ.ಕೆ. ಮಾತನಾಡಿ, ‘‘ಜಿಲ್ಲೆಯಲ್ಲಿವಿಶೇಷ ಮತದಾರರ ಪಟ್ಟಿ ಪರಿಷ್ಕರಣೆ ಪ್ರಕ್ರಿಯೆ ವ್ಯವಸ್ಥಿತವಾಗಿ ನಡೆಯುತ್ತಿದ್ದು, ಜಿಲ್ಲೆಯಲ್ಲಿಬೂತ್ ಮಟ್ಟದ ಅಧಿಕಾರಿಗಳು ಮನೆ ಮನೆಗೆ ಭೇಟಿ ನೀಡಿ ಗಣತಿ ನಮೂನೆಗಳನ್ನು ವಿತರಿಸುವ ಪ್ರಕ್ರಿಯೆಯಲ್ಲಿಶೇ.100 ಪ್ರಗತಿ ಸಾಧಿಸಿದ್ದಾರೆ. ಜು.25ರ ಸಂಜೆ 4 ಗಂಟೆವರೆಗೆ ಒಟ್ಟು 9,40,340 ಗಣತಿ ನಮೂನೆಯನ್ನು ಡಿಜಿಟಲೀಕರಣಗೊಳಿಸಿ ಶೇ.88.39ರಷ್ಟು ಪ್ರಗತಿಯಾಗಿದೆ. 14,835 ಮತದಾರರು ಮೃತಪಟ್ಟಿರುವುದು ಮನೆ ಭೇಟಿ ವೇಳೆ ಕಂಡುಬಂದಿದೆ. 14,426 ಮತದಾರರು ಕಾಯಂ ಆಗಿ ಬೇರೆ ಕಡೆಗೆ ವರ್ಗಾವಣೆಗೊಂಡಿದ್ದು, 5,225 ಮತದಾರರು ತಮ್ಮ ದಾಖಲಾತಿ ಮಾಡಿದ್ದಾರೆ ಎಂದು ಮಾಹಿತಿ ನೀಡಿದರು.

ಇದೇ ಸಂದರ್ಭ ಗಣತಿ ನಮೂನೆಗಳ ಡಿಜಿಟಲೀಕರಣ ಕಾರ್ಯವನ್ನು ಪ್ರಥಮವಾಗಿ ಶೇ.100ರಷ್ಟು ಪೂರ್ಣಗೊಳಿಸಿದ 118-ಬೈಂದೂರು ವಿಧಾನಸಭೆ ಕ್ಷೇತ್ರದ ಮತಗಟ್ಟೆ ಸಂಖ್ಯೆ 125ರ ಬಿಎಲ್ ಒ ಪವಿತ್ರಾ ಪೂಜಾರಿ, 119-ಕುಂದಾಪುರ ವಿಧಾನಸಭೆ ಕ್ಷೇತ್ರದ ಮತಗಟ್ಟೆ ಸಂಖ್ಯೆ 135ರ ಲಕ್ಷ್ಮೇ ಶೆಡ್ತಿ, 120-ಉಡುಪಿ ವಿಧಾನಸಭೆ ಕ್ಷೇತ್ರದ ಮತಗಟ್ಟೆ ಸಂಖ್ಯೆ 33ರ ಪ್ರಸನ್ನಿ, 121-ಕಾಪು ವಿಧಾನಸಭೆ ಕ್ಷೇತ್ರದ ಮತಗಟ್ಟೆ ಸಂಖ್ಯೆ 190ರ ಹೇಮಾ ಪೂಜಾರ್ತಿ, 122-ಕಾರ್ಕಳ ವಿಧಾನಸಭೆ ಕ್ಷೇತ್ರದ ಮತಗಟ್ಟೆ ಸಂಖ್ಯೆ 41ರ ಜ್ಯೋತಿರಾವ್ ಸೇರ್ವೆಗಾರ್ ಅವರಿಗೆ ಅಭಿನಂದನಾ ಪತ್ರ ನೀಡಿ ಗೌರವಿಸಲಾಯಿತು.

ಜಿಪಂ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಪ್ರತೀಕ್ ಬಾಯಲ್ , ಹೆಚ್ಚುವರಿ ಜಿಲ್ಲಾಧಿಕಾರಿ ಅಬೀದ್ ಗದ್ಯಾಳ್ , ಸಹಾಯಕ ಕಮಿಷನರ್ ರಶ್ಮಿ ಉಪಸ್ಥಿತರಿದ್ದರು.

ಫೋಟೊ: 25ಎಎ ಡಿಸಿ