ಮೇಷ : ನಂಬಿಕಸ್ಥರಿಂದ ಆದಂತಹ ಮೋಸವನ್ನು ಮರೆಯಲು, ಅದರ ನಷ್ಟವನ್ನು ತಡೆದುಕೊಳ್ಳಲು ಕಷ್ಟವಾಗುತ್ತದೆ. ಆದರೂ ಜಯದ ಹಾದಿಯಲ್ಲಿಒಂದು ಹೆಜ್ಜೆ ಮುಂದು ಸಾಗುವಿರಿ. ನಿಮ್ಮ ಪ್ರೀತಿ ವ್ಯಕ್ತಪಡಿಸಲು ಇದು ಸುದಿನ.
(ಶುಭ ಸಂಖ್ಯೆ : 2, ಅದೃಷ್ಟ ಬಣ್ಣ : ಬಿಳಿ)
--------------------
ವೃಷಭ : ಆಹಾರ ನಿಯಮದಿಂದಾಗಿ ಆರೋಗ್ಯದಲ್ಲಿಸುಧಾರಣೆ ಕಂಡುಬರುವುದು. ಸ್ವಲ್ಪ ಪರಿಶ್ರಮ ಕೂಡ ಕಾರ್ಯಸಾಧನೆಯಲ್ಲಿಹೆಚ್ಚಿನ ಫಲ ನೀಡಲಿದೆ. ಉದ್ಯೋಗ ಆಕಾಂಕ್ಷಿಗಳಿಗೆ ಸುಲಭವಾಗಿ ಉದ್ಯೋಗ ಸಿಗಲಿದೆ.
(ಶುಭ ಸಂಖ್ಯೆ : 6, ಅದೃಷ್ಟ ಬಣ್ಣ : ಗಾಢ ನೀಲಿ)
-----------------------------
ಮಿಥುನ : ನಿಮ್ಮ ಅಭಿವೃದ್ಧಿಗಾಗಿ ಆತ್ಮವಿಶ್ವಾಸ ಬೇಕೇ ಹೊರತು ಅಂಜಿಕೆ ಬೇಡ. ಉದ್ಯೋಗದಲ್ಲಿಸ್ಥಾನ ಬದಲಾವಣೆ ಆಗಿ ಮನಸ್ಸಿಗೆ ನೆಮ್ಮದಿ ಸಿಗಲಿದೆ. ಬ್ಯಾಂಕ್ ನೌಕರರು ವರ್ಗಾವಣೆ ಮಾಡಿಸಿಕೊಳ್ಳುವ ಪ್ರಯತ್ನ ಪಡಬಹುದು.
(ಶುಭ ಸಂಖ್ಯೆ : 4, ಅದೃಷ್ಟ ಬಣ್ಣ : ಕೇಸರಿ)
-------------
ಕಟಕ: ನಿಮ್ಮ ಆರ್ಥಿಕ ಪರಿಸ್ಥಿತಿಯನ್ನು ಅವಲೋಕಿಸಿಕೊಂಡು ಉಳಿತಾಯದ ತೀರ್ಮಾನ ಕೈಗೊಳ್ಳುವುದು ಉತ್ತಮ. ಆಹಾರದ ವಿಚಾರದಲ್ಲಿದಾಕ್ಷಿಣ್ಯ ಪ್ರವೃತ್ತರಾಗಿ ಸಿಕ್ಕಿಕೊಳ್ಳಬೇಡಿ.
(ಶುಭ ಸಂಖ್ಯೆ : 8, ಅದೃಷ್ಟ ಬಣ್ಣ : ಬೂದು)
------------------
ಸಿಂಹ : ಈ ದಿನ ಮೇಲಧಿಕಾರಿಗಳು ಮಾತಿಗೆ ಕಡಿವಾಣ ಹಾಕುವುದು ಲೇಸು. ಯಾವುದಕ್ಕೆ ಪ್ರಾಮುಖ್ಯತೆ ಕೊಡಬೇಕೆಂಬುದು ನಿಮಗೆ ತಿಳಿಯಲಿದೆ. ಸರಕಾರಿ ಕೆಲಸ-ಕಾರ್ಯಗಳು ಬಹಳ ಸುಲಭವಾಗಿ ಕೈಗೂಡುತ್ತವೆ.
(ಶುಭ ಸಂಖ್ಯೆ : 5, ಅದೃಷ್ಟ ಬಣ್ಣ : ಕಪ್ಪು)
-----------------
ಕನ್ಯಾ : ಇಷ್ಟು ದಿನ ನಿಮ್ಮಲ್ಲಿದ್ದ ಅಭದ್ರತೆಯ ಭಾವ ಈ ದಿನ ಬಿಟ್ಟು ಹೋಗಲಿದೆ. ವಿದ್ಯುತ್ ಉಪಕರಣಗಳ ಮಾರಾಟದಿಂದ ಲಾಭ ಪಡೆಯುವಿರಿ. ಕುಟುಂಬದಲ್ಲಿಮಂಗಳಕಾರ್ಯ ನಡೆಯುವ ಮುನ್ಸೂಚನೆ ಸಿಗಲಿದೆ.
(ಶುಭ ಸಂಖ್ಯೆ : 9, ಅದೃಷ್ಟ ಬಣ್ಣ : ನೀಲಿ)
-----------------
ತುಲಾ : ಹಣಕಾಸಿನ ವ್ಯವಹಾರ ನಡೆಸುವವರು ತಮ್ಮ ನೂತನ ಯೋಜನೆಯನ್ನು ವಿಸ್ತರಿಸಬಹುದು. ಸಮಸ್ಯೆಗಳನ್ನು ನಾಜೂಕಾಗಿ ಬಗೆಹರಿಸಿಕೊಳ್ಳಿ. ಯಾರಲ್ಲಿಯೂ ಯಾವ ವಿಚಾರವನ್ನು ಮುಚ್ಚಿಡಬೇಡಿ.
(ಶುಭ ಸಂಖ್ಯೆ : 7, ಅದೃಷ್ಟ ಬಣ್ಣ : ಖಾಕಿ)
-------------------------
ವೃಶ್ಚಿಕ : ನಿಮ್ಮ ಸಂತೋಷಕ್ಕೆ ನಿಮ್ಮ ಹತ್ತಿರದವರಿಂದ ತಡೆ ಉಂಟಾಗಬಹುದು. ಲೇವಾದೇವಿ ವ್ಯವಹಾರದಲ್ಲಿವಿಚಾರಿಸಿ ತೀರ್ಮಾನ ಕೈಗೊಳ್ಳಿ. ಕೈ ಬಿಟ್ಟಿರುವ ಯೋಜನೆಗಳ ಬಗ್ಗೆ ಮತ್ತೆ ಸರಿಯಾಗಿ ಯೋಚಿಸಿ ತೀರ್ಮಾನಕ್ಕೆ ಬನ್ನಿ.
(ಶುಭ ಸಂಖ್ಯೆ : 1, ಅದೃಷ್ಟ ಬಣ್ಣ : ಆಕಾಶ ನೀಲಿ)
---------------------
ಧನು : ವಾಸ್ತವ ಲೋಕದಿಂದ ದೂರಾಗಿ ಭ್ರಮೆಯ ಲೋಕದಲ್ಲಿಬದುಕುತ್ತಿರುವ ನೀವು ಸ್ನೇಹಿತ ವರ್ಗದಿಂದ ಹಿತವಚನ ಕೇಳುವಿರಿ. ಶೀತ ಸಂಬಂಧಿತ ರೋಗ ಕಾಡಬಹುದು. ಅಧ್ಯಾಪಕ ವರ್ಗದವರಿಗೆ ಹೆಚ್ಚಿನ ಕೆಲಸ ಇರುವುದು.
(ಶುಭ ಸಂಖ್ಯೆ : 3, ಅದೃಷ್ಟ ಬಣ್ಣ : ಹಳದಿ)
-------------------
ಮಕರ : ಕೆಲಸ-ಕಾರ್ಯಗಳಲ್ಲಿಕಷ್ಟಗಳು ಎದುರಾಗಬಹುದು. ಹಾಗೆಂದು ಕರ್ತವ್ಯವನ್ನು ನಿರ್ಲಕ್ಷಿಸಬೇಡಿ. ಕುಟುಂಬದಲ್ಲಿಹಿರಿಯರ ಆರೋಗ್ಯ ದಿನದಿಂದ ದಿನಕ್ಕೆ ಉತ್ತಮವಾಗುವುದರಿಂದ ಮನಸ್ಸಿಗೆ ನೆಮ್ಮದಿ ಇರುವುದು.
(ಶುಭ ಸಂಖ್ಯೆ : 4, ಅದೃಷ್ಟ ಬಣ್ಣ : ಹಸಿರು)
---------------------------
ಕುಂಭ : ಕೆಲಸದಲ್ಲಿಅಧಿಕ ಒತ್ತಡ ದೇಹಾಯಾಸ ಕಂಡು ಬಂದು ತಪ್ಪು ನಿರ್ಧಾರ ತೆಗೆದುಕೊಳ್ಳುವಂತಾಗುವುದು. ಎಣ್ಣೆ ಪದಾರ್ಥಗಳನ್ನು ಮಿತವಾಗಿ ಬಳಸಿ. ವಿದ್ಯಾರ್ಥಿಗಳಿಗೆ ಓದಿನಲ್ಲಿಅಪರಿಮಿತ ಆಸಕ್ತಿ ಮೂಡಲಿದೆ.
(ಶುಭ ಸಂಖ್ಯೆ : 8, ಅದೃಷ್ಟ ಬಣ್ಣ : ಖಾಕಿ)
-------------
ಮೀನ : ಕೆಲಸದಲ್ಲಿಉನ್ನತವಾದ ಹುದ್ದೆಯಿಂದ ಹೆಚ್ಚಿನ ಜವಾಬ್ದಾರಿ ಮತ್ತು ಸೌಲಭ್ಯವನ್ನು ಪಡೆಯಬಹುದು. ಕುಟುಂಬದ ಆರ್ಥಿಕ ಆದಾಯ ಸುಧಾರಿಸಲಿದೆ. ಸ್ನೇಹಿತನಿಗೆ ನೀಡಿದ್ದ ಹಳೆ ಬಾಕಿ ಸಂದಾಯವಾಗುವುದು.