ಬೇಲೂರು ರಾಮಮೂರ್ತಿ (ಪು.10)

Contributed byShridevi Ambekallu|Vijaya Karnataka
the greatness and bravery of lord ramachandra
ಶ್ರೀ ರಾಮನ ಕೃಪಾಕಟಾಕ್ಷ

-----------
*ಬೇಲೂರು ರಾಮಮೂರ್ತಿ

ಶ್ರೀರಾಮ ತನ್ನ ಜೀವನದಲ್ಲಿಎಂದೂ ತಾಳ್ಮೆ ಕಳೆದುಕೊಂಡವನಲ್ಲ. ಕೈಕೇಯಿಯಿಂದ ತನಗೆ ವನವಾಸ ಪ್ರಾಪ್ತಿಯಾಯಿತು ಎಂಬ ಸಿಟ್ಟು ಇರಲಿಲ್ಲ, ಸೀತೆಯನ್ನು ಕಾಯ್ದುಕೊಂಡಿರು ಎಂದರೂ ಸೀತೆಯನ್ನು ಒಂಟಿಯಾಗಿ ಬಿಟ್ಟು ಬಂದು ಅಂತಿಮವಾಗಿ ಸೀತಾಪಹರಣಕ್ಕೆ ಕಾರಣನಾದ ತಮ್ಮ ಲಕ್ಷ್ಮಣನನ್ನೂ ದೂಷಿಸಲಿಲ್ಲ. ಯಾರೇ ಆದರೂ ಸೌಜನ್ಯ ಬಿಟ್ಟು ವರ್ತಿಸುತ್ತಿರಲಿಲ್ಲ. ಶ್ರೀರಾಮನ ವನವಾಸದ ಸಮಯದಲ್ಲಿದೋಣಿ ನಡೆಸುವವನೊಬ್ಬ ಮೊದಲು ಶ್ರೀರಾಮನ ಮೇಲೆ ಅನುಮಾನಪಟ್ಟು ನಂತರ ಅವನ ಅನುಗ್ರಹಕ್ಕೇ ಪಾತ್ರನಾದ ಸಂಗತಿಯನ್ನು ತುಳಸೀದಾಸರು ತಮ್ಮ ರಾಮಚರಿತಮಾನಸದಲ್ಲಿಉದಾಹರಿಸಿದ್ದಾರೆ.

ಸೀತಾಪರಹಣವಾದ ಮೇಲೆ ರಾಮಲಕ್ಷತ್ರ್ಮಣರು ಕಾಡಿನಲ್ಲಿಒಟ್ಟಿಗೇ ಅಲೆಯುತ್ತಾ ಇರುತ್ತಾರೆ. ಒಂದು ಕಡೆ ಅವರು ತುಂಬಾ ಆಳವಿದ್ದು ರಭಸದಿಂದ ಹರಿಯುತ್ತಿದ್ದ ನದಿ ದಾಟಬೇಕಾಗುತ್ತದೆ. ಅಲ್ಲಿದೋಣಿಯೂ, ದೋಣಿ ನಡೆಸುವವನೂ ಇದ್ದರು. ರಾಮ ಲಕ್ಷ ್ಮಣನಿಗೆ ದೋಣಿ ನಡೆಸುವವನನ್ನು ‘ನಮ್ಮನ್ನು ಆಚೆ ದಡಕ್ಕೆ ಬಿಡುತ್ತಾನಾ ಕೇಳಿ ಬಾ’ ಎಂದು ಕಳಿಸಿದ. ಲಕ್ಷತ್ರ್ಮಣ ಹೋಗಿ ಕೇಳಿದಾಗ ದೋಣಿ ನಡೆಸುವವನು ಲಕ್ಷತ್ರ್ಮಣನನ್ನೂ ರಾಮನನ್ನೂ ನೋಡಿ ‘ಸಾಧ್ಯವಿಲ್ಲ’ ಎಂದ. ಲಕ್ಷತ್ರ್ಮಣ ಎಷ್ಟು ಕೇಳಿಕೊಂಡರೂ, ತನ್ನ ಕೈಬೆರಳಿನಲ್ಲಿರುವ ಉಂಗುರವನ್ನು ಕೊಡುತ್ತೇನೆಂದರೂ ಅವನು ಆಗುವುದಿಲ್ಲಎಂದೇ ಹೇಳಿದ. ಲಕ್ಷತ್ರ್ಮಣ ‘ಯಾಕೆ ಆಗಲ್ಲ, ನೀನು ದೋಣಿ ನಡೆಸುವವನು ತಾನೇ, ಇಲ್ಲಿಸುಮ್ಮನೇ ಕೂತಿದ್ದೀಯ, ಆದರೂ ಯಾಕೆ ಆಗಲ್ಲಅಂತೀಯ’ ಎಂದು ಕೇಳಿದ. ಆಗ ದೋಣಿ ನಡೆಸುವವನು ಒಮ್ಮೆ ಲಕ್ಷತ್ರ್ಮಣನನ್ನೂ, ನಂತರ ತುಸು ದೂರದಲ್ಲಿದ್ದ ಶ್ರೀರಾಮನನ್ನೂ ನೋಡಿ ‘ನಿಮ್ಮನ್ನು ಬೇಕಾದರೆ ಆ ಕಡೆ ದಡಕ್ಕೆ ಬಿಡುತ್ತೇನೆ ಆದರೆ ಅವರನ್ನು ನನ್ನ ದೋಣಿ ಹತ್ತಲು ಬಿಡುವುದಿಲ್ಲ’ ಎಂದು ಶ್ರೀರಾಮನನ್ನು ತೋರಿಸಿದ. ಲಕ್ಷತ್ರ್ಮಣನಿಗೆ ಅಚ್ಚರಿಯಾಯಿತು. ‘ಅವರು ಬೇರೆ ಯಾರೂ ಅಲ್ಲ, ನನ್ನ ಅಣ್ಣ, ಅಯೋಧ್ಯೆಯ ದಶರಥ ಮಹಾರಾಜರ ಹಿರಿಯ ಮಗ ಶ್ರೀ ರಾಮಚಂದ್ರ’ ಎಂದ. ದೋಣಿ ನಡೆಸುವವನು ‘ಅದಕ್ಕೇ ನಾನು ಹೇಳುತ್ತಿರುವುದು ಅವರನ್ನು ನನ್ನ ದೋಣಿ ಮುಟ್ಟಲೂ ಬಿಡುವುದಿಲ್ಲ’ ಎಂದ. ಲಕ್ಷತ್ರ್ಮಣನಿಗೆ ಅಚ್ಚರಿಯಾಯಿತು. ದೋಣಿ ನಡೆಸುವವನ ಜೊತೆ ಲಕ್ಷತ್ರ್ಮಣ ಮಾತಾಡುತ್ತಾ ನಿಂತಿದ್ದಾನಲ್ಲಎಂದು ಶ್ರೀರಾಮ ಅಲ್ಲಿಗೆ ಬಂದಾಗ, ಲಕ್ಷತ್ರ್ಮಣ ಎಲ್ಲವಿಚಾರಗಳನ್ನೂ ಅಣ್ಣನಿಗೆ ತಿಳಿಸಿದ.

ದೋಣಿ ನಡೆಸುವವನ ನಡತೆಯಿಂದ ಶ್ರೀರಾಮನಿಗೆ ‘ನಾನು ಅಯೋಧ್ಯೆಯ ಯುವರಾಜ, ಮುಂದೆ ಅಯೋಧ್ಯೆಯ ರಾಜನಾಗುವವನು’ ಎನ್ನುವ ದರ್ಪ ಬರಲಿಲ್ಲ. ಶ್ರೀರಾಮ ದೋಣಿ ನಡೆಸುವವನ ಹತ್ತಿರ ಬಂದು, ‘ಯಾಕಪ್ಪಾ ನನ್ನನ್ನು ದೋಣಿ ಮುಟ್ಟಲೂ ಬಿಡಲ್ಲಅಂತೀಯ. ನಾನು ನಿನಗೆ ಈ ಹಿಂದೆ ಏನಾದರೂ ವಂಚನೆ ಮಾಡಿದ್ದೇನಾ’ ಎಂದು ಕೇಳಿದ.

ಆಗ ದೋಣಿ ನಡೆಸುವವನು ಶ್ರೀರಾಮನಿಗೆ ಕೈ ಮುಗಿದು, ‘ನಾನು ಸಂಸಾರ ಮಾಡಿಕೊಂಡು ಹೆಂಡತಿ ಇಬ್ಬರು ಮಕ್ಕಳೊಂದಿಗೆ ನೆಮ್ಮದಿಯಾಗಿದ್ದೇನೆ. ಬರುವ ಸಂಪಾದನೆಯಲ್ಲಿಹೇಗೋ ನಾಲ್ಕು ಜನರ ಹೊಟ್ಟೆ ತುಂಬುತ್ತಿದೆ. ನಿನ್ನ ಮಾತಿನಂತೆ ನಿನ್ನನ್ನು ನಾನು ದೋಣಿ ಹತ್ತಿಸಿಕೊಳ್ಳುವುದು ತಕ್ಷಣವೇ ನನ್ನ ದೋಣಿ ಹೆಣ್ಣಾಗುವುದು, ನಾನು ಅವಳನ್ನು ಮನೆಗೆ ಕರೆದುಕೊಂಡು ಹೋಗುವುದು, ಅಲ್ಲಿನನ್ನ ಹೆಂಡತಿಗೂ ಇವಳಿಗೂ ಜಗಳ ಆಗುವುದು, ಇದರಿಂದ ನನ್ನ ಸಂಸಾರವೇ ಅತಂತ್ರ ಆಗುವುದು, ನನ್ನ ಜೀವನಕ್ಕೆ ಇರುವ ಒಂದೇ ಭರವಸೆ ಇದರಿಂದ ಹಾಳಾಗುವುದು, ಇವೆಲ್ಲಾತೊಂದರೆ ಯಾಕೆ. ಅದಕ್ಕೇ ನಾನು ಹೇಳಿದ್ದು ನಾನು ನಿನ್ನನ್ನು ನನ್ನ ದೋಣಿ ಮುಟ್ಟಲೂ ಬಿಡುವುದಿಲ್ಲ’ ಎಂದು ವಿವರಿಸಿದ.

ಆಗ ಲಕ್ಷತ್ರ್ಮಣ, ‘ಹಾಗೇನೂ ಆಗುವುದಿಲ್ಲ, ಧೈರ್ಯವಾಗಿರು’ ಎಂದು ಹೇಳಿದ. ಆಗ ದೋಣಿ ನಡೆಸುವವನು, ‘ನಿನ್ನ ಮಾತು ಕೇಳಿದರೆ ನಾನು ಕೆಟ್ಟ ಹಾಗೆ. ಒಂದು ದೊಡ್ಡ ಬಂಡೆಯನ್ನೇ ಹೆಣ್ಣು ಮಾಡಿದ ಪುಣ್ಯಾತ್ಮ ಅವರು,ಅವರ ಸಹವಾಸವೇ ಬೇಡ’ ಎಂದ. ಶ್ರೀರಾಮ ಲಕ್ಷಣರಿಗೆ ಇವನು ಅಹಲ್ಯೆಯ ಶಾಪ ವಿಮೋಚನೆಯ ವಿಚಾರ ಮಾತಾಡುತ್ತಿದ್ದಾನೆ ಅನಿಸಿತು.

ದೋಣಿ ನಡೆಸುವವನ ಆತಂಕ ಅರಿತ ನಂತರ ಲಕ್ಷತ್ರ್ಮಣ ದೋಣಿ ನಡೆಸುವವನ ಹತ್ತಿರ ಹೋಗಿ, ‘ಅದೇ ಬೇರೆ ಸಂಗತಿ, ಇದೇ ಬೇರೆ ಸಂಗತಿ. ನೀನು ಬೇಕಾದರೆ ಪರೀಕ್ಷೆ ಮಾಡು. ಅವರು ದೋಣಿ ಹತ್ತುವ ಮೊದಲು ದೋಣಿ ಮುಟ್ಟಲಿ, ಆಗ ನಿನ್ನ ದೋಣಿ ಹೆಣ್ಣಾಗುವ ಸೂಚನೆ ಕಂಡರೆ ಹಿಂದೆ ಸರಿಯುತ್ತಾರೆ. ಇಲ್ಲದಿದ್ದರೆ ನಿಧಾನವಾಗಿ ಒಂದು ಕಾಲು ದೋಣಿಯೊಳಗೆ ಇಡುತ್ತಾರೆ, ಆಗಲೂ ಬದಲಾವಣೆ ಕಾಣದಿದ್ದರೆ ಇನ್ನೊಂದು ಕಾಲು ಇಡುತ್ತಾರೆ, ನೀನು ಗಾಬರಿ ಆಗಬೇಡ’ ಎಂದು ಸಮಾಧಾನ ಮಾಡಿದ. ದೋಣಿ ನಡೆಸುವವನು ಮನಸಿಲ್ಲದ ಮನಸಿನಿಂದ ಒಪ್ಪಿಕೊಂಡ. ಮೊದಲು ಶ್ರೀರಾಮ ದೋಣಿ ಮುಟ್ಟಿದಾಗಲೂ, ಒಂದೇ ಕಾಲು ಇಟ್ಟಾಗಲೂ, ನಂತರ ಎರಡೂ ಕಾಲು ಇಟ್ಟು ದೋಣಿಯೊಳಗೆ ಕೂತಾಗಲೂ ದೋಣಿ ಹೆಣ್ಣಾಗಲಿಲ್ಲ.

ಲಕ್ಷತ್ರ್ಮಣ ‘ಈಗಲಾದರೂ ನಮ್ಮನ್ನು ಆಚೆ ದಡಕ್ಕೆ ತಲುಪಿಸುವೆಯಾ’ ಎಂದು ಕೇಳಿದ ಮೇಲೆ ದೋಣಿ ನಡೆಸುವವನು ಶ್ರೀರಾಮನ ಕಡೆ ಕುತೂಹಲದಿಂದ ನೋಡಿಕೊಂಡೇ ದೋಣಿ ನಡೆಸಿದ.

ದೋಣಿ ಇಳಿದ ನಂತರ ಲಕ್ಷತ್ರ್ಮಣ ತನ್ನ ಕೈ ಬೆರಳಲ್ಲಿದ್ದ ಉಂಗುರ ತೆಗೆದು ಅವನಿಗೆ ಕೊಡಲು ಹೋದರೆ ದೋಣಿ ನಡೆಸುವವನು ಕಣ್ಣೀರು ಹಾಕುತ್ತಾ ‘ಶ್ರೀರಾಮನ ಕಾಲಿಗೆ ಬಿದ್ದು ಯಾವಾಗ ನಿನ್ನ ಪಾದಸ್ಪರ್ಶದಿಂದಲೇ ನನಗೆ ಎಲ್ಲಯೋಗಗಳೂ ಪ್ರಾಪ್ತಿಯಾಗಿವೆ. ನನಗೆ ಇನ್ನೇನೂ ಬೇಡ ಎನ್ನುವ ಭಾವ ತುಂಬಿದೆ. ಹಿಂದೆ ಇದ್ದ ಆತಂಕ, ಭಯ ಯಾವುದೂ ಇಲ್ಲ. ನೀನು ನನಗೆ ದರ್ಶನ ಕೊಟ್ಟು ನನ್ನನ್ನು ಉದ್ಧಾರ ಮಾಡಿದೆ’ ಎಂದು ನಮಸ್ಕರಿಸಿದ.