ಸಮಾಜಮುಖಿ ನಿಲುವು ಹೊಂದಿದ್ದ ಯುವ ಪತ್ರಕರ್ತ ನಾಗೇಶ ಗಾಣಿಗರು ಗ್ರಾಮೀಣ ಭಾಗದ ಸಮಸ್ಯೆಗಳ ಮೇಲೆ ಸದಾ ಬೆಳಕು ಚೆಲ್ಲುತ್ತಾ ಗ್ರಾಮಾಂತರ ಪ್ರದೇಶದ ಜನಮನದ ನಾಡಿಮಿಡಿತ ಅರಿತಿದ್ದರು. ಪತ್ರಿಕೋದ್ಯಮದ ಜವಬ್ದಾರಿ ಹಾಗೂ ಹೊಣೆಗಾರಿಕೆಯನ್ನು ಪಾಲಿಸುತ್ತಿದ್ದ ಅವರು ವೃತ್ತಿನಿಷ್ಠರಾಗಿಯೇ ಬದುಕಿದವರು. ಗ್ರಾಮೀಣ ಭಾಗದಲ್ಲಿವರದಿಗಾರಿಕೆ ಸವಾಲಾಗಿದ್ದರೂ ಕೂಡ ತನ್ನ ವೈಯಕ್ತಿಕ ನೋವುಗಳನ್ನು ನುಂಗಿಕೊಂಡು ವೃತ್ತಿಗೆ ನ್ಯಾಯ ಒದಗಿಸುವರು. ಅವರ ಕನಸಾಗಿದ್ದ ಮನೆನಿರ್ಮಾಣದ ಉಳಿದ ಕಾಮಗಾರಿಯನ್ನು ಪೂರ್ತಿಗೊಳಿಸುವಲ್ಲಿನಾವೆಲ್ಲರೂ ಸಹಕಾರ ನೀಡೋಣ ಎಂದು ಶಾಸಕ ಗುರುರಾಜ ಗಂಟಿಹೊಳೆ ಹೇಳಿದರು.ಇತ್ತೀಚೆಗೆ ಅಗಲಿದ ಪತ್ರಕರ್ತ ನಾಗೇಶ ಗಾಣಿಗ ನೇರಳಕಟ್ಟೆ ಅವರ ಗೌರವಾರ್ಥವಾಗಿ ಸಿದ್ಧಾಪುರದ ರಂಗನಾಥ ಸಭಾಭವನದಲ್ಲಿಶನಿವಾರ ಸಂಜೆ ಆಯೋಜಿಸಿದ್ದ ಸಾರ್ವಜನಿಕ ಶ್ರದ್ದಾಂಜಲಿ ಸಭೆಯಲ್ಲಿನುಡಿನಮನ ಸಲ್ಲಿಸಿದರು.
ಉಳ್ಳೂರು -74 ಗ್ರಾಮದ ಶ್ರೀ ಬನಶಂಕರಿ ದೇವಸ್ಥಾನದ ಆಡಳಿತ ಧರ್ಮದರ್ಶಿ ಸಂಪಿಗೇಡಿ ಸಂಜೀವ ಶೆಟ್ಟಿ ಮಾತನಾಡಿ, ಪತ್ರಕರ್ತ ನಾಗೇಶ ಗಾಣಿಗರು ಎಲ್ಲರಿಗೂ ಆತ್ಮೀಯರಾಗಿದ್ದರು. ಸಾಕಷ್ಟು ಹೊಣೆಗಾರಿಕೆ ಅವರ ಮೇಲಿತ್ತು. ಆದರೆ ಅವರು ಅದನ್ನೂ ಯಾರೊಂದಿಗೂ ಹಂಚಿಕೊಳ್ಳುತ್ತಿರಲಿಲ್ಲ. ತನ್ನ ಕರ್ತವ್ಯ ಹಾಗೂ ಜವಬ್ದಾರಿಯನ್ನು ಪ್ರಾಮಾಣಿಕವಾಗಿ ನಿಭಾಯಿಸಿ ಅಕಾಲಿಕವಾಗಿ ಅಗಲಿದ್ದಾರೆ. ಅವರ ಸೇವೆ ಸದಾ ಚಿರಸ್ಥಾಯಿ ಎಂದರು.
ಸಿದ್ದಾಪುರ ಸಂಯುಕ್ತ ಜಿಎಸ್ ಬಿ ಸಂಘದ ಅಧ್ಯಕ್ಷ ಡಿ. ಗೋಪಿನಾಥ ಕಾಮತ್ ನುಡಿನಮನ ಸಲ್ಲಿಸಿ ಮಾತನಾಡಿ, ಪತ್ರಕರ್ತನ ಬದ್ದತೆ, ಸೇವಾವೈಖರಿಗೆ ನಾಗೇಶ ಗಾಣಿಗರು ಹೆಸರಾಗಿದ್ದರು. ಸಿದ್ಧಾಪುರ ಭಾಗದ ಅಭಿವೃದ್ಧಿ ಬಗ್ಗೆ ಅವರಲ್ಲಿಸಾಕಷ್ಟು ಕನಸುಗಳಿದ್ದವು. ಅದನ್ನು ಪತ್ರಿಕೆಯಲ್ಲಿಪ್ರಕಟಿಸಿ ಸಂಬಂಧಪಟ್ಟವರ ಗಮನ ಸಳೆಯುವ ಪ್ರಯತ್ನ ಮಾಡುತ್ತಿದ್ದರು ಎಂದರು.
ಕುಂದಾಪುರ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ಗಣೇಶ ಬೀಜಾಡಿ, ನಿವೃತ ಅಧ್ಯಾಪಕ ಶಶಿಧರ ಶೆಟ್ಟಿ ಆಜ್ರಿ ತಗುಂಜೆ, ನಿವೃತ ಉಪನ್ಯಾಸಕ ಡಾ. ಶ್ರೀಕಾಂತ ರಾವ್ ಸಿದ್ದಾಪುರ ಮಾತನಾಡಿದರು. ಸ್ಥಳೀಯ ಪ್ರಮುಖರಾದ ಡಿ. ಗೋಪಾಲಕೃಷ್ಣ ಕಾಮತ್ , ಚಿಂತಕ ಮುಸ್ತಾಕ್ ಹೆನ್ನಾಬೈಲು, ಚಿಟ್ಟೆ ರಾಜಗೋಪಾಲ ಹೆಗ್ಡೆ, ಉಡುಪಿ ಜಿಲ್ಲಾಕಾರ್ಯನಿರತ ಪತ್ರಕರ್ತರ ಸಂಘದ ಕಾರ್ಯದರ್ಶಿ ಲೋಕೇಶ ಆಚಾರ್ಯ ತೆಕ್ಕಟ್ಟೆ ನುಡಿ ನಮನ ಸಲ್ಲಿಸಿದರು.
ಜನ ಜಾಗೃತಿ ವೇದಿಕೆ ಸದಸ್ಯ ಕೆ. ಎಸ್ . ಮಡಿವಾಳ ಹೊಸಂಗಡಿ, ಅರಣ್ಯ ಗುತ್ತಿಗೆದಾರ ಸುರೇಂದ್ರ ಶೆಟ್ಟಿ ಹಾಲಾಡಿ, ಹಿರಿಯ ನಾಗರಿಕರ ವೇದಿಕೆ ಅಧ್ಯಕ್ಷ ಎಚ್ . ಭೋಜ ಶೆಟ್ಟಿ, ಜಿ.ಪಂ. ಮಾಜಿ ಸದಸ್ಯ ರೋಹಿತ್ ಶೆಟ್ಟಿ, ಗ್ರಾ.ಪಂ. ಮಾಜಿ ಸದಸ್ಯರು ಉಪಸ್ಥಿತರಿದ್ದರು. ಸಿದ್ದಾಪುರ ಯಕ್ಷ ನುಡಿಸಿರಿ ಬಳಗದ ಅಧ್ಯಕ್ಷ ಡಾ. ಜಗದೀಶ ಶೆಟ್ಟಿ ಪ್ರಾಸ್ತವಿಕವಾಗಿ ಮಾತನಾಡಿದರು. ಉಡುಪಿ ಜಿಲ್ಲಾವಿದ್ಯಾ ಭಾರತಿ ಜಿಲ್ಲಾಧ್ಯಕ್ಷ ಟಿ. ಜಿ ಪಾಂಡುರಂಗ ಪೈ ಕಾರ್ಯಕ್ರಮ ನಿರ್ವಹಿಸಿದರು. ಕುಂದಾಪುರ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಉಪಾಧ್ಯಕ್ಷ ಸತೀಶ ಆಚಾರ್ಯ ಉಳ್ಳೂರು ಕಾರ್ಯಕ್ರಮ ನಿರ್ವಹಿಸಿದರು.
ಪೋಟೊ//27ಕೆ-ಎಸ್ ಐಡಿ//. ಶಾಸಕ ಗುರುರಾಜ ಶೆಟ್ಟಿ ಗಂಟಿಹೊಳೆ ನುಡಿನಮನ ಸಲ್ಲಿಸಿದರು.