ಕುಂದಾಪುರ : ಎಲ್ಲೋ ಮೂಲೆ ಸೇರಿ ಹೋಗಿರುವ 2000 ರೂ. ಮುಖಬೆಲೆಯ ನೋಟಿಗೆ ಮತ್ತೆ ಡಿಮ್ಯಾಂಡ್ ಬಂದಿದೆ.
ಬೈಂದೂರು ತಾಲೂಕಿನ ನಾಗೂರಿನಲ್ಲಿಕಲಾಪ್ರಿಯ ಮಿತ್ರ ಬಳಗ 2000 ರೂ. ಮುಖಬೆಲೆಯ ನೋಟು ಮುದ್ರಿಸಿ ಗಮನ ಸೆಳೆದಿದೆ.ಪ್ರತಿವರ್ಷದಂತೆ ಈ ಬಾರಿಯೂ ಕೂಡ ಬಳಗವು ಆ.1 ರ ಸಂಜೆ 6 ಗಂಟೆಗೆ ಯಕ್ಷಾಮೃತ-13 ಎಂಬ ಯಕ್ಷಗಾನ ಕಾರ್ಯಕ್ರಮ ಸಂಯೋಜಿಸಿದೆ. ಅದರ ಪ್ರಚಾರವನ್ನು ವಿಭಿನ್ನವಾಗಿ ನಡೆಸುತ್ತಿದೆ. 2000 ರೂ.ಮುಖಬೆಲೆಯ ನೋಟಿನ ಕರಪತ್ರ ಮುದ್ರಿಸಿ ಅದರಲ್ಲಿಕಾರ್ಯಕ್ರಮದ ವಿವರ ದಾಖಲಿಸಿ ಗಮನಸೆಳೆದಿದೆ. ನೋಟು ನೀಡಿ ಯಕ್ಷಗಾನಕ್ಕೆ ಬನ್ನಿ ಎಂದು ಆಮಂತ್ರಿಸಿ ಎಲ್ಲರ ಮೊಗದಲ್ಲಿಮಂದಹಾಸ ಮೂಡಿಸಿದೆ.
ಕೋಟ್ :
ಪ್ರತಿ ವರ್ಷ ಯಕ್ಷಾಮೃತ ಯಕ್ಷಗಾನ ಪ್ರದರ್ಶನದ ಪ್ರಚಾರ ವಿಶಿಷ್ಟ ಶೈಲಿಯಲ್ಲಿನಡೆಸಿಕೊಂಡು ಬರುತ್ತಿರುವ ಕಲಾಪ್ರಿಯ ಬಳಗ ಈ ಬಾರಿ ಸದ್ಯ ಮರತೆಹೋಗಿರುವ 2000ರೂ. ಮುಖಬೆಲೆ ನೋಟಿನ ಮಾದರಿಯ ಆಮಂತ್ರಣ ಪತ್ರಿಕೆ ರೂಪಿಸಿ ಎಲ್ಲರ ಚಿತ್ತ ಸೆಳೆದಿದೆ.