ಇಂಟ್ರೊಚಿತ್ರೋದ್ಯಮಕ್ಕೆ ಗಾಯಕರಾಗಿ ಎಂಟ್ರಿ ಕೊಟ್ಟು, ಸಂಗೀತಗಾರ ಮತ್ತು ನಟರಾಗಿರುವ ನವೀನ್ ಸಜ್ಜು ಈಗ ಹೀರೊ ಆಗಿ ಎರಡನೇ ಸಿನಿಮಾ ಮಾಡುತ್ತಿದ್ದಾರೆ.
ಕಿರಣ್ ಚಂದ್ರ
ಗಾಯಕ ನವೀನ್ ಸಜ್ಜು ತಮ್ಮ ವಿಭಿನ್ನ ಕಂಠದ ಮೂಲಕ ಸಾಮಾನ್ಯ ಜನರ ಸಂಗೀತಾಭಿರುಚಿ ಬಲ್ಲಸಂಗೀತಗಾರರಾಗಿ ಗುರುತಿಸಿಕೊಂಡವರು. ನಟರಾಗಿ ‘ಲೋ ನವೀನ’ ಸಿನಿಮಾ ಮೂಲಕ ಹೀರೊ ಆಗಿರುವ ಅವರೀಗ ವಿನಯ್ ಕೃಷ್ಣ ನಿರ್ದೇಶನದಲ್ಲಿಮತ್ತೊಂದು ಚಿತ್ರದ ಲೀಡ್ ಆಗಿದ್ದಾರೆ. ತಮ್ಮ ಚೊಚ್ಚಲ ಚಿತ್ರದಲ್ಲಿಕ್ಲಾಸ್ ಆಗಿ ಕಾಣಿಸಿದ್ದ ನವೀನ್ ಸಜ್ಜು ಈ ಬಾರಿ ಮಾಸ್ ಆಗಿದ್ದಾರೆ. ಒಂದು ಪಕ್ಕಾ ಕಮರ್ಷಿಯಲ್ ಎಂಟರ್ಟೇನರ್ ಸಿನಿಮಾ ಮೂಲಕ ಅವರು ಜನರೆದುರು ಬರುತ್ತಿದ್ದಾರೆ.
ಚೊಚ್ಚಲ ಸಕ್ಸಸ್ ಆಫರ್
ಲೋ ನವೀನ ಸಿನಿಮಾದಿಂದಲೇ ಹೊಸ ಚಿತ್ರದ ಆಫರ್ ಬಂತು ಎನ್ನುವ ನವೀನ್ ಸಜ್ಜು, ‘ಗಾಯಕರಾಗಿ, ಸಂಗೀತ ನಿರ್ದೇಶಕರಾಗಿ ಜನರು ನನ್ನನ್ನು ಇಷ್ಟಪಟ್ಟಿದ್ದರು. ಆದರೆ ನಟರಾಗಿ ನನ್ನನ್ನು ಒಪ್ಪಿಕೊಳ್ಳುತ್ತಾರಾ? ಈತ ಹಾಡು ಹಾಡಿಕೊಂಡೇ ಚೆನ್ನಾಗಿದ್ದ, ಇವನಿಗೆ ನಟನೆ ಎಲ್ಲಾಬೇಕಿತ್ತಾ ಎಂದು ಜನರು ಅಂದುಕೊಂಡರೆ ಎಂಬ ಭಯವಿತ್ತು. ಹಾಗಾಗಿ ಮೊದಲು ಈ ಚಿತ್ರದ ಪಾತ್ರಗಳಿಗೆ ಹೆಚ್ಚು ಹಿರೋಯಿಸಂ ಇರದೆ, ಎಲ್ಲಾಪಾತ್ರಗಳೂ ಜನರನ್ನು ನಗಿಸಿ ರಂಜಿಸಬೇಕೆಂದೇ ಹೀರೊ ಮಾಡಲಾಗಿದೆ. ತುಂಬಾ ಓದಿರದ, ಹಾಗಂತ ಏನೂ ಗೊತ್ತಿಲ್ಲದ, ಜನರಿಗೆ ಹತ್ತಿರವಾಗುವ ಹಳ್ಳಿ ಹುಡುಗನ ಪಾತ್ರವದು. ಹಳ್ಳಿಯ ಮುಗ್ಧತೆಯ ಜತೆಗೆ ಸಿಟಿಯಲ್ಲಿಬದುಕು ಕಟ್ಟಿಕೊಳ್ಳುವವರ ಈ ಪಾತ್ರ ನಮ್ಮ ಸುತ್ತಲೇ ಇದೆ ಎಂದು ಅನಿಸುವಂತಿದೆ. ಈಗ ಹೊಸ ಸಿನಿಮಾದಲ್ಲೂಅಂಥದ್ದೇ ಅಂದರೆ ಮತ್ತೊಮ್ಮೆ ಸಾಮಾನ್ಯ ಜನರೊಳಗೊಬ್ಬ ಎನ್ನುವ ಪಾತ್ರವಿದೆ. ಮೊದಲ ಸಿನಿಮಾದಲ್ಲಿಮಾಡಿದ ತಪ್ಪುಗಳನ್ನು ಇಲ್ಲಿಸರಿಮಾಡಿಕೊಂಡಿದ್ದೇನೆ. ಎಲ್ಲಾಮಾಸ್ ಅಂಶಗಳು ಇದರಲ್ಲಿದ್ದು, ಆ್ಯಕ್ಷನ್ ಲವ್ ಸ್ಟೋರಿಯ ಈ ಸಿನಿಮಾದಲ್ಲಿಥ್ರಿಲ್ಲಿಂಗ್ ಅಂಶಗಳೂ ಇವೆ. ಒಬ್ಬ ಮುಗ್ಧ ಯುವಕನ ಮುಗ್ಧ ಪ್ರೀತಿಯ ಹಿಂದೆ ತಡೆಯಲಾಗದ ಕೋಪವೂ ಇರುತ್ತದೆ ಎನ್ನುವುದು ಇದರ ಸಿಂಪಲ್ ಒನ್ ಲೈನ್ ’ ಎಂದು ತಿಳಿಸಿದ್ದಾರೆ.
ನಟನಾಗಿ ಉಳಿದಿರುವುದು ಚಾಲೆಂಜಿಂಗ್
ಚಿತ್ರೋದ್ಯಮದಲ್ಲಿನಟರಾಗಿ ಉಳಿಯುವುದು, ಬೆಳೆಯುವುದು ಎಷ್ಟು ಸವಾಲಿನ ಜವಾಬ್ದಾರಿ ಎಂಬುದನ್ನು ಹೇಳಿರುವ ನವೀನ್ ಸಜ್ಜು, ‘ಕನ್ನಡ ಚಿತ್ರರಂಗದ ಸದ್ಯದ ಪರಿಸ್ಥಿತಿ, ಥಿಯೇಟರ್ ಗಳನ್ನು ಮುಚ್ಚುತ್ತಿರುವ ಈ ಸಮಯದಲ್ಲಿಎರಡ್ಮೂರು ವಾರ ಚಿತ್ರಮಂದಿರಗಳಲ್ಲಿಸಿನಿಮಾ ಪ್ರದರ್ಶನ ಕಂಡಮೇಲೆ ಜನರು ಚಿತ್ರಮಂದಿರಕ್ಕೆ ಬರುತ್ತಾರೆ. ನಾವು ನಮಗೋಸ್ಕರ ಸಿನಿಮಾ ಮಾಡದೆ ಜನರಿಗಾಗಿ ಮಾಡಬೇಕಿದೆ. ಆಗಷ್ಟೇ ಸಿನಿಮಾ ನೋಡಲು ಜನರು ಬರುತ್ತಾರೆ. ನನ್ನ ಅನುಭವದಲ್ಲಿಜನರನ್ನು ಕರೆತರುವುದು, ಎರಡು ಗಂಟೆ ಥಿಯೇಟರ್ ನಲ್ಲಿಕೂರಿಸುವುದು ಅಷ್ಟು ಸುಲಭವಿಲ್ಲ. ಕಥೆ ಚೆನ್ನಾಗಿರಬೇಕು, ಸಿನಿಮಾಗೆ ಏನು ಬೇಕೋ ಎಲ್ಲವನ್ನೂ ಕೊಡಬೇಕು. ಇದಕ್ಕೆ ಚಂದನ್ ಶೆಟ್ಟಿ ಮ್ಯೂಸಿಕ್ ಕಂಪೋಸ್ ಮಾಡುತ್ತಿದ್ದು, ಇದರಲ್ಲಿನಾನು ಹಾಡುವ ಬಗ್ಗೆ ಫೈನಲ್ ಆಗಿಲ್ಲ. ಅವರೊಂದಿಗೆ ಸ್ಟೇಜ್ ಶೋಗಳಲ್ಲಿಭಾಗಿಯಾಗಿದ್ದೆ, ಈಗ ನಾವಿಬ್ಬರು ಸಿನಿಮಾಗೆ ಒಂದಾಗುತ್ತಿರುವುದು ಇದೇ ಮೊದಲು. ಕಥೆಯು ಇದರ ಕೊನೆಯ ಹಂತದಲ್ಲಿದ್ದು, ಡೈಲಾಗ್ಸ್ ಫೈನಲ್ ಆಗುತ್ತಿದೆ. ಪ್ರಿ ಪ್ರೊಡಕ್ಷನ್ ವೇಗವಾಗಿ ನಡೆಯುತ್ತಿದೆ’ ಎಂದು ಹೇಳಿದ್ದಾರೆ.
ಕೋಟ್
ಸಿನಿಮಾಗಳಲ್ಲಿಲೀಡ್ ಪಾತ್ರಗಳನ್ನೇ ಮಾಡಬೇಕೆಂದು ನಾನಂದುಕೊಂಡಿಲ್ಲ. ಯಾವುದೇ ಪಾತ್ರ ಬಂದರೂ ಮಾಡುತ್ತೇನೆ. ಹೊಸ ಸಿನಿಮಾವೂ ಸೇರಿ ಈ ವರ್ಷದಲ್ಲಿನನ್ನ ಅಭಿನಯದ ಒಟ್ಟು ಮೂರು ಸಿನಿಮಾಗಳು ರಿಲೀಸ್ ಆಗಲಿವೆ. ಮುಂದಿನ ತಿಂಗಳು ಹೊಸ ಸಿನಿಮಾ ಶೂಟಿಂಗ್ ಶುರುವಾಗಲಿದೆ. ನನಗೆ ಸಂಗೀತ ಬಿಡಲು ಆಗಲ, ಅದೇ ಜೀವನ.