ಹೊಸದಿಲ್ಲಿಗೆ ಮಾತ್ರ ಸೀಮಿತವಾಗಿದೆ ರಾಜ್ಯ ಸರಕಾರ

Contributed bypeerasab995@gmail.com|Vijaya Karnataka
state government limited to new delhi b shriramulus outrage
ಹೊಸದಿಲ್ಲಿಗೆ ಮಾತ್ರ ಸೀಮಿತವಾಗಿದೆ ರಾಜ್ಯ ಸರಕಾರ

-ಮಾಜಿ ಸಚಿವ ಬಿ.ಶ್ರೀರಾಮುಲು ವ್ಯಂಗ್ಯ
-ರೈತರಿಗೆ ಪರಿಹಾರ ನೀಡಲೂ ಸರಕಾರದ ಬಳಿ ಅನುದಾನವಿಲ್ಲ

ವಿಕ ಸುದ್ದಿಲೋಕ ಬಳ್ಳಾರಿ

‘‘ರಾಜ್ಯದಲ್ಲಿತೀವ್ರ ಬರ ಪರಿಸ್ಥಿತಿ ಎದುರಾಗಿದೆ. ಈ ವೇಳೆ ಜನರಿಗೆ ನೆರವಾಗಬೇಕಿದ್ದ ರಾಜ್ಯ ಸರಕಾರ ಬೆಂಗಳೂರು ಹಾಗೂ ಹೊಸದಿಲ್ಲಿಗೆ ಮಾತ್ರ ಸೀಮಿತವಾಗಿರುವುದು ದುರಂತದ ಸಂಗತಿ,’’ ಎಂದು ಮಾಜಿ ಸಚಿವ ಬಿ.ಶ್ರೀರಾಮುಲು ದೂರಿದರು.

ನಗರದಲ್ಲಿಸೋಮವಾರ ಸುದ್ದಿಗೋಷ್ಠಿಯಲ್ಲಿಮಾತನಾಡಿದ ಅವರು, ‘‘ಬರದಿಂದಾಗಿ ಬೆಳೆ ಒಣಗುತ್ತಿವೆ. ಜಲಮೂಲಗಳು ಬತ್ತುತ್ತಿವೆ. ಮೇವಿಲ್ಲದೆ ಜಾನುವಾರುಗಳು ಸಾಯುತ್ತಿವೆ. ತುಂಗಭದ್ರಾ ಜಲಾಶಯದ ಬಲ ಮತ್ತು ಎಡದಂಡೆ ವ್ಯಾಪ್ತಿಯ ರೈತರು ತೀವ್ರ ಸಂಕಷ್ಟ ಎದುರಿಸುತ್ತಿದ್ದಾರೆ. ಸರಕಾರ ತಕ್ಷಣ ಪರಿಹಾರ ಘೋಷಣೆ ಮಾಡುವುದನ್ನು ಬಿಟ್ಟು ಅನಗತ್ಯ ಸಮಯ ಹಾಳು ಮಾಡುತ್ತಿದೆ. ಡ್ರೋನ್ ಕ್ಯಾಮರಾ ಸರ್ವೆ ನೆಪದಲ್ಲಿಅನ್ನದಾತರಿಗೆ ಪರೋಕ್ಷವಾಗಿ ವಂಚನೆ ಮಾಡುತ್ತಿದೆ,’’ ಎಂದರು.

ಕಾಣಿಕೆ ತಲುಪಿಸುವುದರಲ್ಲೇ ಮಗ್ನ: ‘‘ತೀವ್ರ ಸಂಕಷ್ಟಕ್ಕೆ ಸಿಲುಕಿರುವ ರೈತರಿಗೆ ಪರಿಹಾರ ನೀಡಲು ಹಣ ಇಲ್ಲಎಂದು ಸಬೂಬು ಹೇಳುವ ರಾಜ್ಯ ಸರಕಾರ ಗ್ಯಾರಂಟಿ ಸಮಿತಿಗಳ ಅಧ್ಯಕ್ಷರು ಹಾಗೂ ಉಪಾಧ್ಯಕ್ಷರಿಗೆ ಕ್ಯಾಬಿನೆಟ್ ದರ್ಜೆ ಸ್ಥಾನಮಾನ ನೀಡಿ ಅವರ ಜೇಬು ತುಂಬಿಸುವ ಕೆಲಸ ಮಾಡುತ್ತಿದೆ. ಸಚಿವರು ಹಾಗೂ ಕಾಂಗ್ರೆಸ್ ಮುಖಂಡರು ಹೈಕಮಾಂಡ್ ಗೆ ಕಪ್ಪು ಕಾಣಿಕೆ ತಲುಪಿಸು ವುದರಲ್ಲೇ ಮಗ್ನರಾಗಿದ್ದಾರೆ,’’ ಶ್ರೀರಾಮುಲು ಕಿಡಿಕಾರಿದರು.

ಸಿಎಂಗೆ ಕಾರಿನ ಹಿಂದೆ ಓಡುವ ಸ್ಥಿತಿ: ‘‘ರಾಜಕೀಯ ಕಲುಷಿತವಾಗಿದೆ’’ ಎಂಬ ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಡಿ.ಕೆ. ಶಿವಕುಮಾರ್ ಸಿಎಂ ಆದ ಮೇಲೆಯೇ ಅವರಿಗೆ ರಾಜಕೀಯ ಕಲುಷಿತಗೊಂಡಂತೆ ಅನಿಸುತ್ತಿದೆಯೇ? ಸಿದ್ದರಾಮಯ್ಯ ಅಧಿಕಾರದಲ್ಲಿದ್ದಾಗ ಎಲ್ಲವೂ ಶುದ್ಧವಾಗಿತ್ತೇ? ಎಂದು ಪ್ರಶ್ನಿಸಿದರು. ಹೊಸದಿಲ್ಲಿಯಲ್ಲಿರಾಹುಲ್ ಗಾಂಧಿ ಕಾರಿನ ಹಿಂದೆ ಸಿಎಂ ಡಿ.ಕೆ.ಶಿವಕುಮಾರ್ ಬಾಡಿಗಾರ್ಡ್ ನಂತೆ ಓಡುವ ಸ್ಥಿತಿ ನಿರ್ಮಾಣವಾಗಿದೆ. ಆಡಳಿತ ಪಕ್ಷದಲ್ಲೇ ಎಲ್ಲವೂ ಸರಿಯಿಲ್ಲಎಂಬುದು ಸಿದ್ದರಾಮಯ್ಯ ಅವರ ಹೇಳಿಕೆಯಿಂದ ಸ್ಪಷ್ಟವಾಗುತ್ತದೆ,’’ ಎಂದರು.

ಬಾಕ್ಸ್ ಐಟಂ-----1

ಕೆಪಿಎಸ್ ಸಿ ಹಗರಣದ ಬಗ್ಗೆ ‘ರಾಗಾ’ ಧ್ವನಿ ಎತ್ತಲಿ

‘‘ಹೊಸದಿಲ್ಲಿಯಲ್ಲಿನೀಟ್ ಪರೀಕ್ಷೆ ವಿಚಾರವಾಗಿ ಹೋರಾಟ ನಡೆಸಿದ್ದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು, ರಾಜ್ಯದಲ್ಲಿನಡೆದಿರುವ ಕೆಪಿಎಸ್ ಸಿ ಹಗರಣದ ಬಗ್ಗೆ ಏಕೆ ಧ್ವನಿ ಎತ್ತುತ್ತಿಲ್ಲ. ಕೆಪಿಎಸ್ ಸಿಯಲ್ಲಿನಡೆದಿದೆ ಎನ್ನಲಾದ ಹಗರಣದ ನೈತಿಕ ಹೊಣೆ ಹೊತ್ತು ಸಿಎಂ ಅಥವಾ ಸಂಬಂಧಪಟ್ಟ ಸಚಿವರು ತಕ್ಷಣ ರಾಜೀನಾಮೆ ನೀಡಬೇಕು. ರಾಹುಲ್ ಗಾಂಧಿ ಕರ್ನಾಟಕಕ್ಕೆ ಆಗಮಿಸಿ ಇಲ್ಲಿನ ಯುವಜನತೆಗೆ ನ್ಯಾಯ ಕೊಡಿಸಲಿ,’’ ಎಂದು ಶ್ರೀರಾಮುಲು ಆಗ್ರಹಿಸಿದರು.

ಪಾಲಿಕೆ ಪ್ರತಿಪಕ್ಷದ ನಾಯಕ ಶ್ರೀನಿವಾಸ್ ಮೊತ್ಕರ್ , ಪಾಲಿಕೆ ಸದಸ್ಯ ಹನುಮಂತಪ್ಪ ಸೇರಿ ಬಿಜೆಪಿಯ ಪ್ರಮುಖರು ಹಾಗೂ ಮುಖಂಡರು ಇದ್ದರು.

ಫೋಟೋ ಕ್ಯಾಪ್ಷನ್ : 27 ಬಿಎಲ್ ವೈ ಪೀರಾಸಾಬ್ 01: ಬಿ.ಶ್ರೀರಾಮುಲು