ಪಕ್ಷದ ರಾಜ್ಯ ಕೋರ್ ಕಮಿಟಿ ಸದಸ್ಯ ಸಿ.ವಿ.ಚಂದ್ರಶೇಖರ್ ನೇತೃತ್ವದ ಬರ ಅಧ್ಯಯನ ತಂಡ ತಾಲೂಕಿನ ಹಂದ್ರಾಳ, ಕವಲೂರು, ಅಳವಂಡಿ, ಬೈರಾಪುರ, ಬೆಟಗೇರಿ, ಬೋಚನಹಳ್ಳಿ, ಬಿಸರಳ್ಳಿ, ವದಗನಾಳ ಹಾಗೂ ಹಲಗೇರಿ ಗ್ರಾಮಗಳ ಕೃಷಿ ಜಮೀನುಗಳಲ್ಲಿಪರಿಸ್ಥಿತಿ ಅವಲೋಕಿಸಿತು.
ಬರ ಅವಲೋಕನದ ನಂತರ ಮುಖಂಡರು ರೈತರೊಂದಿಗೆ ಪ್ರತ್ಯೇಕ ಸಂವಾದ ನಡೆಸಿದರು. ‘‘ಕಳೆದ ಎರಡು ದಶಕಗಳಲ್ಲಿಯೇ
ಈ ಸಲ ಅಪ್ಪಳಿಸಿದ ಬರಗಾಲ ಭೀಕರವಾಗಿದೆ. ಕೊಪ್ಪಳ ತಾಲೂಕಿನ ಬಹುತೇಕ ಕಡೆ ಶೇ.50 ಕ್ಕಿಂತಲೂ ಕಡಿಮೆ ಮಳೆ ಬಿದ್ದಿದೆ.
ಹಿಂಗಾರು ಅವಧಿಯಲ್ಲಿಯೂ ಮಳೆ ಕಡಿಮೆಯಾಗಬಹುದು ಎಂಬ ವರದಿಗಳಿವೆ. ಶೇ.70ರಷ್ಟು ಕೃಷಿ ಜಮೀನಿನಲ್ಲಿಬೆಳೆದಿದ್ದ ಬೆಳೆಗಳು ಸಂಪೂರ್ಣವಾಗಿ ಒಣಗಿವೆ. ರೈತರು ಗುಳೆ ಹೋಗುತ್ತಿದ್ದಾರೆ. ಜಿಲ್ಲಾಡಳಿತ ಪರಿಹಾರ ಕಾಮಗಾರಿ ಕೈಗೊಂಡು ರೈತರ ನೆರವಿಗೆ ಧಾವಿಸಬೇಕು,’’ ಎಂದು ಹಂದ್ರಾಳ ಗ್ರಾಮದ ರೈತರ ಸಭೆಯಲ್ಲಿಸಿ.ವಿ.ಚಂದ್ರಶೇಖರ್ ಆಗ್ರಹಿಸಿದರು.
ಆರೋಪ:
ಶಾಸಕ ರಾಘವೇಂದ್ರ ಹಿಟ್ನಾಳ್ ರೈತರನ್ನು ಭೇಟಿಯಾಗಿಲ್ಲ. ಅವರ ಒಳಿತಿಗಾಗಿ ಯಾವುದೇ ಕೆಲಸ ಮಾಡಿಲ್ಲಎಂದು ರೈತರು ಆರೋಪಿಸಿದರು. ಮೂರು ಸಲ ಅಧಿಕಾರದಲ್ಲಿದ್ದರೂ ಬರ ಪರಿಸ್ಥಿತಿ ನಿಭಾಯಿಸುವಲ್ಲಿಶಾಸಕರು ವಿಫಲರಾಗಿದ್ದಾರೆ. ರೈತರ ಹಿತರಕ್ಷಣೆಯನ್ನೂ ಕಡೆಗಣಿಸಿದ್ದಾರೆ. ತುಂಗಭದ್ರಾ ನದಿಯ ತಟದಲ್ಲಿದ್ದರೂ ಈ ಭಾಗಗಳಿಗೆ ನೀರಾವರಿ ಕಲ್ಪಿಸದೆ ರೈತರಿಗೆ ಅನ್ಯಾಯ ಮಾಡಿದ್ದಾರೆ. ಹೊಲಗಳಲ್ಲಿನೀರಿಲ್ಲದೆ ರೈತರು ನಲುಗುತ್ತಿದ್ದರೇ, ಇವರು ದಿಲ್ಲಿಯಲ್ಲಿಅಧಿಕಾರಕ್ಕಾಗಿ ಹಗಲಿರುಳು ಹೋರಾಡುತ್ತಿದ್ದಾರೆ ಎಂದು ಅಳವಂಡಿ ಗ್ರಾಮದ ರೈತರ ಜಮೀನಿನಲ್ಲಿಮಾತನಾಡಿದ ಸಿವಿಸಿ ಆಕ್ರೋಶ ವ್ಯಕ್ತಪಡಿಸಿದರು.
ಮೇವು ಬ್ಯಾಂಕ್ ತೆರೆಯಿರಿ:
‘‘ಹೋಬಳಿಗೊಂದರಂತೆ ಮೇವು ಬ್ಯಾಂಕ್ ತೆರೆಯಬೇಕು. ಪ್ರತಿ ಎಕರೆ ಜಮೀನಿಗೆ 50 ಸಾವಿರ ರೂಪಾಯಿ ಪರಿಹಾರ ನೀಡಬೇಕು. ಮೊದಲ ಕಂತಿನಲ್ಲಿ25 ಸಾವಿರ ರೂ. ಬಿಡುಗಡೆ ಮಾಡಬೇಕು,’’ ಎಂದು ಪಕ್ಷದ ಜಿಲ್ಲಾಧ್ಯಕ್ಷ ಸುರೇಶ್ ಭೂಮರಡ್ಡಿ ಒತ್ತಾಯಿಸಿದರು.
ತಾಲೂಕಿನಲ್ಲಿಬರ ಸಮೀಕ್ಷೆಯನ್ನು ಅಧಿಕಾರಿಗಳು ಕೈಗೊಳ್ಳಬೇಕು. ರೈತರ ಬೆಳೆ ವಿಮೆಯ ಬಾಕಿ ಕಂತುಗಳನ್ನು ಬಿಡುಗಡೆ ಮಾಡಲು ಕ್ರಮ ಕೈಗೊಳ್ಳಬೇಕು,’’ ಎಂದು ಜಿಲ್ಲಾಗೌರವಾಧ್ಯಕ್ಷ ದೇವಪ್ಪ ಕಟ್ಟಿಮನಿ ಆಗ್ರಹಿಸಿದರು.
ಆಕ್ರೋಶ:
‘‘ಬಹುತೇಕ ಜಮೀನುಗಳಲ್ಲಿನೀರಿಲ್ಲದೆ ಬೆಳೆಗಳು ಸರಿಯಾಗಿ ಬೆಳೆದಿಲ್ಲ. ಕೆಲವೆಡೆ ಕೃಷಿ ಜಮೀನು ಬಂಜರು ಭೂಮಿಯಾಗಿದೆ. ಅನೇಕ ಕಡೆ ಬಿತ್ತನೆಯಾಗಿದ್ದರೂ ಸಸಿಗಳು ಹುಟ್ಟಿಲ್ಲ. ಜಿಲ್ಲಾಡಳಿತದ ಅಧಿಕಾರಿಗಳು ಅನೇಕ ಕಡೆ ಭೇಟಿ ನೀಡಿ ವಾಸ್ತವ ಪರಿಸ್ಥಿತಿಯನ್ನು ಅವಲೋಕಿಸುವ ಪ್ರಯತ್ನ ಮಾಡಿಲ್ಲ,’’ ಎಂದು ತಾಲೂಕು ಘಟಕದ ಅಧ್ಯಕ್ಷ ವೀರೇಶ್ ದಳಪತಿ ಆಕ್ರೋಶ ವ್ಯಕ್ತಪಡಿಸಿದರು.
ಜಿಲ್ಲಾವಕ್ತಾರ ಮಲ್ಲನಗೌಡ ಕೋನನಗೌಡ್ರು ಮಾತನಾಡಿದರು. ಜಿಲ್ಲಾಒಬಿಸಿ ಅಧ್ಯಕ್ಷ ಕರಿಯಪ್ಪ ಹಾಲವರ್ತಿ, ಜಿಲ್ಲಾಸಂಸ್ಕೃತಿ ಘಟಕದ
ಅಧ್ಯಕ್ಷ ಮಂಜುನಾಥ ಸೊರಟೂರ್ , ಜಿಲ್ಲಾಪ್ರಧಾನ ಕಾರ್ಯದರ್ಶಿ ಶರಣಪ್ಪ ಜಡಿ, ತಾಲೂಕು ಪ್ರಧಾನ ಕಾರ್ಯದರ್ಶಿ ಶಿವಕುಮಾರ ಏಣಿಗಿ, ಕೊಪ್ಪಳ ನಗರ ಘಟಕ ಅಧ್ಯಕ್ಷ ಸೋಮನಗೌಡ, ನಗರ ಘಟಕದ ಉಪಾಧ್ಯಕ್ಷ ಗಂಗಾಧರ ವಸ್ತ್ರದ, ತಾಲೂಕು ಎಸ್ ಸಿ ಘಟಕದ
ಅಧ್ಯಕ್ಷ ಸುರೇಶ ದದಗಲ್ , ಜಿಲ್ಲಾಕೈಗಾರಿಕಾ ಅಧ್ಯಕ್ಷ ಮಾರುತಿಗೌಡ ಪೊಲೀಸ್ ಪಾಟೀಲ್ , ಕ್ರೀಡಾ ವಿಭಾಗದ ಅಧ್ಯಕ್ಷ ಸೈಯದ್ ಮಹೆಮೂದ್ ಹುಸೇನಿ ಬಲ್ಲೆ, ನಗರ ಘಟಕದ ಪ್ರಧಾನ ಕಾರ್ಯದರ್ಶಿ ಬಸವರಾಜ .ಎಸ್ , ಎಸ್ ಟಿ ಘಟಕದ ತಾಲೂಕು ಅಧ್ಯಕ್ಷ ಮಲ್ಲಪ್ಪ ಹಂದ್ರಾಳ, ಮಾರುತಿ ಕವಲೂರ, ದಾನಪ್ಪ ಗಿಣಿಗೇರಿ, ರುದ್ರಪ್ಪ ಹಣವಾಳ, ಸಿದ್ದು ಪಾಟೀಲ್ , ಕೊಳ್ಳಪ್ಪ ಬೋಚನಳ್ಳಿ ಹಾಗೂ ಕಾರ್ಯಕರ್ತರು ಇದ್ದರು.
ಧಿ
27ಕೆಪಿಎಲ್ ಫೋಟೋ01, 02
ಜೆಡಿಎಸ್ ರಾಜ್ಯ ಕೋರ್ ಕಮಿಟಿ ಸದಸ್ಯ ಸಿ.ವಿ.ಚಂದ್ರಶೇಖರ್ ನೇತೃತ್ವದ ಬರ ಅಧ್ಯಯನ ತಂಡ ಸೋಮವಾರ ಕೊಪ್ಪಳ ತಾಲೂಕಿನ ಗ್ರಾಮಗಳಲ್ಲಿಬರ ಅಧ್ಯಯನ ನಡೆಸಿ ರೈತರೊಂದಿಗೆ ಸಂವಾದ ನಡೆಸಿತು.