ಹಂದನಕೆರೆ ಗುರುಗಿರಿ ಮಠದಲ್ಲಿಗುರು ಪೌರ್ಣಮಿ

Contributed bymadhugirinews@gmail.com|Vijaya Karnataka
Vijay Karnataka
ಹಂದನಕೆರೆ ಗುರುಗಿರಿ ಮಠದಲ್ಲಿಗುರು ಪೌರ್ಣಮಿ

ಚಿಕ್ಕನಾಯಕನಹಳ್ಳಿ: ತಾಲೂಕಿನ ಹಂದನಕೆರೆಯ ಶ್ರೀ ಗುರುಗಿರಿ ಸಿದ್ದೇಶ್ವರಸ್ವಾಮಿ ನಿಜೈಕ್ಯ ಕ್ಷೇತ್ರ ಶ್ರೀಮಠದಲ್ಲಿಗುರುಪೌರ್ಣಮಿ ಅಂಗವಾಗಿ ಜು.29ರಂದು ಡಾ. ರುದ್ರಾರಾಧ್ಯ ಅವರಿಗೆ ಹಂದನಕೆರೆ ಗ್ರಾಮದ 18 ಪಣಸ್ತರಿಂದ ಗುರುವಂದನಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ಬೆಳಗಿನಿಂದ ವಿಶೇಷ ಪೂಜೆ, ಭಜನೆ ಮತ್ತಿತರ ಕಾರ್ಯಕ್ರಮಗಳು ನಡೆಯಲಿವೆ. ಮಧ್ಯಾಹ್ನ 1ಗಂಟೆಗೆ ನಡೆಯುವ ಧಾರ್ಮಿಕ ಸಭೆಯಲ್ಲಿಡಾ.ರುದ್ರಾರಾಧ್ಯ, ಸ್ವಾಮೀಜಿಗಳಿಗೆ ಗುರುವಂದನೆ ಸಲ್ಲಿಸುವರು. ಶಾಸಕ ಸಿ.ಬಿ.ಸುರೇಶ್ ಬಾಬು ಕಾರ್ಯಕ್ರಮ ಉದ್ಘಾಟಿಸುವರು. ಪಣದ ಗೌಡರಾದ ರಂಗನಾಥ್ ಅಧ್ಯಕ್ಷತೆ ವಹಿಸಲಿದ್ದಾರೆ. ಕೇಂದ್ರ ಸಚಿವ ವಿ.ಸೋಮಣ್ಣ, ಅರಸಿಕೆರೆ ಶಾಸಕ ಶಿವಲಿಂಗೇಗೌಡ, ಹೊಸದುರ್ಗ ಶಾಸಕ ಬಿ.ಜಿ.ಗೋವಿಂದಪ್ಪ, ತಿಪಟೂರು ಶಾಸಕ ಕೆ.ಷಡಕ್ಷರಿ, ಕಡೂರು ಶಾಸಕ ಕೆ.ಎಸ್ .ಆನಂದ್ , ವಿಪ ಸದಸ್ಯ ರಮೇಶ್ ಬಾಬು, ಮಾಜಿ ಸಚಿವ ಜೆ.ಸಿ.ಮಾಧುಸ್ವಾಮಿ, ಮಾಜಿ ಶಾಸಕ ಲಕ್ಕಪ್ಪ, ಕಿರಣ್ ಕುಮಾರ್ ಭಾಗಹಿಸಲಿದ್ದಾರೆ.