ಹಳಿಯಾಳ ಇಂದೇ

Contributed by: manjunatha012@yahoo.co.in|Vijaya Karnataka•
bjp workers action against harassment of ganapati karanjeakars family in haliyala
ಗಣಪತಿ ಕರಂಜೇಕರ ಕುಟುಂಬದ ಮೇಲೆ ದಬ್ಬಾಳಿಕೆ

ಪರಿಶೀಲನೆ, ಕ್ರಮಕ್ಕೆ ಆಗ್ರಹ
ವಿಕ ಸುದ್ದಿಲೋಕ ಹಳಿಯಾಳ

ತಾಲೂಕಿನ ಕೆಸರೊಳ್ಳಿ ಗ್ರಾಮದ ಗಣಪತಿ ಕರಂಜೇಕರ ಅವರ ರಾಜಕೀಯ ಅಭಿವೃದ್ಧಿಯನ್ನು ಸಹಿಸದೇ ಕೆಲವರು ಇವರ ಕುಟುಂಬದ ಮೇಲೆ ದಬ್ಬಾಳಿಕೆ ನಡೆಸುತ್ತಿದ್ದು ಈ ಬಗ್ಗೆ ತಾಲೂಕಾಡಳಿತ ಮತ್ತು ಪೋಲಿಸ್ ಇಲಾಖೆಯವರು ಸೂಕ್ತ ಪರಿಶೀಲನೆ ನಡೆಸುವಂತೆ ಬಿಜೆಪಿ ಮತ್ತು ಮರಾಠಾ ಬಾಂಧವರು ಯುವ ಮುಖಂಡ ಶ್ರೀನಿವಾಸ ಘೋಟ್ನೆಕರ ಅವರ ನೇತೃತ್ವದಲ್ಲಿತಹಸೀಲ್ದಾರ್ ಅವರಿಗೆ ಮನವಿ ಸಲ್ಲಿಸಿದರು.

ಬಿಜೆಪಿ ಮುಖಂಡರೂ ಆಗಿರುವ ಗಣಪತಿ ಕರಂಜೇಕರ ಅವರ ಮೇಲೆ ಇಲ್ಲಸಲ್ಲದ ಆರೋಪಗಳನ್ನು ಹೊರಿಸುವುದರ ಮೂಲಕ ಕೆಲವು ಪಟ್ಟಭದ್ರ ಹಿತಾಸಕ್ತಿಗಳು ಕೆಸರೊಳ್ಳಿ ಗ್ರಾಮದಲ್ಲಿವೈಯಕ್ತಿಕವಾಗಿ ನಡೆದ ಜಗಳವನ್ನು ಕೋಮುಸೌಹಾರ್ದತೆಗೆ ಧಕ್ಕೆ ಎಂಬುವುದನ್ನು ಬಿಂಬಿಸಿಕೊಂಡಿದ್ದು ವಿಚಿತ್ರವಾಗಿದೆ. ಕರಂಜೇಕರ ಅವರ ಕುಟುಂಬಕ್ಕೆ ಮಸಿ ಬಳೆಯುವಂತಹ ಕಾರ್ಯ ನಡೆದಿದೆ.

ಇದರ ಹಿಂದೆ ಇರುವವರನ್ನು ಪೊಲೀಸರು ಗುರುತಿಸಿ, ಕರಂಜೇಕರ ಕುಟುಂಬಕ್ಕೆ ನ್ಯಾಯ ದೊರೆಯುವಂತೆ ಮಾಡಲು ಯತ್ನಿಸಬೇಕು. ಗಣಪತಿ ಕರಂಜೇಕರ ಅವರನ್ನು ಗಡಿಪಾರು ಮಾಡುವಂತೆ ತಿಳಿಸಿರುವ ವಿರೋಧಿಗಳ ಮನವಿಗೆ ಮಾನ್ಯತೆ ನೀಡಬಾರದು ಎಂದು ಮನವಿಯಲ್ಲಿಆಗ್ರಹಿಸಲಾಗಿದೆ.

ಈ ಸಂದರ್ಭದಲ್ಲಿಶಿವಾಜಿ ನರಸಾನಿ, ಅನಿಲ ಮುತ್ನಾಳೆ, ನಾಗೇಂದ್ರ ಜಿವೋಜಿ, ಪ್ರಕಾಶ ಪಾಕ್ರಿ, ನಾಗರಾಜ ಬಾಂದೇಕರ, ತಿಲಕ ನಾಗರಾಜ, ವಿ.ಎಮ್ .ಪಾಟೀಲ್ , ತುಕಾರಾಮ ಗೌಡಾ, ವಿಜಯ ಬೂಬಾಟಿ, ವಾಮನ ಮಿರಾಶಿ, ಕುಮಾರ ಕಲಭಾವಿ, ರಾಘವೇಂದ್ರ ಚಲವಾದಿ, ಸಿದ್ದು ಶೆಟ್ಟಿ, ಜ್ಯೋತಿಬಾ ಪರಸನ್ನವರ, ಸರ್ವೇಶ ಖಾಂದೋಳ್ಕರ, ಗಣಪತಿ ಮಂಗನಗೌಡ್ರ ಇದ್ದರು.

27 ಎಚೆ.ಲವೈ 1

ಬಿಜೆಪಿ ಯುವ ಮುಖಂಡ ಶ್ರೀನಿವಾಸ ಘೋಟ್ನೆಕರ ಅವರ ನೇತೃತ್ವದಲ್ಲಿಮನವಿ ಸಲ್ಲಿಸಲಾಯಿತು.

ಓದಲೇ ಬೇಕಾದ ಸುದ್ದಿ