ತ್ಯಾಜ್ಯ ವಿಂಗಡಿಸದ ಭೀಮಾ ಜ್ಯುವೆಲ್ಲರಿ ಮಳಿಗೆಯಿಂದ 50,839 ರೂ. ದಂಡ ವಸೂಲಿ

Contributed bynagappa.narayanappa@timesgroup.com|Vijaya Karnataka
50839 rupees fine imposed on bhima jewellers for waste mismanagement in koramangala
ವಿಕ ಸುದ್ದಿಲೋಕ ಬೆಂಗಳೂರು

ಸಮರ್ಪಕವಾಗಿ ತ್ಯಾಜ್ಯ ವಿಂಗಡಿಸದ ಕೋರಮಂಗಲದ ‘ಭೀಮಾ ಜ್ಯುವೆಲ್ಲರಿ’ ಮಳಿಗೆಗೆ ಬೆಂಗಳೂರು ದಕ್ಷಿಣ ನಗರ ಪಾಲಿಕೆ ಅಧಿಕಾರಿಗಳು 50,839 ರೂ. ದಂಡ ವಿಧಿಸಿ ವಸೂಲಿ ಮಾಡಿದ್ದಾರೆ.
ಬಿಟಿಎಂ ಲೇಔಟ್ ವಿಧಾನಸಭಾ ಕ್ಷೇತ್ರದ ಕೋರಮಂಗಲ 4ನೇ ಬ್ಲಾಕ್ ನ 8ನೇ ಮುಖ್ಯರಸ್ತೆಯಲ್ಲಿಪಾಲಿಕೆಯ ಮಾರ್ಷಲ್ ಗಳು ಗಸ್ತು ತಿರುಗುತ್ತಿದ್ದ ಸಂದರ್ಭದಲ್ಲಿಭೀಮಾ ಜ್ಯುವೆಲ್ಲರಿ ಮಳಿಗೆಯ ಸಿಬ್ಬಂದಿಯು ಹಸಿ ಮತ್ತು ಒಣ ಕಸವನ್ನು ವಿಂಗಡಿಸದೆ, ಪಾದಚಾರಿ ಮಾರ್ಗದ ಬದಿಯಲ್ಲಿಬಿಸಾಡುತ್ತಿದ್ದರು. ಈ ಹಿನ್ನೆಲೆಯಲ್ಲಿಘನತ್ಯಾಜ್ಯ ನಿರ್ವಹಣೆ ನಿಯಮಗಳನ್ನು ಉಲ್ಲಂಘಿಸಿದ ಭೀಮಾ ಜ್ಯುವೆಲ್ಲರಿ ಸಂಸ್ಥೆಗೆ 50 ಸಾವಿರ ರೂ. ಮೂಲ ದಂಡ, 839 ರೂ. ಸೇವಾ ಶುಲ್ಕ ಸೇರಿ 50,839 ರೂ. ದಂಡ ವಿಧಿಸಲಾಗಿದೆ.