ಸ್ಪರ್ಧಾತ್ಮಕ ಪರೀಕ್ಷೆ ಸಿದ್ಧತೆಗೆ ತಂತ್ರಜ್ಞಾನ ಪೂರಕ

Contributed bypeerasab995@gmail.com|Vijaya Karnataka
Vijay Karnataka
* ವಿಎಸ್ ಕೆ ವಿವಿಯಲ್ಲಿಕೆ-ಸೆಟ್ ಪರೀಕ್ಷಾ ತರಬೇತಿ ಶಿಬಿರ

ಸ್ಪರ್ಧಾತ್ಮಕ ಪರೀಕ್ಷೆ ಸಿದ್ಧತೆಗೆ ತಂತ್ರಜ್ಞಾನ ಪೂರಕ
ವಿಕ ಸುದ್ದಿಲೋಕ ಬಳ್ಳಾರಿ

‘‘ಇಂದಿನ ದಿನಮಾನಗಳಲ್ಲಿಯಾವುದೇ ಮಾದರಿಯ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸಲು ತಂತ್ರಜ್ಞಾನದ ಸಮರ್ಪಕ ಬಳಕೆ ಸೂಕ್ತ,’’ ಎಂದು ಕೊಪ್ಪಳ ವಿಶ್ವವಿದ್ಯಾಲಯದ ಪರೀಕ್ಷಾಂಗ ಕುಲಸಚಿವ ಪೊ›.ಕೆ.ರಮೇಶ್ ಹೇಳಿದರು.

ಇಲ್ಲಿನ ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದಲ್ಲಿಹಮ್ಮಿಕೊಂಡಿದ್ದ ಕೆ-ಸೆಟ್ ಪರೀಕ್ಷಾ ತರಬೇತಿ ಶಿಬಿರದಲ್ಲಿಸೋಮವಾರ ಮಾತನಾಡಿದರು.

‘‘ತಂತ್ರಜ್ಞಾನ ಎಲ್ಲಕ್ಷೇತ್ರದಲ್ಲಿಮನೆಮಾಡಿದೆ. ಆಧುನಿಕ ವಿದ್ಯಮಾನಗಳಿಗೆ ತಕ್ಕಂತೆ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಕಾಲಕ್ರಮೇಣ ಆಧುನೀಕರಣಗೊಂಡು ನವವಿಜ್ಞಾನಗಳನ್ನು, ಕೌಶಲ ಕಲಿಯಬೇಕು. ವಿಶ್ವದಲ್ಲಿನಡೆಯುವ ಹೊಸ ಆವಿಷ್ಕಾರಗಳು, ಸಂಶೋಧನಾ ಕ್ರಮಗಳನ್ನು ಅವಲೋಕಿಸುವ ಕಲೆ ಎಲ್ಲರೂ ಕಲಿಯಬೇಕು,’’ ಎಂದು ತಿಳಿಸಿದರು.

ದಾವಣಗೆರೆ ವಿಶ್ವವಿದ್ಯಾಲಯದ ಅರ್ಥಶಾಸ್ತ್ರ ಪ್ರಾಧ್ಯಾಪಕ ಪೊ›.ರಂಗಪ್ಪ ಮಾತನಾಡಿ, ‘‘ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಕೇವಲ ಓದುವ ಹವ್ಯಾಸದಿಂದ ಪಾಸಾಗÜಲು ಸಾಧ್ಯವಿಲ್ಲ. ಬದಲಾಗಿ ನಿರ್ದಿಷ್ಟ ಕ್ರಮಾಂಕದ ಓದುವ ಪರಿಕ್ರಮಗಳನ್ನು ಪಟ್ಟಿ ಮಾಡಿಕೊಂಡು ಆ ಪ್ರಕಾರ ಯೋಜನೆ ರೂಪಿಸಿ ಅಧ್ಯಯನ ಮಾಡಬೇಕು,’’ ಎಂದರು.

‘‘ಕೆ-ಸೆಟ್ ಪರೀಕ್ಷೆಗಳಲ್ಲಿಬೋಧನೆ, ಸಂಶೋಧನೆ, ಸಂವಹನ, ಗಣಿತ, ತಂತ್ರಜ್ಞಾನ, ಪರಿಸರ ಹಾಗೂ ಉನ್ನತ ಶಿಕ್ಷಣಕ್ಕೆ ಪೂರಕವಾಗಿರುವ ಪಠ್ಯಗಳನ್ನು ಸಂಯೋಜಿಸಿ ಪ್ರಶ್ನೆಪತ್ರಿಕೆ ಸಿದ್ಧಪಡಿಸುತ್ತಾರೆ. ಈ ನಿಟ್ಟಿನಲ್ಲಿವಿದ್ಯಾರ್ಥಿಗಳು ಜ್ಞಾನಾರ್ಜನೆ, ಅರ್ಥೈಸಿಕೊಳ್ಳುವಿಕೆ ಹಾಗೂ ಅಳವಡಿಸಿಕೊಳ್ಳುವಿಕೆ ಎಂಬ ಮೂರು ತತ್ತ್ವಗಳ ಆಧಾರದ ಮೇಲೆ ತಮ್ಮನ್ನು ಪರೀಕ್ಷೆಗಳಿಗೆ ಸನ್ನದ್ಧರನ್ನಾಗಿಸಿಕೊಳ್ಳಬೇಕು,’’ ಎಂದು ತಿಳಿಸಿದರು.

ವಿಎಸ್ ಕೆವಿವಿಯ ಕುಲಪತಿ ಪೊ›.ಎಂ.ಮುನಿರಾಜು ಮಾತನಾಡಿ, ‘‘ಕೇವಲ ಒಂದು ಅಥವಾ ಎರಡು ದಿನಗಳ ತರಬೇತಿಯಿಂದ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿಉತ್ತೀರ್ಣರಾಗಲು ಸಾಧ್ಯವಿಲ್ಲ. ಹೀಗಾಗಿ ವಿಶ್ವವಿವಿದ್ಯಾಲಯದಲ್ಲಿಕೆಎಎಸ್ -ಐಎಎಸ್ ಪರೀಕ್ಷಾ ತರಬೇತಿಯನ್ನು ದಿನವೂ ನೀಡಲು ವಿಶ್ವವಿದ್ಯಾಲಯವು ಯೋಜನೆ ರೂಪಿಸಿದ್ದು, ಶೀಘ್ರವೇ ಕಾರ್ಯರೂಪಕ್ಕೆ ಬರಲಿದೆ,’’ ಎಂದು ಘೋಷಿಸಿದರು.

ಇದೇ ಸಂದರ್ಭದಲ್ಲಿಸ್ನಾತಕೋತ್ತರ ಪದವಿ ಹಂತದಲ್ಲಿಕೆ-ಸೆಟ್ ಪರೀಕ್ಷೆ ಉತ್ತೀರ್ಣವಾಗಿರುವ ವಿವಿಯ ವಿದ್ಯಾರ್ಥಿಗಳಿಗೆ ಸನ್ಮಾನಿಸಲಾಯಿತು. ಐಕ್ಯುಎಸಿ ನಿರ್ದೇಶಕ ಪೊ›.ತಿಪ್ಪೇರುದ್ರಪ್ಪ ಜೆ., ಸಮಾಜ ವಿಜ್ಞಾನ ನಿಕಾಯದ ಡೀನರಾದ ಪೊ›.ಓ.ಮಾರಣ್ಣ, ಅರ್ಥಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ.ಶಶಿಧರ್ , ಪ್ರಾಧ್ಯಾಪಕ ಪೊ›.ಮೇಧಾನಿ ಕಟ್ಟಿ, ಆಂಧ್ರಪ್ರದೇಶದ ನೆಲ್ಲೂರಿನ ಎನ್ ಸಿಇಆರ್ ಟಿಯ ಸಹ ಪ್ರಾಧ್ಯಾಪಕ ಡಾ.ಪ್ರಕಾಶ್ ಬಡಿಗೇರ್ ಸೇರಿ ಕೆ-ಸೆಟ್ ಪರೀಕ್ಷೆ ತರಬೇತಿ ಶಿಬಿರದಲ್ಲಿ200ಕ್ಕೂ ಹೆಚ್ಚು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

.............

21 ಬಿಎಲ್ ವೈ ಪೀರಾಸಾಬ್ 01

ಬಳ್ಳಾರಿಯ ವಿಎಸ್ ಕೆ ವಿಶ್ವವಿದ್ಯಾಲಯದಲ್ಲಿಹಮ್ಮಿಕೊಂಡಿದ್ದ ಎರಡು ದಿನಗಳ ಕೆ-ಸೆಟ್ ಪರೀಕ್ಷಾ ತರಬೇತಿ ಶಿಬಿರದಲ್ಲಿಪುಸ್ತಕ ಬಿಡುಗಡೆಗೊಳಿಸಿದರು.

21 ಬಿಎಲ್ ವೈ ಪೀರಾಸಾಬ್ 02

ಬಳ್ಳಾರಿಯ ವಿಎಸ್ ಕೆ ವಿಶ್ವವಿದ್ಯಾಲಯದಲ್ಲಿಹಮ್ಮಿಕೊಂಡಿದ್ದ ಎರಡು ದಿನಗಳ ಕೆ-ಸೆಟ್ ಪರೀಕ್ಷಾ ತರಬೇತಿ ಶಿಬಿರದಲ್ಲಿವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.