ಕಾಸರಗೋಡು: ಕೇರಳ ರಾಜ್ಯ ಜೀವ ವೈವಿಧ್ಯ ಮಂಡಳಿಯ 19ನೇ ಮಕ್ಕಳ ಕಾಂಗ್ರೆಸ್ ಕಾಸರಗೋಡು ಜಿಲ್ಲಾಮಟ್ಟದ ಸ್ಪರ್ಧೆಗಳು ಪಿಲಿಕ್ಕೋಡು ಸಿ. ಕೆ. ಎನ್ . ಎಸ್ . ಸರಕಾರಿ ಹೈಯರ್ ಸೆಕೆಂಡರಿ ಶಾಲೆಯಲ್ಲಿ ನಡೆದುವು. ಜಿಲ್ಲೆಯ ಐವತ್ತರಷ್ಟು ಶಾಲೆಗಳಿಂದಾಗಿ 160ರಷ್ಟು ವಿದ್ಯಾರ್ಥಿಗಳು ನಾನಾ ಸ್ಪರ್ಧೆಗಳಲ್ಲಿಭಾಗವಹಿಸಿದ್ದರು.
ಸಮಾರೋಪ ಸಮಾರಂಭದ ಉದ್ಘಾಟನೆ ಹಾಗೂ ಪಿಲಿಕ್ಕೋಡು ಪಂಚಾಯಿತಿಯ ಎಲ್ಲ ಶಾಲೆಗಳಲ್ಲಿ ಜೀವ ವೈವಿಧ್ಯ ಕ್ಲಬ್ ಗಳನ್ನು ರಚಿಸಿರುವುದರ ಘೋಷಣೆಯನ್ನು ಜಿಲ್ಲಾಪಂಚಾಯಿತಿ ಉಪಾಧ್ಯಕ್ಷೆ ಕೆ.ಕೆ.ಸೋಯ ನೆರವೇರಿಸಿದರು.ಪಂಚಾಯಿತಿ ಅಧ್ಯಕ್ಷ ಇ.ಕುಞಿರಾಮನ್ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾಪಂಚಾಯಿತಿ ಬಿಎಂಸಿ ಸಂಚಾಲಕ ಪಿ.ಕೆ.ಮುಕುಂದನ್ , ಪಂಚಾಯಿತಿ ಉಪಾಧ್ಯಕ್ಷೆ ಚಂದ್ರಮತಿ, ಪಿಇಸಿ ಸಂಚಾಲಕ ಜಯದೀಪ್ ಮಾಸ್ಟರ್ , ಪೊಲ್ಲಪೊ್ಪೕಯಿಲ್ ಶಾಲಾ ಮುಖ್ಯಸ್ಥ ಎಚ್ .ಎಂ.ಪ್ರದೀಪ್ ಮಾಸ್ಟರ್ , ಬಿಎಂಸಿ ಸದಸ್ಯ ಎಂ. ವಿನಯನ್ ಮಾತನಾಡಿದರು. ಕೇರಳ ರಾಜ್ಯ ಜೀವ ವೈವಿಧ್ಯ ಮಂಡಳಿ ಜಿಲ್ಲಾಸಂಯೋಜಕಿ ಅಖಿಲ ವಿ.ಎಂ.ಸ್ವಾಗತಿಸಿ, , ಶಾಲಾ ಮುಖ್ಯ ಶಿಕ್ಷಕಿ ಸಿ. ಕೆ. ಲತ ವಂದಿಸಿದರು. ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.ಚಿತ್ರ: 20ಕೆಎಸ್ ಎಲ್ ಜೀವ
ಪಿಲಿಕ್ಕೋಡು ಸಿ. ಕೆ. ಎನ್ . ಎಸ್ . ಸರಕಾರಿ ಹೈಯರ್ ಸೆಕೆಂಡರಿ ಶಾಲೆಯಲ್ಲಿ ಸ್ಪರ್ಧೆಗಳು ನಡೆದವು.