ಬಸ್ಸಿನಲ್ಲಿಸೀಟಿಗಾಗಿ ಕಾಯ್ದಿರಿಸಿದ ಬ್ಯಾಗನ್ನು ಪಕ್ಕದಲ್ಲಿಕುಳಿತಿದ್ದ ವ್ಯಕ್ತಿ ಎಗರಿಸಿ ಪರಾರಿಯಾದ ಘಟನೆ ಸುಳ್ಯದ ಬಸ್ ನಿಲ್ದಾಣದಲ್ಲಿನಡೆದಿದೆ.ಮಡಿಕೇರಿ ಕಡೆಯಿಂದ ಮಂಗಳೂರು ಕಡೆಗೆ ಬರುತ್ತಿದ್ದ ಕೆಎಸ್ ಆರ್ ಟಿಸಿ ಬಸ್ಸಿನಲ್ಲಿದ್ದ ಮಹಿಳೆಯೊಬ್ಬರು ಸುಳ್ಯ ಬಸ್ಸು ನಿಲ್ದಾಣದಲ್ಲಿತನ್ನ ಮಗುವಿನೊಂದಿಗೆ ಕೆಳಗಿಳಿಯುವಾಗ ಸೀಟು ಕಾದಿರಿಸಲೆಂದು ತನ್ನ ಬ್ಯಾಗನ್ನು ಸೀಟಲ್ಲಿರಿಸಿದರು. ಸ್ವಲ್ಪ ಹೊತ್ತಿನ ಬಳಿಕ ಹಿಂತಿರುಗಿ ಬಂದು ಬಸ್ಸು ಹತ್ತಿದಾಗ ಸೀಟಿಗಾಗಿ ಇರಿಸಿದ್ದ ಬ್ಯಾಗನ್ನು ಪಕ್ಕದಲ್ಲಿಕುಳಿತಿದ್ದ ವ್ಯಕ್ತಿ ಎಗರಿಸಿ ಪರಾರಿಯಾಗಿದ್ದಾನೆ.
ಸುಳ್ಯ ಬಸ್ಸು ನಿಲ್ದಾಣದಲ್ಲಿಮಗುವಿಗೆ ವಾಂತಿ ಬಂದ ಹಿನ್ನೆಲೆಯಲ್ಲಿತನ್ನ ಕೈಯಲ್ಲಿದ್ದ ಬ್ಯಾಗನ್ನು ಸೀಟಿನಲ್ಲಿಇಟ್ಟು ಕೆಳಗಿಳಿದರೆನ್ನಲಾಗಿದೆ. ಹಣವಿದ್ದ ಪರ್ಸ್ ಮತ್ತು ಮೊಬೈಲ್ ಆ ಬ್ಯಾಗಲ್ಲೆಇತ್ತೆನ್ನಲಾಗಿದೆ. ಮಗುವನ್ನು ವಾಂತಿ ಮಾಡಿಸಿ ಮುಖ ತೊಳೆದು ಹಿಂತಿರುಗಿ ಬಸ್ಸು ಹತ್ತಿದಾಗ ಸೀಟಲ್ಲಿರಿಸಿದ್ದ ಬ್ಯಾಗ್ ಕಾಣೆಯಾಗಿತ್ತು. ಅದೇ ಸೀಟಲ್ಲಿಕುಳಿತ್ತಿದ್ದ ವ್ಯಕ್ತಿ ಕೂಡ ನಾಪತ್ತೆಯಾಗಿದ್ದ, ಕೂಡಲೇ ಮಹಿಳೆ ಬಸ್ಸಿನಲ್ಲಿದ್ದ ಪ್ರಯಾಣಿಕರು ಮತ್ತು ಕಂಡಕ್ಟರ್ ಗೆ ವಿಷಯ ತಿಳಿದರಲ್ಲದೆ, ನಿಲ್ದಾಣದ ಟಿ.ಸಿ. ಗೆ ಮಾಹಿತಿ ನೀಡಿದರು. ಅವರು ಮಹಿಳೆಯನ್ನು ಸಮಾಧಾನಪಡಿಸಿ ಬಸ್ ಸ್ಟಾ್ಯಂಡಿನಲ್ಲಿರುವ ಸಿಸಿಟಿವಿ ಫೂಟೇಜ್ ಪರಿಶೀಲಿಸಿದಾಗ ವ್ಯಕ್ತಿಯೊಬ್ಬ ಆ ಮಹಿಳೆಯ ಬ್ಯಾಗಿನೊಂದಿಗೆ ಬಸ್ ಇಳಿದು ಬ್ಯಾಗನ್ನು ಹಿಡಿದುಕೊಂಡು ಬಸ್ ನಿಲ್ದಾಣ ದಾಟಿ ಸಿ.ಎ.ಬ್ಯಾಂಕ್ ಬಳಿಯಿಂದಾಗಿ ಪ್ರಕಾಶ್ ಥಿಯೇಟರ್ ಕಡೆ ಹೋಗುವುದು ಕಂಡುಬಂತು. ಬಳಿಕ ಮಹಿಳೆ ಸುಳ್ಯ ಪೊಲೀಸ್ ಠಾಣೆಯಲ್ಲಿದೂರು ನೀಡಿದ್ದು ಪೊಲೀಸರು ಕೇಸು ದಾಖಲಿಸಿಕೊಂಡು ಆರೋಪಿಯ ಪತ್ತೆಗೆ ಬಲೆ ಬೀಸಿದ್ದಾರೆ.