ಕನಕಗಿರಿ: ‘‘ಯುವಕರು ಧಾರ್ಮಿಕ ಹಾಗೂ ಸಾಮಾಜಿಕ ಕಾರ್ಯಗಳಲ್ಲಿ ಪಾಲ್ಗೊಂಡು, ಸಮಾಜಮುಖಿ ಚಟುವಟಿಕೆಗಳಿಗೆ ಕೈಜೋಡಿಸಬೇಕು’’ ಎಂದು ಸಿಂಧನೂರಿನ ಸೋಮನಾಥ ಸ್ವಾಮೀಜಿ ಹೇಳಿದರು.ತಾಲೂಕಿನ ನವಲಿ ಗ್ರಾಮದಲ್ಲಿಶ್ರೀ ಜಡೆಸಿದ್ಧೇಶ್ವರ ಗೆಳೆಯರ ಬಳಗದಿಂದ ಭಾನುವಾರ ನಡೆದ ರಸಮಂಜರಿ ಕಾರ್ಯಕ್ರಮದಲ್ಲಿಮಾತನಾಡಿದರು.
ಮಸ್ಕಿಯ ವರರುದ್ರಮುನಿ ಸ್ವಾಮೀಜಿ ಹಾಗೂ ನವಲಿಯ ಮರ್ಕಂಡಯ್ಯ ಸ್ವಾಮೀಜಿ ಸಾನ್ನಿಧ್ಯ ವಹಿಸಿ ಮಾತನಾಡಿದರು.
ಗ್ರಾ.ಪಂ.ಮಾಜಿ ಸದಸ್ಯ ಸಿದ್ದರಾಮಗೌಡ ಉಪ್ಪಳ, ಜಡೆಸಿದ್ಧೇಶ್ವರ ಗೆಳೆಯರ ಬಳಗದ ಪದಾಧಿಕಾರಿಗಳು, ಸದಸ್ಯರು, ಮುಖಂಡರು ಇದ್ದರು.
ಕನಕಗಿರಿ ತಾಲೂಕಿನ ನವಲಿ ಗ್ರಾಮದಲ್ಲಿಶ್ರೀ ಜಡೆಸಿದ್ಧೇಶ್ವರ ಗೆಳೆಯರ ಬಳಗದಿಂದ ಭಾನುವಾರ ನಡೆದ ರಸಮಂಜರಿ ಕಾರ್ಯಕ್ರಮದಲ್ಲಿಮಾತನಾಡಿದರು.