ಸಂಘದ ಅಭಿವೃದ್ಧಿಗೆ ಎಲ್ಲರ ಸಹಕಾರ ಅಗತ್ಯ

Contributed bynarashimhasetty1971@gmail.com|Vijaya Karnataka
Vijay Karnataka
ಸಂಘದ ಅಭಿವೃದ್ಧಿಗೆ ಎಲ್ಲರ ಸಹಕಾರ ಅಗತ್ಯ

ವಿಕ ಸುದ್ದಿಲೋಕ ನಂಗಲಿ
ಹಾಲು ಉತ್ಪಾದಕರ ಸಹಕಾರ ಸಂಘದ ಅಭಿವೃದ್ಧಿ ಹಾಗೂ ಆರ್ಥಿಕ ಪ್ರಗತಿಗೆ ಆಡಳಿತ ಮಂಡಳಿ ಮತ್ತು ಸಿಬ್ಬಂದಿಯೊಂದಿಗೆ ಪ್ರತಿಯೊಬ್ಬ ಸದಸ್ಯರು ಸಹಕಾರ ನೀಡಬೇಕೆಂದು ಉಪ್ಪರಹಳ್ಳಿ ಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ವಿ.ರಮೇಶ್ ಬಾಬು ಹೇಳಿದರು.

ಬೈರಕೂರು ಹೋಬಳಿ ಮುಸ್ಟೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಉಪ್ಪರಹಳ್ಳಿ ಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂಘದ ಕಚೇರಿ ಆವರಣದಲ್ಲಿಹಮ್ಮಿಕೊಂಡಿದ್ದ ವಾರ್ಷಿಕ ಮಹಾಸಭೆಯನ್ನು ಉದ್ದೇಶಿಸಿ ಮಾತನಾಡಿದರು.

ಸಂಘದ ಬೆಳವಣಿಗೆಯಲ್ಲಿಹಾಲು ಉತ್ಪಾದಕರ ಪಾತ್ರ ಮಹತ್ವದ್ದಾಗಿದೆ. ರೈತರು ಗುಣಮಟ್ಟದ ಹಾಲನ್ನು ಸಂಘಕ್ಕೆ ಪೂರೈಸುವದೊಂದಿಗೆ ಸಂಘದ ಚಟುವಟಿಕೆಗಳಲ್ಲಿಭಾಗವಹಿಸಬೇಕೆಂದು ತಿಳಿಸಿದರು.

ಹೈನುಗಾರಿಕೆಯನ್ನು ನಂಬಿರುವ ರೈತರಿಗೆ ಹಾಲು ಉತ್ಪಾದನೆಗೆ ಪ್ರಮುಖ ಮೂಲಾಧಾರವಾಗಿದೆ. ಸಂಘದ ಮೂಲಕ ಹಾಲು ಮಾರಾಟ ಮಾಡುವುದರಿಂದ ನಿಯಮಿತ ಆದಾಯ ದೊರೆಯುತ್ತದೆ. ಹಾಲಿನ ಗುಣಮಟ್ಟವನ್ನು ಕಾಪಾಡಿಕೊಂಡು ಹೆಚ್ಚಿನ ಪ್ರಮಾಣದಲ್ಲಿಹಾಲು ಉತ್ಪಾದನೆ ಮಾಡುವ ಮೂಲಕ ರೈತರು ತಮ್ಮ ಆದಾಯವನ್ನು ಹೆಚ್ಚಿಸಿಕೊಳ್ಳಬಹುದು ಎಂದು ತಿಳಿಸಿದರು.

ಸಂಘವು ಪ್ರಸಕ್ತ ಸಾಲಿನಲ್ಲಿ4,30,194 ರೂ. ನಿವ್ವಲ ಲಾಭ ಗಳಿಸಿದ್ದು ಸಂಘದಲ್ಲಿ100 ರೂ. ಮೌಲ್ಯದ ಹಾಲು ವ್ಯವಹಾರ ಮಾಡುವ ರೈತರಿಗೆ 1.34 ರೂ. ನಂತೆ ಬೋನಸ್ ನೀಡಲಾಗುತ್ತಿದೆ ಹಾಗೂ ಒಕ್ಕೂಟದಿಂದ ದೊರೆಯುವ ಎಲ್ಲಾಸೌಲಭ್ಯಗಳನ್ನು ನೇರವಾಗಿ ರೈತರಿಗೆ ತಲುಪಿಸುವ ಮೂಲಕ ಸದಸ್ಯರಿಗೆ ಪ್ರಯೋಜನ ದೊರಕುವಂತಾಗಿದೆ ಎಂದು ಹೇಳಿದರು

ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ವಿ.ರಮೇಶ್ ಬಾಬು, ವಿಸ್ತೀರ್ಣ ಅಧಿಕಾರಿ ಆರ್ .ಜಿ.ಶ್ರೀನಿವಾಸ್ , ಮುಖ್ಯ ಕಾರ್ಯನಿರ್ವಾಹಕ ಬಿ.ಶಿವಕುಮಾರ್ , ನಿರ್ದೇಶಕರಾದ ಟಿ. ಎಂ ಸುಬ್ರಮಣಿ, ಎನ್ ಪ್ರಭಾಕರ್ , ಚಿನ್ನಪ್ಪ ರೆಡ್ಡಿ, ಜಿ.ವಿ.ರವಿ, ಬಿ.ಮಲ್ಲೇಶ್ , ವೇಣು ರೆಡ್ಡಿ, ಕೆ.ಶಿವಶಂಕರಪ್ಪ ವೆಂಕಟಸ್ವಾಮಿ, ಚನ್ನಮ್ಮ, ಸರಸಮ್ಮ ಮತ್ತಿತರಿದ್ದರು

21. ನಂಗಲಿ ಫೋಟೋ.2 ಬೈರಕೂರು ಹೋಬಳಿ ಮುಷ್ಟೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಉಪ್ಪರಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದಲ್ಲಿವಾರ್ಷಿಕ ಸರ್ವ ಸದಸ್ಯರ ಸಾಮಾನ್ಯ ಸಭೆ ನಡೆಯಿತು.