ಹುಬ್ಬಳ್ಳಿ : ಇಲ್ಲಿನ ಕೃಷ್ಣಾಪುರ ಓಣಿ ನಿವಾಸಿ ಪ್ರಸನ್ನ ಬನ್ನಪ್ಪ ಗೌಡರ (69) ಕಳೆದ ಜನವರಿ ತಿಂಗಳಲ್ಲಿಕಾಣೆಯಾದ ಬಗ್ಗೆ ಹಳೆ ಹುಬ್ಬಳ್ಳಿ ಠಾಣೆಯಲ್ಲಿದೂರು ದಾಖಲಾಗಿದೆ. ಇಂಡಿಪಂಪ್ ಬಳಿಯ ಹೋಟೆಲ್ ವೊಂದರಲ್ಲಿಕೆಲಸ ಮಾಡುತ್ತಿದ್ದರು. ಆ ಹೋಟೆಲ್ ಬಂದ್ ಆದ ನಂತರ ಪ್ರಸನ್ನ ಅವರು, ಬೇರೆ ಊರಿನಲ್ಲಿಕೆಲಸ ಮಾಡುವುದಾಗಿ ಹೇಳಿ 10.1.2026ರಂದು ಹೋಗಿದ್ದಾರೆ. ಹೋದವರು ಮತ್ತೆ ಮನೆಗೆ ಬಂದಿಲ್ಲ. ಇವರನ್ನು ಹುಡುಕಿಕೊಡಿ ಎಂದು ಪ್ರಸನ್ನ ಅವರ ಪತ್ನಿ ಶಾಂತಮ್ಮ ಗೌಡರ ಹಳೇಹುಬ್ಬಳ್ಳಿ ಠಾಣೆಯಲ್ಲಿದೂರು ದಾಖಲಿಸಿದ್ದಾರೆ. ಕಾಣೆಯಾದ ವ್ಯಕ್ತಿಯು ಮೈಯಿಂದ ತೆಳುವಾದ ಮೈಕಟ್ಟು ಹೊಂದಿದ್ದಾರೆ. ಗೋದಿ ಗೆಂಪು ಮೈಬಣ್ಣ, ಅಗಲವಾದ ಹಣೆಮ ನೀತಾಟದ ಮೂಗು, ಸಣ್ಣ ದಾಡಿ ಇದ್ದು, ಈ ಚಹರೆವುಳ್ಳ ವ್ಯಕ್ತಿ ಕಾಣಸಿಕೊಂಡಲ್ಲಿಹಳೆ ಹುಬ್ಬಳ್ಳಿ ಪೊಲೀಸ್ ಠಾಣೆಗೆ ಮಾಹಿತಿ ನೀಡುವಂತೆ ಪೊಲೀಸರು ಮನವಿ ಮಾಡಿದ್ದಾರೆ.