ವಿದ್ಯಾರ್ಥಿಗಳ ಬದುಕಿನಲ್ಲಿಶಿಕ್ಷಣದ ಜತೆಗೆ ಕ್ರೀಡೆಯೂ ಕೂಡ ಬಹಳ ಮುಖ್ಯವಾಗಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಎಸ್ . ನಟರಾಜು ಹೇಳಿದರು.ಪಟ್ಟಣದ ಶುಭೋದಯ ಪ್ರೌಢಶಾಲಾ ಆವರಣದಲ್ಲಿಕಸಬಾ ಹೋಬಳಿಯ ಕ್ರೀಡಾಕೂಟ ಉದ್ಘಾಟಿಸಿ ಮಾತನಾಡಿದ ಅವರು, ವಿದ್ಯಾರ್ಥಿಗಳು ನಾಲ್ಕು ಗೋಡೆಯ ಮಧ್ಯೆ ಕಲಿಯುವ ಶಿಕ್ಷಣ ದ ಜತೆಗೆ ಕ್ರೀಡೆ, ಸಾಂಸ್ಕೃತಿಕ ಕಾರ್ಯಕ್ರಮಗಳು ಹಾಗೂ ಸ್ಪರ್ಧಾತ್ಮಕ ಜಗತ್ತಿನಲ್ಲಿಬದುಕುವುದಕ್ಕೆ ಎಲ್ಲಾರೀತಿಯ ಶಿಕ್ಷಣ ಮತ್ತು ಶಿಕ್ಷಣೇತರ ಚಟುವಟಿಕೆಗಳು ಅವಶ್ಯಕವಾಗಿವೆ. ಆಗ ಮಾತ್ರ ವಿದ್ಯಾರ್ಥಿಗಳ ಶೈಕ್ಷಣಿಕ ಜೀವನ ಪರಿಪೂರ್ಣವಾಗುತ್ತದೆ ಎಂದರು.
ಶುಭೋದಯ ವಿದ್ಯಾ ಸಂಸ್ಥೆಯ ಆಡಳಿತಾಧಿಕಾರಿ ಅಮರ್ ಮಾತನಾಡಿ, 38 ವರ್ಷಗಳಿಂದಲೂ ಸಹ ನಮ್ಮ ಸಂಸ್ಥೆಯು ಶಿಕ್ಷಣ ಮತ್ತು ಕ್ರೀಡೆಗೆ ಅತ್ಯಂತ ಹೆಚ್ಚಿನ ಮಹತ್ವ ನೀಡುತ್ತಾ ಬಂದಿದ್ದು, ಈ ಬಾರಿ ಕಸಬಾ ಹೋಬಳಿಯ ಕ್ರೀಡಾಕೂಟ ನಮ್ಮ ಸಂಸ್ಥೆಯಲ್ಲಿನಡೆಯುತ್ತಿರುವುದು ಖುಷಿ ನೀಡಿದೆ. ಆಗಮಿಸಿರುವಂತಹ ಎಲ್ಲಾವಿದ್ಯಾರ್ಥಿಗಳಿಗೂ ಕೂಡ ಎಲ್ಲಾರೀತಿಯ ಸೌಲಭ್ಯ ಒದಗಿಸಿಕೊಡಲು ನಾವು ಬದ್ಧರಾಗಿದ್ದು, ವಿದ್ಯಾರ್ಥಿಗಳು ಸೋಲು ಮತ್ತು ಗೆಲುವನ್ನು ಸಮಾನವಾಗಿ ಸ್ವೀಕರಿಸಿ ಕ್ರೀಡೆಯಲ್ಲಿಭಾಗವಹಿಸಿದಾಗ ಖಂಡಿತವಾಗಿ ಯಶಸ್ಸು ಕಾಣಬಹುದು ಎಂದು ಹೇಳಿದರು.
ಕ್ರೀಡಾ ಪ್ರೋತ್ಸಾಹಕ ಶಂಕರ್ ಕುಮಾರ್ ಮಾತನಾಡಿ, ಚಿಕ್ಕ ವಯಸ್ಸಿನಿಂದಲೇ ವಿದ್ಯಾರ್ಥಿಗಳು ಕ್ರೀಡೆಯತ್ತ ಮನಸು ಮಾಡಿದರೆ ಮುಂದಿನ ದಿನದಲ್ಲಿಉತ್ತಮವಾದ ಕ್ರೀಡಾಪಟುಗಳಾಗಿ ಬೆಳೆಯುವುದಕ್ಕೆ ಎಲ್ಲಾರೀತಿಯ ಸಹಕಾರವಾಗುತ್ತದೆ ಎಂದರು.
ದೈಹಿಕ ಶಿಕ್ಷಣಧಿಕಾರಿ ನಾಗರತ್ನ ಮಾತನಾಡಿ, ಹೋಬಳಿ ಮಟ್ಟದ ನಂತರ ತಾಲೂಕು, ಜಿಲ್ಲಾಮಟ್ಟದಲ್ಲಿಯೂ ಸಹ ವಿದ್ಯಾರ್ಥಿಗಳು ಭಾಗವಹಿಸಬೇಕಾಗಿದೆ. ಎಲ್ಲಹೋಬಳಿಗಳ ನಂತರ ತಾಲೂಕು ಮಟ್ಟದ ಕ್ರೀಡಾಕೂಟವು ಸಹ ನಡೆಯುತ್ತದೆ ಎಂದರು.
ಕ್ರೀಡಾಕೂಟದಲ್ಲಿಬಿಆರ್ ಸಿ ಮಧುಸೂದನ್ , ಪಟ್ಟಣ ಪಂಚಾಯಿತಿಯ ಮಾಜಿ ಸದಸ್ಯರಾದ ಶಿವಕುಮಾರ್ ಕೃಷ್ಣಮೂರ್ತಿ, ಕ್ರೀಡಾ ನಿರ್ದೇಶಕಿ ಪ್ರಾಥಮಿಕ ಪಾಠಶಾಲೆಯ ಪದಾಧಿಕಾರಿಗಳಾದ ಅರುಣ್ ಕುಮಾರ್ ಸಿಂಧು, ಶಶಿಧರ್ , ಸಹಾಯಕ ನಿರ್ದೇಶಕ ಜಗದೀಶ್ , ದೈಹಿಕ ಶಿಕ್ಷಣಾಧಿಕಾರಿ ನಾಗರತ್ನ, ಶಿಕ್ಷಕರ ಸಂಘದ ಪದಾಧಿಕಾರಿಗಳಾದ ಕಾಂತರಾಜು, ಚನ್ನಬಸವ, ಆರಾಧ್ಯ ಸೇರಿದಂತೆ ಶುಭೋದಯ ವಿದ್ಯಾ ಸಂಸ್ಥೆಯ ಎಲ್ಲಾಬೋಧಕರು, ಬೋಧಕೇತರರು, ಸಿಬ್ಬಂದಿ ವರ್ಗ, ಶಿಕ್ಷಕರು ವಿದ್ಯಾರ್ಥಿಗಳು ಹಾಜರಿದ್ದರು.
ಫೋಟೋ 31 ಗುಬ್ಬಿ 01: ಶುಭೋದಯ ವಿದ್ಯಾಸಂಸ್ಥೆಯಲ್ಲಿಹೋಬಳಿ ಮಟ್ಟದ ಕ್ರೀಡಾಕೂಟ ನಡೆಯಿತು.