ಕುಸಿದ ಟೊಮೇಟೊ ಬೆಲೆ ಕಷ್ಟದಲ್ಲಿರೈತ

Contributed bynkhvkkms@gmail.com|Vijaya Karnataka
farmers in distress as tomato prices plummet
ಈ ವರ್ಷ 3 ಸಾವಿರ ಹೆಕ್ಟೇರ್ ಗೆ ವಿಸ್ತರಣೆ | 15 ಕೆಜಿ ಬಾಕ್ಸ್ ಗೆ 100 ರೂ.| ಎಂಟು ಎಕರೆ ಟೊಮೇಟೊ ಬೆಳೆ ನಾಶ ಪಡಿಸಿದ ರೈತ(ಕಿಕ್ಕರ್ )

ಕುಸಿದ ಟೊಮೇಟೊ ಬೆಲೆ ಕಷ್ಟದಲ್ಲಿರೈತ
---

ಕೆ.ಎಂ.ಶಿವಸ್ವಾಮಿ ನಾಯಕನಹಟ್ಟಿ(ಚಿತ್ರದುರ್ಗ)

ಘ್ಕಿdvಜಛಿdಜಿಠಿಟ್ಟಃಜಞaಜ್ಝಿ.್ಚಟಞ

ಕಡಿಮೆ ಭೂಮಿಯಲ್ಲಿಹೆಚ್ಚು ಲಾಭ ಗಳಿಸುವ ಉದ್ದೇಶದಿಂದ ಬೆಳೆದ ಟೊಮೇಟೊ ಬೆಲೆ ನೆಲಕಚ್ಚಿದ್ದು, 15 ಕೆಜಿ ಬಾಕ್ಸ್ 100 ರೂ. ಕುಸಿದು ಬೆಳೆಗಾರರು ತೀವ್ರ ನಷ್ಟಕ್ಕೆ ಸಿಲುಕಿದ್ದಾರೆ. ಕೆಲವರು ರಸ್ತೆಬದಿಗೆ ಸುರಿಯುತ್ತಿದ್ದಾರೆ.

ಹೆಚ್ಚಿನ ಇಳುವರಿ ನೀಡುವ ಬೀಜದ ತಳಿಗಳು, ರೋಗ ನಿರ್ವಹಣೆಗೆ ಅಗತ್ಯವಾದ ಔಷದೋಪಚಾರ ಲಭ್ಯವಿರುವುದರಿಂದ ಟೊಮೇಟೊ ಬೆಳೆ ಭರ್ಜರಿಯಾಗಿ ದೊರೆಯತ್ತಿದೆ. ಹೀಗಾಗಿ ಇಲ್ಲಿಟೊಮೇಟೊ ಬೆಳೆಯುವ ಪ್ರದೇಶ ಮತ್ತು ಮಾರುಕಟ್ಟೆ ವಿಸ್ತರಣೆಯಾಗಿದೆ. ಸುತ್ತಲಿನ ಗ್ರಾಮಗಳ ಪ್ರಕಾಶ, ಎಸ್ .ಆರ್ .ತಿಪ್ಪೇಸ್ವಾಮಿ, ನಾರಾಯಣನಾಯ್ಕ, ಸೈಯದ್ ಭಾಷಾ ಸೇರಿದಂತೆ ನೂರಾರು ರೈತರು ಟೊಮೇಟೊವನ್ನು ದೊಡ್ಡ ಪ್ರಮಾಣದಲ್ಲಿಬೆಳೆದಿದ್ದಾರೆ.

ಚಳ್ಳಕೆರೆ ತಾಲೂಕಿನಲ್ಲಿಕಳೆದ ವರ್ಷ 1200 ಎಕರೆಗೂ ಹೆಚ್ಚಿನ ಪ್ರದೇಶದಲ್ಲಿಟೊಮೇಟೊ ಬೆಳೆಯಲಾಗಿತ್ತು. ಪ್ರಸಕ್ತ ಸಾಲಿನಲ್ಲಿಈ ಕ್ಷೇತ್ರ 3 ಸಾವಿರ ಹೆಕ್ಟೇರ್ ಗೆ ವಿಸ್ತರಣೆಯಾಗಿದೆ. ಹೆಚ್ಚಿನ ಇಳುವರಿ, ಕಡಿಮೆಯಾದ ಬೇಡಿಕೆಯಿಂದಾಗಿ ಬೆಲೆ ದಿಢೀರನೆ ಕುಸಿದಿದೆ. ಮೇ ತಿಂಗಳಿನಲ್ಲಿಒಂದು ಬಾಕ್ಸ್ (13ರಿಂದ 14 ಕೆಜಿ)ಗೆ 200 ರೂ.ಗಳಿತ್ತು. ಆದರೆ ಶುಕ್ರವಾರ ಇಲ್ಲಿನ ನೇರಲಗುಂಟೆ ಮಾರುಕಟ್ಟೆಯಲ್ಲಿಒಂದು ಬಾಕ್ಸ್ ಗೆ 70ರಿಂದ 100 ರೂ.ಗೆ ಕುಸಿದಿದೆ.

ವಿಸ್ತರಣೆಯಾದ ಮಾರುಕಟ್ಟೆ:

ಮೂರ್ನಾಲ್ಕು ವರ್ಷಗಳ ಹಿಂದೆ ಇಲ್ಲಿಬೆಳೆದ ಟೊಮೇಟೊ ನೇರ ಕೋಲಾರಕ್ಕೆ ಕಳಿಸಬೇಕಾಗಿತ್ತು. ಆದರೆ ಒಂದು ವರ್ಷದಲ್ಲಿಮಾರಾಟಕ್ಕೆ ಸಮೀಪದಲ್ಲಿಯೇ ಮಾರುಕಟ್ಟೆಗಳು ಆರಂಭವಾಗಿವೆ. ನೇರಲಗುಂಟೆ, ಆದಿವಾಲ, ಬುಡ್ನಹಟ್ಟಿಗಳಲ್ಲಿಕೇವಲ ಟೊಮೇಟೊ ಮಾರುಕಟ್ಟೆಗಳು ಆರಂಭವಾಗಿರುವುದು ವಿಸ್ತರಣೆಯಾಗಿರುವ ಮಾರುಕಟ್ಟೆಯ ಪ್ರಮಾಣವನ್ನು ಸೂಚಿಸುತ್ತದೆ.

ಟೊಮೇಟೊ ಕಿತ್ತು ಮೆಕ್ಕೆಜೋಳ ಬಿತ್ತಿದ ರೈತ:

ಎನ್ .ಮಹಾದೇವಪುರ ಗ್ರಾಮದ ರೈತ ಓಬಯ್ಯ, ಎಂಟು ಎಕರೆಯಲ್ಲಿಟೊಮೇಟೊ ಬೆಳೆದಿದ್ದರು. ಮೋಡ ಮುಸುಕಿದ ವಾತಾವರಣದಿಂದ ಚುಕ್ಕೆ ರೋಗ ಹೆಚ್ಚಾಗಿದೆ. ದುಬಾರಿ ಬೆಲೆ ಔಷಧ ಬಳಸಿ ಬೆಳೆ ಉಳಿಸಿಕೊಂಡರೂ ಮಾರುಕಟ್ಟೆಯಲ್ಲಿಬೆಲೆಯಿಲ್ಲ. ಹೀಗಾಗಿ ತನ್ನ ಇಡೀ ಹೊಲವನ್ನು ಟ್ರ್ಯಾಕ್ಟರ್ ನಿಂದ ಟೊಮೇಟೊ ಬೆಳೆ ನಾಶಪಡಿಸಿ, ಮೆಕ್ಕೆಜೋಳ ಬಿತ್ತನೆ ಮಾಡಿದ್ದಾರೆ.

ಒಂದು ಎಕರೆಗೆ 1.5 ಲಕ್ಷ ರೂ.ಗಳಷ್ಟು ಬಂಡವಾಳದ ಅಗತ್ಯವಿದೆ. ಬಿತ್ತನೆ ಸಸಿ ಖರೀದಿ, ಗೂಟ, ಔಷಧ ಮತ್ತು ಕೂಲಿಕಾರ್ಮಿಕರು ಸೇರಿದಂತೆ ನಾನಾ ಖರ್ಚುಗಳನ್ನು ರೈತ ನಿಭಾಯಿಸಬೇಕಾಗಿದೆ. ಆದರೆ ಇದೀಗ ದೊರೆಯುತ್ತಿರುವ ಬೆಲೆ ಕಟಾವು ಮತ್ತು ಸಾಗಣೆಗೆ ಸಾಕಾಗುತ್ತಿದೆ. ಹೀಗಾಗಿ ಹಾಕಿದ ಬಂಡವಾಳ ಹಿಂದಿರುಗುವ ಲಕ್ಷಣಗಳೇ ಕಾಣುತ್ತಿಲ್ಲ. ಒಬ್ಬ ರೈತ ಟೊಮೇಟೊ ಬೆಳೆದು ಹೆಚ್ಚು ಸಂಪಾದಿಸಿದ ತಕ್ಷಣ ಉಳಿದ ಎಲ್ಲರೈತರು ಸಾಮೂಹಿಕ ಸನ್ನಿಯಂತೆ ಟೊಮೇಟೊ ಬೆಳೆಯುತ್ತಿರುವುದು ಇಂದಿನ ಪರಿಸ್ಥಿತಿಗೆ ಕಾರಣವಾಗಿದೆ. ಒಂದೇ ಬೆಳೆಯನ್ನು ಅವಲಂಬಿಸದೆ ಮಿಶ್ರಬೆಳೆ ಪದ್ಧತಿ ಅನುಸರಿಸಬೇಕು ಎನ್ನುವುದು ಕೃಷಿ ವಿಜ್ಞಾನಿಗಳ ಅಭಿಪ್ರಾಯವಾಗಿದೆ.

----

ಕೋಟ್ //

ಬೇಡಿಕೆಯ ಮಟ್ಟ ಒಂದೇ ಪ್ರಮಾಣದಲ್ಲಿದೆ. ಆದರೆ ಪೂರೈಕೆಯ ಹೆಚ್ಚಳ ಬೆಲೆ ಇಳಿಕೆಗೆ ಪ್ರಮುಖ ಕಾರಣ. ಟೊಮೇಟೊ ಶೀಘ್ರ ಕೆಡುವ ಬೆಳೆಯಾಗಿರುವುದರಿಂದ ಸರಕಾರದಿಂದ ಪರಿಹಾರ ನೀಡಲು ಅವಕಾಶಗಳಿಲ್ಲ. ದೊಡ್ಡ ಪ್ರಮಾಣದಲ್ಲಿಉತ್ಪಾದನೆ ಆಗುತ್ತಿರುವುದರಿಂದ ಸಾಸ್ ಅಥವಾ ಕೆಚಪ್ ಗಳಾಗಿ ಪರಿವರ್ತಿಸುವುದು ಕಷ್ಟ.

-ಡಾ.ಮಧು ಟಿ., ಹಿರಿಯ ಸಹಾಯಕ ನಿರ್ದೇಶಕರು, ತೋಟಗಾರಿಕಾ ಇಲಾಖೆ, ಚಳ್ಳಕೆರೆ

----

ಎನ್ . ಗೌರೀಪುರ ಮತ್ತು ಮಹಾದೇವಪುರ ಗ್ರಾಮಗಳಲ್ಲಿಒಟ್ಟು 16 ಎಕರೆ ಪ್ರದೇಶದಲ್ಲಿಟೊಮೇಟೊ ಬೆಳೆದಿದ್ದೇನೆ. ಅಂಗಮಾರಿ, ಬೂದಿ, ಚುಕ್ಕೆ ರೋಗ ಹೆಚ್ಚಾಗಿದೆ. ಜತೆಗೆ ಬೆಲೆ ಕುಸಿದಿರುವುದರಿಂದ ತೀವ್ರ ಕಷ್ಟವಾಗಿದೆ. ಸರಕಾರ ಟೊಮೇಟೊ ಬೆಳೆಗಾರರಿಗೆ ಪರಿಹಾರ ನೀಡುವುದಕ್ಕೆ ಯೋಜನೆ ರೂಪಿಸಬೇಕು.

-ಸೈಯದ್ ಭಾಷಾ, ಎನ್ . ಮಹಾದೇವಪುರ

---

31 ಎನ್ ಕೆಹೆಚ್ 1

ನಾಯಕನಹಟ್ಟಿ ಸಮೀಪದ ಎನ್ .ಮಹಾದೇವಪುರದಲ್ಲಿಟೊಮೇಟೊ ವಿಂಗಡಿಸುತ್ತಿರುವ ಕೃಷಿ ಕಾರ್ಮಿಕರು.

31 ಎನ್ ಕೆ ಹೆಚ್ 1 ಎ

ಎನ್ .ಮಹಾದೇವಪುರ ಗ್ರಾಮದಲ್ಲಿರಸ್ತೆ ಬದಿಗೆ ಸುರಿದಿರುವ ಟೊಮೇಟೊ.