ಕಾವೇರಿ ಜಟಾಪಟಿ ತೀವ್ರ

Contributed byKENCHE GOWDA|Vijaya Karnataka
kaveri water dispute call for karnataka bandh


ಆ.13ರ ಕರ್ನಾಟಕ ಬಂದ್ ಗೆ ಕರೆ, ಕೈಬಿಡುವಂತೆ ಕನ್ನಡ ಸಂಘಟನೆಗಳಿಗೆ ಮನವಿ
ಸರ್ವಪಕ್ಷ ಸಭೆ ತೀರ್ಮಾನ ಆಧರಿಸಿ ಮುಂದಿನ ಹೆಜ್ಜೆ ತುಳಿಯಲು ನಿರ್ಧಾರ

ರಾಜ್ಯದ ಹಿತ ಕಾಯಲು ಸರಕಾರ ಬದ್ಧ | ಸಿಎಂ ಡಿ.ಕೆ. ಶಿವಕುಮಾರ್ ಭರವಸೆ

ಮಂಡ್ಯದಲ್ಲಿಕೆಆರ್ ಎಸ್ ಚಲೋ, ಬಿಎಸ್ ವೈ ಸೇರಿ ಬಿಜೆಪಿ ಮುಖಂಡರ ಬಂಧನ

ವಿಕ ಸುದ್ದಿಲೋಕ ಬೆಂಗಳೂರು

ತಮಿಳುನಾಡಿಗೆ ಕಾವೇರಿ ನೀರು ಹರಿಸುವಂತೆ ಕಾವೇರಿ ನದಿ ನಿರ್ವಹಣಾ ಪ್ರಾಧಿಕಾರ ನೀಡಿರುವ ಆದೇಶದ ವಿರುದ್ಧ ರಾಜ್ಯಾದ್ಯಂತ ಆಕ್ರೋಶ ಭುಗಿಲೆದ್ದಿದೆ. ಈ ಬೆಳವಣಿಗೆಯ ನಡುವೆ ರೈತ ಹಾಗೂ ಕನ್ನಡಪರ ಸಂಘಟನೆಗಳು ಆಗಸ್ವ್ 13 ರಂದು ಅಖಂಡ ಕರ್ನಾಟಕ ಬಂದ್ ಗೆ ಕರೆ ನೀಡಿವೆ. ಆ ಹಿನ್ನೆಲೆಯಲ್ಲಿಸರ್ವಪಕ್ಷ ಮುಖಂಡರ ಸಭೆಯ ತೀರ್ಮಾನ ಆಧರಿಸಿ ಮುಂದಿನ ಹೆಜ್ಜೆ ಇಡಲು ಸರಕಾರ ನಿರ್ಧರಿಸಿದೆ. ಜತೆಗೆ, ಸರಕಾರದ ಪರವಾಗಿ ಸ್ಪಷ್ಟನೆ ನೀಡಿರುವ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ , ‘‘ರಾಜ್ಯದ ಹಿತ ಕಾಯಲು ಬದ್ಧವಾಗಿದ್ದು, ಬಂದ್ ನಿಂದ ಯಾವುದೇ ಪರಿಹಾರ ಸಿಗುವುದಿಲ್ಲವಾದ್ದರಿಂದ ಸಂಘಟನೆಗಳು ಬಂದ್ ಕರೆಯನ್ನು ಕೈಬಿಡಬೇಕು,’’ ಎಂದು ಮನವಿ ಮಾಡಿದ್ದಾರೆ.

ಪ್ರಾಧಿಕಾರದ ಆದೇಶದ ಹಿನ್ನೆಲೆಯಲ್ಲಿಮುಖ್ಯಮಂತ್ರಿಗಳು ಶುಕ್ರವಾರ ವಿಧಾನಸೌಧದಲ್ಲಿಸಂಬಂಧಪಟ್ಟ ಸಚಿವರು ಹಾಗೂ ಹಿರಿಯ ಅಧಿಕಾರಿಗಳ ಸಭೆ ನಡೆಸಿದರು. ಬಳಿಕ ಸುದ್ದಿಗೋಷ್ಠಿಯಲ್ಲಿಮಾತನಾಡಿದ ಸಿಎಂ ಡಿ.ಕೆ.ಶಿವಕುಮಾರ್ , ‘‘ಸರಕಾರ ರಾಜ್ಯದ ಹಿತಾಸಕ್ತಿ ಕಾಯಲು ಬದ್ಧವಾಗಿದೆ. ಯಾವುದೇ ಬಂದ್ ಅಗತ್ಯವಿಲ್ಲಮತ್ತು ಅದರಿಂದ ಯಾವುದೇ ಪರಿಹಾರವೂ ಸಿಗುವುದಿಲ್ಲ,’’ ಎಂದು ಮನವಿ ಮಾಡಿದರು.

ಇದಕ್ಕೆ ಮುನ್ನ ನಡೆದ ಸಭೆಯಲ್ಲಿಡಿಸಿಎಂ ಡಾ.ಜಿ.ಪರಮೇಶ್ವರ್ , ಜಲ ಸಂಪನ್ಮೂಲ ಸಚಿವ ರಾಮಲಿಂಗಾರೆಡ್ಡಿ, ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ , ಅಡ್ವೋಕೇಟ್ ಜನರಲ್ ಶಶಿಕಿರಣ್ ಶೆಟ್ಟಿ, ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗಳಾದ ತುಷಾರ್ ಗಿರಿನಾಥ್ , ಗೌರವ್ ಗುಪ್ತ, ರಾಜೇಂದ್ರ ಕುಮಾರ್ ಕಟಾರಿಯ, ಡಿಜಿಪಿ ಎಂ.ಎ.ಸಲೀಂ, ನಗರ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ಭಾಗವಹಿಸಿದ್ದರು.

ಧಿಧಿ---------------

ಕನ್ನಡ ಸಂಘಟನೆಗಳ ಎಚ್ಚರಿಕೆ

ಬೆಂಗಳೂರು: ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ (ಸಿಡಬ್ಲ್ಯೂಎಂಎ) ಆದೇಶ ಖಂಡಿಸಿ ಕನ್ನಡಪರ ಸಂಘಟನೆಗಳು ಆ.13ರಂದು ಅಖಂಡ ಕರ್ನಾಟಕ ಬಂದ್ ಗೆ ಕರೆ ಕೊಟ್ಟಿವೆ. ರಾಜಧಾನಿಯಲ್ಲಿಶುಕ್ರವಾರ ನಡೆದ ಕನ್ನಡಪರ ಹಾಗೂ ರೈತಪರ ಸಂಘಟನೆಗಳ ಸಭೆಯಲ್ಲಿತಮಿಳುನಾಡಿಗೆ ಕಾವೇರಿ ನೀರು ಹರಿಸದಂತೆ ಒಕ್ಕೊರಲಿನಿಂದ ಆಗ್ರಹಿಸಲಾಯಿತು.

ಸಭೆ ಬಳಿಕ ಮಾತನಾಡಿದ ಕನ್ನಡ ಹೋರಾಟಗಾರ ವಾಟಾಳ್ ನಾಗರಾಜ್ , ‘‘ಆ.13ರಂದು ಬೆಳಗಾವಿಯಿಂದ ಚಾಮರಾಜನಗರದವರೆಗೆ, ಮಂಗಳೂರಿನಿಂದ ಕೋಲಾರದವರೆಗೆ ರಾಜ್ಯಾದ್ಯಂತ ಬಂದ್ ನಡೆಯಲಿದೆ,’’ಎಂದು ತಿಳಿಸಿದರು.

ಕೆಆರ್ ಎಸ್ ಗೆ ಬಿಜೆಪಿ ಮುತ್ತಿಗೆ

ಮಂಡ್ಯ:ಕಾವೇರಿ ಹೋರಾಟದ ಕಿಚ್ಚು ಕೆಆರ್ ಎಸ್ ಜಲಾಶಯದವರೆಗೆ ವ್ಯಾಪಿಸಿದೆ. ಶುಕ್ರವಾರ ಮಾಜಿ ಮುಖ್ಯಮಂತ್ರಿ ಬಿ.ಎಸ್ .ಯಡಿಯೂರಪ್ಪ ನೇತೃತ್ವದಲ್ಲಿಕೆಆರ್ ಎಸ್ ಗೆ ಮುತ್ತಿಗೆ ಹಾಕಲೆತ್ನಿಸಿದ ಬಿಜೆಪಿಯ ನೂರಾರು ಮುಖಂಡರು ಮತ್ತು ಕಾರ ್ಯಕರ್ತರನ್ನು ಬಂಧಿಸಲಾಯಿತು.ಮಂಡ್ಯ, ಶ್ರೀರಂಗಪಟ್ಟಣ ಮತ್ತು ಕೆಆರ್ ಎಸ್ ನಲ್ಲಿಶುಕ್ರವಾರ ವಿನೂತನ ಪ್ರತಿಭಟನೆಗಳು ನಡೆದವು. ಅದರಲ್ಲೂಬಿಜೆಪಿ ನಡೆಸಿದ ಕೆಆರ್ ಎಸ್ ಚಲೋ ಶುಕ್ರವಾರದ ಕಾವೇರಿ ಹೋರಾಟದ ಕೇಂದ್ರಿತವಾಗಿತ್ತು. ಕೆಆರ್ ಎಸ್ ನ ದಕ್ಷಿಣ ದ್ವಾರದ ಬಳಿ ಜಮಾಯಿಸಿದ ನೂರಾರು ಬಿಜೆಪಿ ಮುಖಂಡರು ಮತ್ತು ಕಾರ ್ಯಕರ್ತರು ಜಲಾಶಯದತ್ತದ ನುಗ್ಗಲು ಯತ್ನಿಸಿದರು.

ವಿಜಯ…, ಈಗ ಬರುವುದು ಬೇಡ !

ಬೆಂಗಳೂರು: ಕಾವೇರಿ ನದಿ ನೀರಿನ ಬಳಕೆ ವಿಚಾರದಲ್ಲಿ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹಾಗೂ ತಮಿಳುನಾಡು ಸಿಎಂ ವಿಜಯ್ ನಡುವೆ ಆ.3ರಂದು ಸೋಮವಾರ ವಿಧಾನಸೌಧದಲ್ಲಿನಿಗದಿಯಾಗಿದ್ದ ಸಭೆ ಮುಂದೂಡಿಕೆಯಾಗಿದೆ.

‘‘ಈಗ ಪರಿಸ್ಥಿತಿ ಸರಿ ಇಲ್ಲ. ಹಾಗಾಗಿ, ಸದ್ಯ ರಾಜ್ಯಕ್ಕೆ ಬರುವುದು ಬೇಡ ಎಂಬುದಾಗಿ ನಾನು ತಮಿಳುನಾಡು ಸಿಎಂ ವಿಜಯ್ ಅವರಿಗೆ ಮನವಿ ಮಾಡಿದ್ದು, ಕೆಲ ದಿನಗಳ ಮಟ್ಟಿಗೆ ಸಭೆಯನ್ನು ಮುಂದೂಡಲಾಗಿದೆ,’’ ಎಂದು ಸಿಎಂ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ,

ಕಾನೂನು ತಜ್ಞರು ಹಾಗೂ ಪ್ರತಿಪಕ್ಷ ನಾಯಕರ ಸಲಹೆ ಪಡೆದು ಕಾವೇರಿ ನೀರಿನ ಮುಂದಿನ ತೀರ್ಮಾನ ಕೈಗೊಳ್ಳಲಾಗುವುದು. ಕರ್ನಾಟಕ ಬಂದ್ ಆಚರಣೆ ಬೇಡ. ಅದರಿಂದ ಯಾವ ಪರಿಹಾರವೂ ಸಿಗುವುದಿಲ್ಲ

-ಡಿ. ಕೆ. ಶಿವಕುಮಾರ್ , ಮುಖ್ಯಮಂತ್ರಿ