ಫಾಮ್ ರ್ ಹೌಸ್ ನಿರ್ಮಾಣ ಹೆಸರಲ್ಲಿ50 ಲಕ್ಷ ವಂಚನೆ ಆರೋಪ

Contributed byanjukumaranju6044@gmail.com|Vijaya Karnataka
50 lakhs scam under the disguise of farmhouse construction

ಇಬ್ಬರ ವಿರುದ್ಧ ಹಾರೋಹಳ್ಳಿ ಪೊಲೀಸ್ ಠಾಣೆಯಲ್ಲಿಪ್ರಕರಣ ದಾಖಲು

ವಿಕ ಸುದ್ದಿಲೋಕ ಹಾರೋಹಳ್ಳಿ

ಬೆಂಗಳೂರಿನ ಬಸವನಗುಡಿಯ ಖಾಸಗಿ ಇಎನ್ ಟಿ ವೈದ್ಯರೊಬ್ಬರಿಗೆ ಸುಮಾರು 50 ಲಕ್ಷಕ್ಕೂ ಹೆಚ್ಚು ಹಣ ವಂಚನೆ ಎಸಗಿದ ಆರೋಪದಡಿ ಇಬ್ಬರು ಸೇರಿದಂತೆ ಇತರರ ವಿರುದ್ಧ ಹಾರೋಹಳ್ಳಿ ಪೊಲೀಸ್ ಠಾಣೆಯಲ್ಲಿಪ್ರಕರಣ ದಾಖಲಾಗಿದೆ.

ದೂರುದಾರರಾದ ಡಾ. ಗೌರವ್ ಮೆಡಿಕೇರ್ ಅವರು ಬೆಂಗಳೂರಿನ ಬಸವನಗುಡಿಯಲ್ಲಿಕ್ಲಿನಿಕ್ ನಡೆಸುತ್ತಿದ್ದು, ಹಾರೋಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಮರಳವಾಡಿ ಸಮೀಪ ಫಾಮ್ ರ್ ಹೌಸ್ ಹೊಂದಿದ್ದಾರೆ.

ತಮ್ಮ ಫಾಮ್ ರ್ ಹೌಸ್ ಜಾಗದಲ್ಲಿಹೊಸ ಕಟ್ಟಡ ನಿರ್ಮಿಸಲು ನಿರ್ಧರಿಸಿದ್ದ ವೈದ್ಯರು, ಈ ಹಿಂದೆ ಕ್ಲಿನಿಕ್ ನವೀಕರಣ ಕಾಮಗಾರಿ ನಡೆಸಿಕೊಟ್ಟಿದ್ದ ಪ್ರತೀಕ್ ರಾವ್ ಹಾಗೂ ರಂಗನಾಥ್ ಅವರ ಮೇಲೆ ನಂಬಿಕೆ ಇಟ್ಟು ಮನೆ ನಿರ್ಮಾಣದ ಜವಾಬ್ದಾರಿ ವಹಿಸಿದ್ದರು ಎಂದು ತಿಳಿದುಬಂದಿದೆ.

ಆರೋಪಿಗಳು ಕಾಮಗಾರಿಗೆ ಸಂಬಂಧಿಸಿದಂತೆ ಹಂತ ಹಂತವಾಗಿ ಸುಮಾರು 50 ಲಕ್ಷಕ್ಕೂ ಅಧಿಕ ಹಣವನ್ನು ಪಡೆದುಕೊಂಡಿದ್ದಾರೆ. ಆದರೆ ಆರೋಗ್ಯ ಸಮಸ್ಯೆಯಿಂದಾಗಿ ವೈದ್ಯರು ಕೆಲಕಾಲ ಫಾಮ್ ರ್ ಹೌಸ್ ಗೆ ಭೇಟಿ ನೀಡಿರಲಿಲ್ಲ. ಇದನ್ನೇ ದುರುಪಯೋಗಪಡಿಸಿಕೊಂಡ ಆರೋಪಿಗಳು ಕಾಮಗಾರಿಯನ್ನು ಸಮರ್ಪಕವಾಗಿ ಪೂರ್ಣಗೊಳಿಸಿಲ್ಲಎಂದು ದೂರಿನಲ್ಲಿಆರೋಪಿಸಲಾಗಿದೆ.

ನಂತರ ಸ್ಥಳ ಪರಿಶೀಲನೆ ನಡೆಸಿದ ವೇಳೆ ಕಾಮಗಾರಿ ಅಪೂರ್ಣವಾಗಿರುವುದು ಕಂಡುಬಂದಿದ್ದು, ಈ ಬಗ್ಗೆ ಪ್ರಶ್ನಿಸಿದಾಗ ಆರೋಪಿಗಳು ಕಾಮಗಾರಿ ಪೂರ್ಣಗೊಳಿಸುವುದಿಲ್ಲಹಾಗೂ ಹಣವನ್ನೂ ಹಿಂತಿರುಗಿಸುವುದಿಲ್ಲಎಂದು ಬೆದರಿಕೆ ಹಾಕಿದ್ದಾರೆ ಎನ್ನಲಾಗಿದೆ. ಇದಲ್ಲದೆ, ಅಪರಿಚಿತ ಮೊಬೈಲ್ ಸಂಖ್ಯೆಗಳ ಮೂಲಕವೂ ಬೆದರಿಕೆ ಕರೆಗಳು ಬಂದಿದ್ದು, ಸಂಬಂಧಪಟ್ಟವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ದೂರಿನಲ್ಲಿಮನವಿ ಮಾಡಲಾಗಿದೆ.

ಈ ಸಂಬಂಧ ಮೊದಲು ಬಸವನಗುಡಿ ಪೊಲೀಸ್ ಠಾಣೆಯಲ್ಲಿದೂರು ದಾಖಲಾಗಿದ್ದು, ಪ್ರಕರಣದ ವ್ಯಾಪ್ತಿಯನ್ನು ಪರಿಗಣಿಸಿ ಹಾರೋಹಳ್ಳಿ ಪೊಲೀಸ್ ಠಾಣೆಗೆ ವರ್ಗಾಯಿಸಲಾಗಿದೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಪ್ರಕರಣದ ತನಿಖೆ ಮುಂದುವರಿದಿದೆ.