ವೆಲ್ನೆಸ್ ಟಿಫ್ಸ್

Contributed bybabitha.salian@timesgroup.com|Vijaya Karnataka
easy and effective home remedies to get rid of sweat pimples

ಬೆವರು ಗುಳ್ಳೆ ಪರಿಹಾರ ಸೂತ್ರ

ಬೇಸಿಗೆ ಕಳೆದರೂ ಬೆವರಿನಿಂದ ಮೂಡಿರುವ ಗುಳ್ಳೆಗಳು ಕಿರಿಕಿರಿ ಉಂಟುಮಾಡುತ್ತಿರುತ್ತವೆ. ಇದರ ನಿವಾರಣೆಗೆ ಕೆಲವು ಸುಲಭ ಉಪಾಯಗಳಿವೆ.

-ತಂಪು ಗುಣಕ್ಕೆ ಗುರುತಿಸಿಕೊಂಡಿರುವ ಅಲೊವೆರಾ ಚರ್ಮವನ್ನು ತಂಪಾಗಿಸಿ ಬೆವರು ಗುಳ್ಳೆಗಳನ್ನು ಕ್ರಮೇಣ ಹೋಗಲಾಡಿಸುತ್ತದೆ. ಪರಿಮಳರಹಿತ ಶುದ್ಧ ಅಲೊವೆರಾ ಜೆಲ್ ಬಳಸಿದರೆ ಉತ್ತಮ ಫಲಿತಾಂಶ ಸಿಗುತ್ತದೆ.

-ಶ್ರೀಗಂಧ ಕೂಡ ತನ್ನ ತಂಪು ಗುಣದಿಂದಾಗಿ ಅನಾದಿ ಕಾಲದಿಂದಲೂ ಸೌಂದರ್ಯ ಚಿಕಿತ್ಸೆಯಲ್ಲಿಬಳಕೆಯಲ್ಲಿದೆ. ಬೆವರು ಗುಳ್ಳೆಗಳಿಗೆ ರೋಸ್ ವಾಟರ್ ನಲ್ಲಿಬೆರೆಸಿದ ಶ್ರೀಗಂಧದ ಲೇಪವನ್ನು ತೆಳುವಾಗಿ ಹಚ್ಚಿ ಕೆಲವು ನಿಮಿಷಗಳ ಬಳಿಕ ತೊಳೆಯಿರಿ.

-ಬೇವಿನೆಲೆ ಕೂಡ ಚರ್ಮದ ಪೋಷಣೆಗೆ ಅತ್ಯುತ್ತಮವಾಗಿದೆ. ಬೇವಿನೆಲೆಯ ತಂಪಾದ ನೀರು ತ್ವಚೆಯನ್ನು ತಾಜಾವಾಗಿಸುತ್ತದೆ ಮತ್ತು ನವೆಯನ್ನು ಕಡಿಮೆ ಮಾಡುತ್ತದೆ.

-ಬಿಸಿಲಿನ ತಾಪದಿಂದ ಕಂಗೆಟ್ಟಿರುವ ಚರ್ಮಕ್ಕೆ ಮುಲ್ತಾನಿ ಮಿಟ್ಟಿ ಕೂಡ ತಂಪು ನೀಡಬಲ್ಲದು. ಇದರ ತೆಳು ಪೇಸ್ಟನ್ನು ಚರ್ಮಕ್ಕೆ ಹಚ್ಚಿ ಅದು ಪೂರ್ತಿ ಒಣಗುವ ಮುನ್ನ ತೊಳೆಯಿರಿ.

-ಸ್ನಾನ ಮಾಡುವ ನೀರಿಗೆ ನುಣ್ಣಗೆ ಪುಡಿ ಮಾಡಿದ ಓಟ್ಸ್ ಮತ್ತು ಸ್ವಲ್ಪ ರೋಸ್ ವಾಟರ್ ಹಾಕಿ ಸ್ನಾನ ಮಾಡಿ. ಇದರಿಂದ ತ್ವಚೆ ತಂಪಾಗುತ್ತದೆ.