ಏರ್ ಕುಶನ್ ವೆಹಿಕಲ್
ದೇಶದ ಸಮುದ್ರ ತೀರದ ಭದ್ರತೆಯನ್ನು ಮತ್ತಷ್ಟು ಬಲಪಡಿಸುವ ನಿಟ್ಟಿನಲ್ಲಿಭಾರತೀಯ ಕರಾವಳಿ ರಕ್ಷಣಾ ಪಡೆಯು(ಐಸಿಜಿ) ಒಂದು ಪ್ರಮುಖ ಮೈಲಿಗಲ್ಲುಸ್ಥಾಪಿಸಿದೆ. ಸಂಪೂರ್ಣವಾಗಿ ಭಾರತದಲ್ಲೇ ಅತ್ಯಾಧುನಿಕ ತಂತ್ರಜ್ಞಾನದೊಂದಿಗೆ ನಿರ್ಮಿಸಲಾಗಿರುವ ಆರು ‘ಏರ್ ಕುಶನ್ ವೆಹಿಕಲ್ ’ಗಳ(ಅಇ್ಖ) ಪೈಕಿ ಮೊದಲ ಅತ್ಯಾಧುನಿಕ ನೌಕೆಯನ್ನು ಗೋವಾದಲ್ಲಿನಡೆದ ಅಧಿಕೃತ ಸಮಾರಂಭದಲ್ಲಿಕರಾವಳಿ ರಕ್ಷಣಾ ಪಡೆಗೆ ಸೇರ್ಪಡೆಗೊಳಿಸಲಾಗಿದೆ. ಕರಾವಳಿ ಭದ್ರತೆ , ಕಡಲ ಗಡಿ ಉಸ್ತುವಾರಿ ಮತ್ತು ತುರ್ತು ರಕ್ಷಣಾ ಕಾರ್ಯಾಚರಣೆಗಳಲ್ಲಿಹೊಸ ನೌಕೆಯು ಭಾರತೀಯ ಸಶಸ್ತ್ರ ಪಡೆಗಳಿಗೆ ಅತ್ಯಂತ ಪ್ರಮುಖ ಶಕ್ತಿಯಾಗಿ ಪರಿಣಮಿಸಲಿದೆ ಎಂದು ರಕ್ಷಣಾ ವಲಯದ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಏನಿದು ‘ಏರ್ ಕುಶನ್ ವೆಹಿಕಲ್ ’?
ಸಾಮಾನ್ಯವಾಗಿ ‘ಹೋವರ್ ಕ್ರಾಫ್ಟ್ ’ ಎಂದು ಕರೆಯಲ್ಪಡುವ ಈ ಏರ್ ಕುಶನ್ ವೆಹಿಕಲ್ ಒಂದು ವಿಶಿಷ್ಟ ಉಭಯಚರ(ಅಞphಜಿಚಿಜಿಟ್ಠs) ನೌಕೆಯಾಗಿದೆ. ಅಂದರೆ, ಇದು ಕೇವಲ ಆಳವಾದ ಸಮುದ್ರದಲ್ಲಿಮಾತ್ರವಲ್ಲದೆ ಸಾಂಪ್ರದಾಯಿಕ ಯುದ್ಧನೌಕೆಗಳು ಚಲಿಸಲು ಸಾಧ್ಯವಾಗದ ಆಳವಿಲ್ಲದ ನದಿ ಪಾತ್ರಗಳು, ಕೆಸರು ಗದ್ದೆಗಳು, ಮರಳು ದಿಬ್ಬಗಳು ಹಾಗೂ ಜೌಗು ಪ್ರದೇಶಗಳ ಮೇಲೂ ಅತ್ಯಂತ ಸುಲಭವಾಗಿ ಮತ್ತು ವೇಗವಾಗಿ ಚಲಿಸುವ ಸಾಮರ್ಥ್ಯ ಹೊಂದಿದೆ. ನೌಕೆಯ ತಳಭಾಗದಲ್ಲಿಅಳವಡಿಸಲಾಗಿರುವ ವಿಶೇಷ ರಬ್ಬರ್ ಸ್ಕರ್ಟ್ ಮತ್ತು ಹೈ-ಪ್ರೆಶರ್ (ಅಧಿಕ ಒತ್ತಡದ) ಗಾಳಿಯ ತಂತ್ರಜ್ಞಾನವು ಇಡೀ ನೌಕೆಯು ಮೇಲ್ಮೈಯಿಂದ ಸ್ವಲ್ಪ ಮೇಲಕ್ಕೆ ತೇಲುವಂತೆ ಮಾಡುತ್ತದೆ. ಇದರಿಂದಾಗಿ ನೀರಿನ ಪ್ರತಿರೋಧವು ಇಲ್ಲದಂತಾಗಿ, ಎಲ್ಲಾ ರೀತಿಯ ಕಠಿಣ ಭೂಪ್ರದೇಶಗಳ ಮೇಲೂ ಇದು ಸಾಗಬಲ್ಲದು.
ನೌಕೆಯ ವಿನ್ಯಾಸ ಮತ್ತು ವಿಶೇಷ ಸಾಮರ್ಥ್ಯ: ನೌಕೆಯ ವಿನ್ಯಾಸ ಮತ್ತು ವೈಶಿಷ್ಟ ್ಯಗಳು ಅತ್ಯಂತ ಶಕ್ತಿಶಾಲಿಯಾಗಿದ್ದು, ಇದು ‘ಝೀರೋ ಡ್ರಾಫ್ಟ್ ’ ತತ್ವದ ಮೇಲೆ ಕಾರ್ಯನಿರ್ವಹಿಸುತ್ತದೆ. ಇದರರ್ಥ ನೌಕೆಯ ಯಾವುದೇ ಭಾಗವು ನೀರಿನ ಆಳಕ್ಕೆ ಮುಳುಗುವುದಿಲ್ಲ, ಬದಲಿಗೆ ನೀರಿನ ಮೇಲ್ಪದರದಲ್ಲಿತೇಲುತ್ತದೆ. ಇದರಿಂದಾಗಿ ಸಾಂಪ್ರದಾಯಿಕ ಹಡಗುಗಳು ಸಿಲುಕಿಕೊಳ್ಳುವ ಆಳವಿಲ್ಲದ ಕರಾವಳಿ ತೀರಗಳಲ್ಲಿಇದು ಯಾವುದೇ ಅಡೆತಡೆಯಿಲ್ಲದೆ ಸಾಗಬಲ್ಲದು. ಅತ್ಯಂತ ಗಟ್ಟಿಯಾದ ಕಡಲ ದರ್ಜೆಯ ಕಚ್ಚಾ ವಸ್ತುಗಳನ್ನು ಬಳಸಿ ಇದನ್ನು ಸಿದ್ಧಪಡಿಸಲಾಗಿದ್ದು, ಸಮುದ್ರದಲ್ಲಿತೇಲಿಬರುವ ಕಸಕಡ್ಡಿಗಳು ಅಥವಾ ಕಠಿಣ ಕರಾವಳಿ ಭೂಪ್ರದೇಶಗಳು ಇದರ ವೇಗಕ್ಕೆ ಯಾವುದೇ ಅಡ್ಡಿ ತರುವುದಿಲ್ಲ.
ರಾತ್ರಿ ವೇಳೆಯೂ ಕಣ್ಣಾವಲು: ಕಾರ್ಯಾಚರಣೆಯ ದೃಷ್ಟಿಯಿಂದ ಈ ಹೋವರ್ ಕ್ರಾಫ್ಟ್ ನಲ್ಲಿಜಗತ್ತಿನ ಅತ್ಯಾಧುನಿಕ ತಂತ್ರಜ್ಞಾನದ ನಾವಿಗೇಷನ್ ಮತ್ತು ಕಮ್ಯುನಿಕೇಷನ್ ವ್ಯವಸ್ಥೆಯನ್ನು ಅಳವಡಿಸಲಾಗಿದೆ. ದಟ್ಟವಾದ ಮಂಜು, ಭಾರಿ ಮಳೆ ಅಥವಾ ಸಂಪೂರ್ಣ ಕತ್ತಲೆಯಂತಹ ಶೂನ್ಯ-ದೃಶ್ಯ ಗೋಚರತೆಯ ಸಂದರ್ಭಗಳಲ್ಲೂನಿರಂತರ ಕಾರ್ಯಾಚರಣೆ ನಡೆಸಲು ಪೂರಕವಾದ ವಿಶೇಷ ಕಡಲ ರಾಡಾರ್ ಗಳು ಮತ್ತು ನೈಟ್ -ವಿಷನ್ ಥರ್ಮಲ್ ಇಮೇಜಿಂಗ್ (ರಾತ್ರಿ ವೇಳೆ ಸ್ಪಷ್ಟವಾಗಿ ನೋಡಬಲ್ಲ) ಕ್ಯಾಮೆರಾಗಳನ್ನು ಇದು ಹೊಂದಿದೆ. ಜೊತೆಗೆ, ಇದರ ಡೆಕ್ ವಿನ್ಯಾಸವನ್ನು ಅತ್ಯಂತ ವಿಶಾಲವಾಗಿ ರೂಪಿಸಲಾಗಿದ್ದು, ಶಸ್ತ್ರಸಜ್ಜಿತ ಕಮಾಂಡೋ ಪಡೆಗಳು, ತುರ್ತು ವೈದ್ಯಕೀಯ ತಂಡಗಳು ಮತ್ತು ರಕ್ಷಣಾ ಸಾಧನಗಳನ್ನು ಏಕಕಾಲದಲ್ಲಿಹೊತ್ತೊಯ್ಯಲು ಇದು ಸಹಕಾರಿಯಾಗಿದೆ.
ಗಡಿಭಾಗಗಳಲ್ಲಿಕಳ್ಳಸಾಗಣೆಗೆ ಬ್ರೇಕ್ : ಭಾರತೀಯ ಕರಾವಳಿ ಭದ್ರತೆಯ ದೃಷ್ಟಿಯಿಂದ ಈ ನೌಕೆಗಳ ಸೇರ್ಪಡೆ ಅತ್ಯಂತ ಮಹತ್ವದ್ದಾಗಿದೆ. ವಿಶೇಷವಾಗಿ ಗುಜರಾತ್ ನ ಕಚ್ ಪ್ರದೇಶ ಹಾಗೂ ಪಶ್ಚಿಮ ಬಂಗಾಳದ ಸುಂದರಬನ್ಸ್ ನಂತಹ ಅತ್ಯಂತ ಕಠಿಣವಾದ ಜೌಗು ಪ್ರದೇಶಗಳು ಮತ್ತು ಕ್ರೀಕ್ ವಲಯಗಳಲ್ಲಿಕಣ್ಗಾವಲು ನಡೆಸಲು ಇವು ಉಪಯುಕ್ತವಾಗಿವೆ. ಈ ಪ್ರದೇಶಗಳ ಮೂಲಕ ನಡೆಯುವ ಕಳ್ಳಸಾಗಣೆ, ನುಸುಳುವಿಕೆ ಮತ್ತು ಇತರೆ ಕಾನೂನುಬಾಹಿರ ಚಟುವಟಿಕೆಗಳನ್ನು ನಿಯಂತ್ರಿಸಲು ಮತ್ತು ಶಂಕಿತ ಬೋಟ್ ಗಳನ್ನು ಬೆನ್ನಟ್ಟಿ ಹಿಡಿಯಲು ಕರಾವಳಿ ರಕ್ಷಣಾ ಪಡೆಗೆ ಈಗ ಈ ನೌಕೆಗಳಿಂದ ಹೊಸ ವೇಗ ಸಿಕ್ಕಂತಾಗಿದೆ.

