ಏರ್ ಫೋರ್ಸ್ ಒನ್
ಇಂಟ್ರೋ
ಧಿಧಿಅಮೆರಿಕದ ಅಧ್ಯಕ್ಷರು ಪ್ರಯಾಣಿಸುವ ವಿಶ್ವದ ಅತ್ಯಂತ ಸುರಕ್ಷಿತ ಮತ್ತು ಐಷಾರಾಮಿ ವಿಮಾನ ‘ಏರ್ ಫೋರ್ಸ್ ಒನ್ ’ ಬಗ್ಗೆ ರೋಚಕ ಪರಿಚಯ ಇಲ್ಲಿದೆ.
ನೀವು ಆಕಾಶದಲ್ಲಿಹಾರುವ ದೊಡ್ಡ ದೊಡ್ಡ ವಿಮಾನಗಳನ್ನು ನೋಡಿರುತ್ತೀರಿ. ಆದರೆ ಇಡೀ ಜಗತ್ತಿನಲ್ಲೇ ಅತ್ಯಂತ ಪ್ರಸಿದ್ಧ ಮತ್ತು ರಕ್ಷಣಾತ್ಮಕವಾಗಿ ಅತ್ಯಂತ ಶಕ್ತಿಶಾಲಿ ಎನಿಸಿಕೊಂಡಿರುವ ಒಂದು ವಿಮಾನವಿದೆ. ಅದೇ ‘ಏರ್ ಫೋರ್ಸ್ ಒನ್ ’. ಇದು ಅಮೆರಿಕ ದೇಶದ ಅಧ್ಯಕ್ಷರು ಪ್ರಯಾಣಿಸುವ ಅಧಿಧಿಧಿಕೃತ ವಿಮಾನ.
ಏರ್ ಫೋರ್ಸ್ ಒನ್ ಎಂಬುದು ಯಾವುದೇ ಒಂದು ನಿರ್ದಿಷ್ಟ ವಿಮಾನದ ಹೆಸರಲ್ಲ. ಇದು ಅಮೆರಿಕದ ವಾಯುಸೇನೆ ಅಧ್ಯಕ್ಷರಿಗಾಗಿ ಬಳಸುವ ಒಂದು ಕಾಲ್ ಸೈನ್ ಅಥವಾ ರೇಡಿಯೋ ಸಂಕೇತ. ಅಮೆರಿಕದ ಅಧ್ಯಕ್ಷರು ವಾಯುಸೇನೆಯ ಯಾವ ವಿಮಾನದಲ್ಲಿಕುಳಿತುಕೊಳ್ಳುತ್ತಾರೋ, ಆ ವಿಮಾನವನ್ನು ಆಕಾಶದಲ್ಲಿಇರುವಾಗ ಏರ್ ಫೋರ್ಸ್ ಒನ್ ಎಂದು ಕರೆಯಲಾಗುತ್ತದೆ.
ಆರಂಭಿಕ ದಿನಗಳು: ಅಮೆರಿಕದ ಅಧ್ಯಕ್ಷರೊಬ್ಬರು ಅಧಿಧಿಕಾರದಲ್ಲಿದ್ದಾಗ ವಿಮಾನ ಪ್ರಯಾಣ ಬೆಳೆಸಿದ ಮೊದಲಿಗರು ಫ್ರಾಂಕ್ಲಿನ್ ಡಿ. ರೂಸ್ ವೆಲ್ಟ…. 1943ರ ದ್ವಿತೀಯ ಮಹಾಯುದ್ಧದ ಸಮಯದಲ್ಲಿರಹಸ್ಯ ಸಮ್ಮೇಳನವೊಂದರಲ್ಲಿಭಾಗವಹಿಸಲು ಅವರು ಡಿಕ್ಸಿ ಕ್ಲಿಪ್ಪರ್ ಎಂಬ ಬೋಯಿಂಗ್ ಕಮರ್ಷಿಯಲ್ ವಿಮಾನ ಬಳಸಿದ್ದರು.
ಏರ್ ಫೋರ್ಸ್ ಒನ್ ಎಂಬ ಹೆಸರು ಬಂದಿದ್ದು ಹೇಗೆ ?
ಆರಂಭದಲ್ಲಿಅಧ್ಯಕ್ಷರ ವಿಮಾನಕ್ಕೆ ಇಂತಹ ನಿರ್ದಿಷ್ಟ ಹೆಸರಿರಲಿಲ್ಲ. ಆದರೆ 1953ರಲ್ಲಿಒಂದು ದೊಡ್ಡ ಗೊಂದಲ ಉಂಟಾಯಿತು. ಅಧ್ಯಕ್ಷ ಡ್ವೈಟ್ ಡಿ. ಐಸೆನ್ ಹೋವರ್ ಪ್ರಯಾಣಿಸುತ್ತಿದ್ದ ವಿಮಾನದ ಕಾಲ್ ಸೈನ್ ಏರ್ ಫೋರ್ಸ್ ಒನ್ 8610 ಆಗಿತ್ತು. ಅದೇ ಸಮಯದಲ್ಲಿ, ಅದೇ ವಾಯುಪ್ರದೇಶದಲ್ಲಿಉasಠಿಛ್ಟ್ಞಿ ಅಜ್ಟ್ಝಿಜ್ಞಿಛಿs 8610 ಎಂಬ ವಾಣಿಜ್ಯ ವಿಮಾನವೂ ಹಾರಾಡುತ್ತಿತ್ತು. ಕಂಟ್ರೋಲ್ ರೂಂ ಸಿಬ್ಬಂದಿಗೆ ಈ ಎರಡು ವಿಮಾನಗಳ ನಡುವೆ ಗೊಂದಲ ಉಂಟಾಗಿ, ದೊಡ್ಡ ಅಪಘಾತವೊಂದು ಕೂದಲೆಳೆಯ ಅಂತರದಲ್ಲಿತಪ್ಪಿತು. ಈ ಘಟನೆಯ ನಂತರ ಅಧ್ಯಕ್ಷರು ಪ್ರಯಾಣಿಸುವ ಯಾವುದೇ ವಾಯುಪಡೆಯ ವಿಮಾನಕ್ಕೆ ಜಗತ್ತಿನಲ್ಲಿಬೇರೆಲ್ಲೂಗೊಂದಲ ಉಂಟಾಗಬಾರದು ಎಂಬ ಕಾರಣಕ್ಕೆ ಏರ್ ಫೋರ್ಸ್ ಒನ್ ಎಂಬ ಪ್ರತ್ಯೇಕ ಮತ್ತು ಶಾಶ್ವತ ಕಾಲ್ ಸೈನ್ ನೀಡಲು ನಿರ್ಧರಿಸಲಾಯಿತು. 1959ರಿಂದ ಇದು ಅಧಿಕೃತವಾಗಿ ಬಳಕೆಗೆ ಬಂತು.
ವಿಮಾನದ ವೈಶಿಷ್ಟ್ಯಗಳು: ಇದು ಆಕಾಶದಲ್ಲಿಹಾರಾಡುವ ಒಂದು ಮಿನಿ ಅರಮನೆ. ಇದರೊಳಗೆ ಅಧ್ಯಕ್ಷರ ಕಚೇರಿ, ಕಾನ್ಫರೆಸ್ಸ್ ರೂಮ್ , ಮಲಗುವ ಕೋಣೆ, ಮಿನಿ ವೈದ್ಯಕೀಯ ಕೊಠಡಿಯಿದ್ದು, ತುರ್ತು ಪರಿಸ್ಥಿತಿಯಲ್ಲಿಶಸ್ತ್ರಚಿಕಿತ್ಸೆ ಮಾಡಲು ಬೇಕಾದ ಎಲ್ಲಾಸೌಲಭ್ಯ ಹಾಗೂ ವೈದ್ಯರು ಇರುತ್ತಾರೆ. ಈ ವಿಮಾನವು ಮೂರು ಮಹಡಿಗಳನ್ನು ಹೊಂದಿದ್ದು, ಒಟ್ಟು 4,000 ಚದರ ಅಡಿಯಷ್ಟು ವಿಶಾಲವಾದ ಜಾಗವನ್ನು ಹೊಂದಿದೆ. ಇದರಲ್ಲಿಎರಡು ದೊಡ್ಡ ಅಡುಗೆಮನೆಗಳಿದ್ದು, ಒಂದೇ ಬಾರಿಗೆ 100 ಜನರಿಗೆ ಊಟ ಸಿದ್ಧಪಡಿಸುವ ಸಾಮರ್ಥ್ಯ ಹೊಂದಿವೆ.
- ಈ ವಿಮಾನಕ್ಕೆ ಕೆಳಗಿಳಿಯದೇ ಆಕಾಶದಲ್ಲೇ ಮತ್ತೊಂದು ವಿಮಾನದ ಸಹಾಯದಿಂದ ಇಂಧನ ತುಂಬಿಸಬಹುದು. ಈ ಮೂಲಕ ಯಾವುದೇ ತುರ್ತು ಪರಿಸ್ಥಿತಿಯಲ್ಲಿಈ ವಿಮಾನವು ಸತತವಾಗಿ ಹಲವು ದಿನಗಳ ಕಾಲ ಆಕಾಶದಲ್ಲೇ ಇರಬಲ್ಲದು.
- ಇದರ ಹತ್ತಿರ ಎಲ್ಲಾದರೂ ಪರಮಾಣು ಬಾಂಬ್ ಸ್ಫೋಟಗೊಂಡರೂ, ಅದರಿಂದ ಹೊರಹೊಮ್ಮುವ ಶಕ್ತಿಶಾಲಿ ವಿದ್ಯುತ್ಕಾಂತೀಯ ಅಲೆಗಳು ಈ ವಿಮಾನದ ಎಲೆಕ್ಟ್ರಾನಿP್ಸ… ವ್ಯವಸ್ಥೆಯನ್ನು ಸುರಕ್ಷಿತವಾಗಿಡಬಲ್ಲದು. ಶತ್ರುಗಳು ಈ ವಿಮಾನದ ಮೇಲೆ ಕ್ಷಿಪಣಿ ದಾಳಿ ಮಾಡಿದರೆ ಅತ್ಯಾಧುನಿಕ ರೇಡಾರ್ ವ್ಯವಸ್ಥೆಯು ಆ ಕ್ಷಿಪಣಿಗಳ ದಾರಿಯನ್ನೇ ತಪ್ಪಿಸಿಬಿಡುತ್ತದೆ.
- ವಿಮಾನದಲ್ಲಿ 85 ಫೋನ್ ಗಳು ಹಾಗೂ ಅತ್ಯಾಧುನಿಕ ಸ್ಯಾಟಲೈಟ್ ಸಂಪರ್ಕವಿದ್ದು, ಅಧ್ಯಕ್ಷರು ಆಕಾಶದಲ್ಲಿಹಾರಾಡುತ್ತಲೇ ವಿಶ್ವದ ಯಾವುದೇ ಮೂಲೆಯ ನಾಯಕರೊಂದಿಗೆ ಅತ್ಯಂತ ಸುರಕ್ಷಿತವಾಗಿ ಮಾತನಾಡಬಹುದು.
- 60 ವರ್ಷಗಳಿಗೂ ಹೆಚ್ಚು ಕಾಲದಿಂದ ಏರ್ ಫೋರ್ಸ್ ಒನ್ ವಿಮಾನಕ್ಕೆ ಇದ್ದ ತಿಳಿ ನೀಲಿ ಮತ್ತು ಬಿಳಿ ಬಣ್ಣದ ಸಾಂಪ್ರದಾಯಿಕ ವಿನ್ಯಾಸವನ್ನು ಬದಲಾಯಿಸಲಾಗಿದೆ. ಅಧ್ಯಕ್ಷ ಟ್ರಂಪ್ ಅವರ ಇಚ್ಛೆಯಂತೆ ಅಮೆರಿಕದ ರಾಷ್ಟ್ರಧ್ವಜದ ಬಣ್ಣವಾದ ಹೊಸ ವಿಮಾನಕ್ಕೆ ಗಾಢ ನೀಲಿ, ಬಿಳಿ ಮತ್ತು ಕೆಂಪು ಬಣ್ಣದ ಪಟ್ಟೆಗಳನ್ನು ಬಳಸಿ ಹೊಸ ರೂಪ ನೀಡಲಾಗಿದೆ.
- ಇದು 45,100 ಅಡಿ ಎತ್ತರದಲ್ಲಿ (ಸಾಮಾನ್ಯ ವಿಮಾನಗಳಿಗಿಂತ 10,000 ಅಡಿ ಹೆಚ್ಚು) ಗಂಟೆಗೆ ಸುಮಾರು 600 ಮೈಲು (ಶಬ್ದದ ವೇಗಕ್ಕೆ ಹತ್ತಿರ) ವೇಗದಲ್ಲಿಸಂಚರಿಸುತ್ತದೆ.
ಕತಾರ್ ನ ಮಧ್ಯಂತರ ವಿಮಾನ: ್ಖಇ-25ಆ ಬ್ರಿv್ಜ… ಬೋಯಿಂಗ್ ಸಂಸ್ಥೆಯು ಹೊಸ ವಿಮಾನಗಳ ತಯಾರಿಕೆಯಲ್ಲಿವಿಳಂಬ ಮಾಡಿದ ಹಿನ್ನೆಲೆಯಲ್ಲಿ, ಪ್ರಸ್ತುತ ಕತಾರ್ ಸರಕಾರವು ಉಡುಗೊರೆಯಾಗಿ ನೀಡಿದ್ದ ಅತ್ಯಾಧುನಿಕ ಬೋಯಿಂಗ್ 747-8 ಐಷಾರಾಮಿ ವಿಮಾನವನ್ನು ಅಮೆರಿಕ ವಾಯುಪಡೆಗೆ ಸೇರಿಸಿಕೊಳ್ಳಲಾಗಿದೆ. ಇದನ್ನು ‘್ಖಇ-25ಆ ಬ್ರಿv್ಜ…’ ಎಂದು ಹೆಸರಿಸಲಾಗಿದೆ. ಬೋಯಿಂಗ್ ಸಂಸ್ಥೆಯಿಂದ ಬರಲಿರುವ ಕಾಯಂ ವಿಮಾನಗಳು ಸಿದ್ಧವಾಗುವವರೆಗೂ ಅಧ್ಯಕ್ಷರು ಇದನ್ನೇ ಬಳಸಲಿದ್ದಾರೆ.

