ಪ್ರೋಮೋ

Contributed byShridevi Ambekallu|Vijaya Karnataka

ಯೋಗದ ಮಹತ್ವ, ಸಂಗೀತದ ಅನುಭೂತಿ, ತಂದೆಯ ಜವಾಬ್ದಾರಿ, ಭರತನಾಟ್ಯದ ಆರೋಗ್ಯ ಪ್ರಯೋಜನ, ಕಾಲು ಸೆಳೆತಕ್ಕೆ ಯೋಗ ಪರಿಹಾರ, ಯಶಸ್ವಿ ಗಣ್ಯರ ಯೋಗಾಭ್ಯಾಸದ ಬಗ್ಗೆ ಲೇಖನಗಳು ಇಲ್ಲಿವೆ. ಸದ್ಗುರು ಜಗ್ಗಿ ವಾಸುದೇವ್‌, ಶಶಿಧರ ಕೋಟೆ, ಡಾ. ಸಿಬಂತಿ ಪದ್ಮನಾಭ, ಮಂಜುಳಾ ಸುಬ್ರಹ್ಮಣ್ಯ, ಯೋಗರತ್ನ ಗೋಪಾಲಕೃಷ್ಣ ದೇಲಂಪಾಡಿ ಅವರ ಬರಹಗಳು ಓದುಗರ ಗಮನ ಸೆಳೆಯುತ್ತವೆ. ಜೀವನದಲ್ಲಿ ಯಶಸ್ಸು ಸಾಧಿಸಿದವರ ಯೋಗಾಭ್ಯಾಸದ ಸ್ಫೂರ್ತಿದಾಯಕ ಕಥನಗಳು ಇಲ್ಲಿವೆ.

music and yoga excellence in life

ಪು5

ಯೋಗ ಎಂದರೆ ಅಂತರಂಗದ ಸ್ಥಿತಿ ಸ್ವಭಾವ

ಯೋಗವೆಂದರೆ ಆಸನಗಳಷ್ಟೇ ಅಲ್ಲಅದು ಅಂತರಂಗದ ಸ್ಥಿತಿ ಸ್ವಭಾವ. ಅದು ಹೇಗೆ? ಈ ಕುರಿತು ಸದ್ಗುರು ಜಗ್ಗಿ ವಾಸುದೇವ್ ಅವರು ಏನು ಹೇಳುತ್ತಾರೆ?

----

ಪು.9

ಸಂಗೀತವೆಂಬ ದಿವ್ಯಶಕ್ತಿ

ಸಂಗೀತ ಒಂದು ಮಧುರ ಅನುಭೂತಿ. ನಮ್ಮ ಬದುಕಿನೊಂದಿಗೆ ಪ್ರತಿಕ್ಷಣ ಬೆರೆತ ವಿವಿಧ ಸದ್ದುಗಳ ಅನನ್ಯ ಗುಚ್ಛ ಸಂಗೀತ. ಪ್ರೀತಿ, ಪ್ರೇಮ, ವಿರಹ ವೇದನೆ, ನೋವು ನಲಿವು ಹೀಗೆ ಎಲ್ಲಾಭಾವಗಳಿಗೂ ಸಂಗೀತದ ಸಿಂಚನವಿದೆ. ವಿಶ್ವ ಸಂಗೀತ ದಿನದ ಅಂಗವಾಗಿ ಖ್ಯಾತ ಗಾಯಕ ಶಶಿಧರ ಕೋಟೆ ಅವರಿಂದ ಅವಲೋಕನ.

-----

ಪು.9

ಅಪ್ಪನ ವ್ಯಕ್ತಿತ್ವ ಮಕ್ಕಳ ಪ್ರತಿಬಿಂಬ

ಫಾದರ್ಸ್ ಡೇ ಪ್ರಯುಕ್ತ ಡಾ. ಸಿಬಂತಿ ಪದ್ಮನಾಭ ಅವರಿಂದ ತಂದೆಯ ಜವಾಬ್ದಾರಿ ನೆನಪಿಸುವ ಚಿಂತನ.

----

ಪು8

ನೃತ್ಯದ ಆತ್ಮ ಮುದ್ರೆ

ಭರತನಾಟ್ಯ ಕಲೆಯ ಮುದ್ರೆಗಳು ಆರೋಗ್ಯಕ್ಕೆ ಹೇಗೆ ಪೂರಕ? ಭರತನಾಟ್ಯ ಕಲಾವಿದೆ ಮಂಜುಳಾ ಸುಬ್ರಹ್ಮಣ್ಯ ಅವರು ಬರೆದ ಸುಂದರ ಬರಹ.

-----

ಪು4

ಕಾಲು ಸೆಳೆತಕ್ಕೆ ಯೋಗಾಸನ

ಹೆಚ್ಚಿನವರನ್ನು ಕಾಡುವ ಆರೋಗ್ಯ ಸಮಸ್ಯೆ ಕಾಲು ಸೆಳೆತ, ಮಂಡಿನೋವು. ಇದಕ್ಕೆ ಯೋಗದಿಂದ ಹೇಗೆ ಪರಿಹಾರ ಕಂಡುಕೊಳ್ಳಬಹುದು. ಅಂತಾರಾಷ್ಟ್ರೀಯ ಯೋಗಪಟು ಯೋಗರತ್ನ ಗೋಪಾಲಕೃಷ್ಣ ದೇಲಂಪಾಡಿ ಅವರಿಂದ ಯೋಗ ಆಸನಗಳು ಹಾಗೂ ಅಭ್ಯಾಸ ಕ್ರಮದ ಮಾಹಿತಿ.

---

ಪು.3

ಗಣ್ಯರ ಯೋಗ ಪ್ರೀತಿ

ಯೋಗವನ್ನು ನಿತ್ಯ ಜೀವನದ ಭಾಗವನ್ನಾಗಿಸಿಕೊಂಡು ಬದುಕಿನಲ್ಲಿಯಶಸ್ಸು ಗಳಿಸಿದವರು ಹಲವರು. ಅಂತಹ ಸೆಲೆಬ್ರಿಟಿಗಳ ಸ್ಫೂರ್ತಿದಾಯಕ ಕಥನ.

----