ಕಾಸರಗೋಡು: ಕೇರಳ ಕೇಂದ್ರ ವಿಶ್ವವಿದ್ಯಾಲಯದಲ್ಲಿಯೋಗ ಅಧ್ಯಯನ ವಿಭಾಗದ ಆಶ್ರಯದಲ್ಲಿಅಂತರರಾಷ್ಟ್ರೀಯ ಯೋಗ ದಿನವನ್ನು ಆಚರಿಸಲಾಯಿತು. ಡೀನ್ ಅಕಾಡೆಮಿಕ್ ಪ್ರೊ. ಜೋಸೆಫ್ ಕೊಯಿಪಲ್ಲಿಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಭಾರತದ ಸಂಪ್ರದಾಯದ ಅವಿಭಾಜ್ಯ ಅಂಗವಾದ ಯೋಗವು ಪ್ರಪಂಚದಾದ್ಯಂತ ಗುರುತಿಸಲ್ಪಟ್ಟಿದೆ ಎಂದರು. ಯುವಕರಲ್ಲಿಶಿಸ್ತುಬದ್ಧ, ನೈತಿಕ ಮತ್ತು ಸದ್ಗುಣಶೀಲ ವ್ಯಕ್ತಿತ್ವವನ್ನು ರೂಪಿಸುವಲ್ಲಿಯೋಗವು ಪ್ರಮುಖ ಪಾತ್ರ ವಹಿಸುತ್ತದೆ ಎಂದರು.
ಸುರತ್ಕಲ್ ನ ಫೌಂಡೇಶನ್ ಫಾರ್ ಇಂಡಿಯನ್ ಸೈಂಟಿಫಿಕ್ ಹೆರಿಟೇಜ್ ಟ್ರಸ್ಟ್ ನ ಸಂಸ್ಥಾಪಕ ಮತ್ತು ವ್ಯವಸ್ಥಾಪಕ ಟ್ರಸ್ಟಿ ಆಚಾರ್ಯ ಡಾ. ಎಸ್ . ರಾಮಕೃಷ್ಣ ಶರ್ಮಾ ಮುಖ್ಯ ಭಾಷಣ ಮಾಡಿದರು. ಯೋಗವು ಇಡೀ ಮಾನವೀಯತೆಗೆ ಸೂಕ್ತವಾದ ಸಾರ್ವತ್ರಿಕ ಪರಂಪರೆಯಾಗಿದೆ ಎಂದರು. ಯೋಗಾಭ್ಯಾಸದ ಸಾರವು ಅನೇಕ ಆಸನಗಳ ಅಭ್ಯಾಸದಲ್ಲಿಲ್ಲ, ಆದರೆ ಸ್ಪಷ್ಟ ಮನಸ್ಸಿನ ಮೂಲಕ ಸಾಧಿಸಬಹುದಾದ ಸ್ಥಿರತೆ ಮತ್ತು ಸಾಧನದಲ್ಲಿದೆ ಎಂದರು.
ಯೋಗ ಅಧ್ಯಯನ ವಿಭಾಗದ ಅಧ್ಯಕ್ಷ ಡಾ. ಸುಬ್ರಹ್ಮಣ್ಯ ಪೈಲೂರು ಅಧ್ಯಕ್ಷತೆ ವಹಿಸಿದ್ದರು. ಉಪ ಪ್ರಾಕ್ಟರ್ ಡಾ. ಎಸ್ . ಅನ್ಬಳಗಿ ಧನ್ಯವಾದ ಅರ್ಪಿಸಿದರು. ಸಂಶೋಧನಾ ವಿದ್ಯಾರ್ಥಿನಿ ಸುಷ್ಮಾ ಬಿ. ಬಂಗಾರ ಸಾಮಾನ್ಯ ಯೋಗ ಪ್ರೋಟೋಕಾಲ್ ಪ್ರಕಾರ ಯೋಗಾಭ್ಯಾಸವನ್ನು ಮುನ್ನಡೆಸಿದರು. ಕಾಸರಗೋಡಿನ ಕರಂದಕ್ಕಾಡು ಯೋಗ ಫಾರ್ ಕಿಡ್ಸ್ ನ ಮಕ್ಕಳು ಯೋಗಾಭ್ಯಾಸವನ್ನು ಪ್ರಸ್ತುತಪಡಿಸಿದರು. ಡೀನ್ ಗಳು, ವಿಭಾಗ ಮುಖ್ಯಸ್ಥರು, ಪೆರಿಯ ನವೋದಯ ವಿದ್ಯಾಲಯದ ವಿದ್ಯಾರ್ಥಿಗಳು, ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು, ಶಿಕ್ಷಕರು, ಸಿಬ್ಬಂದಿ ಮುಂತಾದವರು ಉಪಸ್ಥಿತರಿದ್ದರು.
ಚಿತ್ರ:21ಕೆಎಸ್ ಪೆರಿಯಾ

