‘ ಯೋಗ ’ ವಿಶ್ವಕ್ಕೆ ಭಾರತದ ಕೊಡುಗೆ: ಡಾ.ಚಂದ್ರಶೇಖರ ಸುವರ್ಣಗಿರಿಮಠ
ವಿಕ ಸುದ್ದಿಲೋಕ ಮಾನ್ವಿ
‘‘ವಿಶ್ವಕ್ಕೆ ಭಾರತದ ಬಹುದೊಡ್ಡ ಕೊಡುಗೆ ಯೋಗವಾಗಿದೆ. ಪ್ರಾಚೀನ ಕಾಲದಿಂದ ಇಂದಿನವರೆಗೂ ಉತ್ತಮ ಆರೋಗ್ಯಕ್ಕಾಗಿ ಯೋಗ ಅಭ್ಯಾಸ ಮಾಡಿಕೊಂಡು ಬರಲಾಗುತ್ತಿದೆ,’’ ಎಂದು ನಿವೃತ್ತ ಆಯುಷ್ ವೈದ್ಯಾಧಿಕಾರಿ ಡಾ.ಚಂದ್ರಶೇಖರ ಸುವರ್ಣಗಿರಿ ಮಠ ಹೇಳಿದರು.
ಪಟ್ಟಣದ ಸರಕಾರಿ ಹಣ್ಣಿನ ತೋಟದಲ್ಲಿ‘ಮೌನ ಮಿತ್ರ ಯೋಗ ಸಮಿತಿ’ ಯಿಂದ ನಡೆದ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
‘‘ನಿತ್ಯ ಸ್ವಲ್ಪ ಸಮಯ ಯೋಗ ಅಭ್ಯಾಸ ಮಾಡುವ ಜತೆಗೆ ಹೆಚ್ಚು ಪ್ರೋಟೀನ್ ಯುಕ್ತ, ಹಸಿರು ತರಕಾರಿ, ಸಿರಿಧಾನ್ಯದ ನಾನಾ ಆಹಾರ ಸೇವಿಸಿದರೆ ಉತ್ತಮ ಆರೋಗ್ಯ ಹೊಂದಲು ಸಾಧ್ಯವಾಗುತ್ತದೆ,’’ ಎಂದು ತಿಳಿಸಿದರು.
ಯೋಗಗುರು ಮೌನೇಶ ಪೋತ್ನಾಳ್ ಅವರನ್ನು ಸನ್ಮಾನಿಸಲಾಯಿತು. ಡಾ.ಬಸವಪ್ರಭು ಪಾಟೀಲ್ ಬೆಟ್ಟದೂರು, ಶ್ರೀಶೈಲ ಗೌಡ್ರು, ನಾಗರಾಜ್ ಭಂಡಾರಿ ವಕೀಲರು, ಹಂಪಣ್ಣ ಚಂಡೂರು, ವೆಂಕಯ್ಯ ಶೆಟ್ಟಿ, ಜಿ.ನಾಗರಾಜ್ , ವೀರೇಶ್ , ಲಿಂಗರಾಜ್ , ಗಡಿಗಿ ವೆಂಕಟೇಶ್ , ಪ್ರವೀಣ್ , ತೋಟಗಾರಿಕೆ ಇಲಾಖೆಯ ಅಧಿಕಾರಿ ಚೇತನ್ , ಸುಬ್ರಮಣ್ಯ ಶೆಟ್ಟಿ, ಸಿದ್ದಮಲ್ಲಯ್ಯ, ಶಂಕರಾನಂದ ಸ್ವಾಮಿ, ನಾಗರಾಜ, ಚಂದ್ರಮೌಳಿ ಹಾಗೂ ಮೌನ ಮಿತ್ರ ಯೋಗ ಸಮಿತಿಯ ಸದಸ್ಯರು ಭಾಗವಹಿಸಿದರು.
* 21-ಮಾನ್ವಿ-4:
ಮಾನ್ವಿಯ ಸರಕಾರಿ ಹಣ್ಣಿನ ತೋಟದಲ್ಲಿಮೌನ ಮಿತ್ರ ಯೋಗ ಸಮಿತಿ ನೇತೃತ್ವದಲ್ಲಿಯೋಗಾಭ್ಯಾಸ ಮಾಡಲಾಯಿತು.
* 21-ಮಾನ್ವಿ-5:
ಮಾನ್ವಿಯ ಸರಕಾರಿ ಹಣ್ಣಿನ ತೋಟದಲ್ಲಿಮೌನ ಮಿತ್ರ ಯೋಗ ಸಮಿತಿ ನೇತೃತ್ವದಲ್ಲಿಯೋಗಗುರು ಮೌನೇಶ ಪೋತ್ನಾಳ್ ಅವರನ್ನು ಸನ್ಮಾನಿಸಲಾಯಿತು.

