ಚಿತ್ರ: ಸಿಯುಕೆ ಯೋಗ
ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯಲ್ಲಿ12ನೇ ಅಂತರರಾಷ್ಟಿ್ರೕಯ ಯೋಗ ದಿನ ವಿ.ವಿ.ಯ ಸಭಾಂಗಣದಲ್ಲಿಆಚರಿಸಲಾಯಿತು.
**
ಆಧುನಿಕ ಒತ್ತಡದ ಜೀವನಕ್ಕೆ ಯೋಗ ಪರಿಹಾರ
ವಿಕ ಸುದ್ದಿಲೋಕ ಕಲಬುರಗಿ
ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯಲ್ಲಿ12ನೇ ಅಂತರರಾಷ್ಟಿ್ರೕಯ ಯೋಗ ದಿನ ವಿ.ವಿ.ಯ ಸಭಾಂಗಣದಲ್ಲಿಆಚರಿಸಲಾಯಿತು.
ಕುಲಪತಿ ಪ್ರೊ.ಬಟ್ಟು ಸತ್ಯನಾರಾಯಣ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಯೋಗಭ್ಯಾಸವು ನಮ್ಮ ದೈನಂದಿನ ದೈಹಿಕ ಸದೃಢತೆ, ಮಾನಸಿಕ ಸ್ಪಷ್ಟತೆ, ಭಾವನಾತ್ಮಕ ಸಮತೋಲನ ಹಾಗೂ ಮನಸ್ಸಿನ ಆಂತರಿಕ ಶಾಂತಿ ಬೆಳೆಸುವ ಜೀವನ ಪದ್ಧತಿಯಾಗಿದೆ ಎಂದು ಹೇಳಿದರು. ನಮ್ಮ ವೈಯಕ್ತಿಕ ಬೆಳವಣಿಗೆ, ಆತ್ಮಶಿಸ್ತು ಹಾಗೂ ಸಮಗ್ರ ವ್ಯಕ್ತಿತ್ವ ವಿಕಸನಕ್ಕಾಗಿ ಯೋಗ ನಮ್ಮ ಜೀವನದ ಅವಿಭಾಜ್ಯ ಅಂಗವಾಗಿಸಿಕೊಳ್ಳುವಂತೆ ಕರೆ ನೀಡಿದರು.
ವಿಶ್ವವಿದ್ಯಾಲಯದ ಕುಲಸಚಿವ ಪ್ರೊ.ಆರ್ .ಆರ್ .ಬಿರಾದಾರ ಮಾತನಾಡಿ, ದೈಹಿಕ ಮತ್ತು ಮಾನಸಿಕ ಆರೋಗ್ಯ ಕಾಪಾಡಿಕೊಳ್ಳಲು ಹಾಗೂ ಮಧುಮೇಹ, ಒತ್ತಡ ಸೇರಿ ನಮ್ಮ ಜೀವನಶೈಲಿ ಸಂಬಂಧಿತ ಕಾಯಿಲೆ ತಡೆಗಟ್ಟಲು ಯೋಗ ಅತ್ಯಂತ ಉಪಯುಕ್ತವಾಗಿದೆ ಎಂದು ಹೇಳಿದರು. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಕಾರ್ಯನಿರ್ವಾಹಕ ಅಭಿಯಂತರ ರಾಜಕುಮಾರ ಬಾಳಿ ಯೋಗ ಪ್ರದರ್ಶನ ನಡೆಸಿಕೊಟ್ಟರು.
ಕಾರ್ಯಕ್ರಮದ ಸಂಯೋಜಕರಾದ ಪ್ರೊ.ಜಿ.ಆರ್ .ಅಂಗಡಿ ಸ್ವಾಗತ ಭಾಷಣ ಮಾಡಿದರು. ಸಂಚಾಲಕ ಡಾ.ವಿ.ಸಾಯಿ ಅಭಿನವ್ ವಂದಿಸಿದರು. ವಿ.ವಿ.ಯ ಪ್ರಾಧ್ಯಾಪಕರು, ಭೋದಕೇತರ ಸಿಬ್ಬಂದಿ, ಸಂಶೋಧನಾ ವಿದ್ಯಾರ್ಥಿಗಳು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

