ಅರ್ಜಿ ಸಲ್ಲಿಕೆ ದಿನಾಂಕ ವಿಸ್ತರಣೆ

Contributed bymary.joseph@timesgroup.com|Vijaya Karnataka
extended application deadline for 2026 translation award
ಬೆಂಗಳೂರು: ದ್ರಾವಿಡ ಭಾಷಾ ಟ್ರಾನ್ಸ್ ಲೇಟರ್ಸ್ ಅಸೋಸಿಯೇಶನ್ (ಡಿಬಿಟಿಎ) ವತಿಯಿಂದ ನೀಡಲಾಗುವ 2026ನೇ ಸಾಲಿನ ಅನುವಾದ ಪ್ರಶಸ್ತಿಗೆ ಅರ್ಜಿ ಸಲ್ಲಿಸುವ ಕೊನೆಯ ದಿನಾಂಕವನ್ನು 2026ರ ಜುಲೈ 15ರವರೆಗೆ ವಿಸ್ತರಿಸಲಾಗಿದೆ ಎಂದು ಸಂಘ ತಿಳಿಸಿದೆ. ದ್ರಾವಿಡ ಭಾಷೆ ಗಳಾದ ಮಲಯಾಳಂ, ಕನ್ನಡ, ತಮಿಳು ಹಾಗೂ ತುಳು ಭಾಷೆಗಳಿಂದ ತೆಲುಗು ಭಾಷೆಗೆ ಅನುವಾದಗೊಂಡ ಕಾದಂಬರಿಗಳಿಗೆ ಪ್ರಶಸ್ತಿ ನೀಡಲಾಗುವುದು. 2024 ಮತ್ತು 2025ರಲ್ಲಿಪ್ರಕಟವಾದ ಅನುವಾದ ಕೃತಿಗಳನ್ನು ಮಾತ್ರ ಪರಿಗಣಿಸಲಾಗುತ್ತದೆ. ಅಧ್ಯಕ್ಷರು, ಡಿಬಿಟಿಎ, ಶ್ರೀ ಭೈರವೇಶ್ವರ ನಿಲಯ, ಇಮ್ಮಡಿಹಳ್ಳಿ ಮುಖ್ಯ ರಸ್ತೆ, ಹಗದೂರು, ವೈಟ್ ಫೀಲ್ಡ…, ಬೆಂಗಳೂರು 560066 ಈ ವಿಳಾಸಕ್ಕೆ ಕಳುಹಿಸಬೇಕು. 11,111 ರೂ. ನಗದು ಬಹುಮಾನ, ಪ್ರಶಸ್ತಿ ಪತ್ರ ಹಾಗೂ ಸ್ಮರಣಿಕೆ ಒಳಗೊಂಡಿದೆ ಎಂದು ಸಂಸ್ಥಾಪಕ ಅಧ್ಯಕ್ಷೆ ಡಾ. ಸುಷ್ಮಾ ಶಂಕರ್ ತಿಳಿಸಿದ್ದಾರೆ.