ಸಮಸ್ಯೆಗಳನ್ನು ಬಗೆಹರಿಸಿ

Contributed byskchoudhari121@gmail.com|Vijaya Karnataka
laborers and villagers demand immediate solutions to problems
ವಿಕ ಸುದ್ದಿಲೋಕ ಅಫಜಲಪುರ ವಿವಿಧ ಸಮಸ್ಯೆಗಳನ್ನು ತಕ್ಷಣವೇ ಬಗೆಹರಿಸುವಂತೆ ಒತ್ತಾಯಿಸಿ ಕೂಲಿ ಕಾರ್ಮಿಕರು ಹಾಗೂ ಗ್ರಾಮಸ್ಥರು ಗೊಬ್ಬುರ(ಬಿ) ಗ್ರಾಪಂ ಕಚೇರಿ ಎದುರು ಪ್ರತಿಭಟನೆ ನಡೆಸಿದರು. ನರೇಗಾ ಉದ್ಯೋಗಕ್ಕಾಗಿ ಸಲ್ಲಿಸಿರುವ ಬೇಡಿಕೆಗಳಿಗೆ ಸ್ಪಂದನೆ ಸಿಗುತ್ತಿಲ್ಲ, ಕುಡಿಯುವ ನೀರಿನ ಸಮಸ್ಯೆ ತೀವ್ರಗೊಂಡರೂ ನಿರ್ಲಕ್ಷ್ಯ ವಹಿಸಲಾಗುತ್ತಿದೆ. ಕೆಲವರಿಂದ ಕರ ವಸೂಲಿ ಮಾಡಲಾಗುತ್ತಿದ್ದು, ಇನ್ನೂ ಕೆಲವರಿಗೆ ವಿನಾಯಿತಿ ನೀಡಲಾಗುತ್ತಿದೆ. ಈ ಪ್ರಕ್ರಿಯೆಯಲ್ಲಿಭ್ರಷ್ಟಾಚಾರ ನಡೆಯುತ್ತಿರುವ ಶಂಕೆ ಇದ್ದು, ಪಂಚಾಯಿತಿ ಆಡಳಿತದಲ್ಲಿಪಾರದರ್ಶಕತೆ ಇಲ್ಲ, ಇದರ ಬಗ್ಗೆ ಸಮಗ್ರ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದರು. ಪಿಡಿಒ ಲಕ್ಷ್ಮಿ ಭಜಂತ್ರಿ ಮಾತನಾಡಿ, ನಾನು ಅಧಿಕಾರ ವಹಿಸಿಕೊಂಡು ಎರಡ್ಮೂರು ತಿಂಗಳಷ್ಟೇ ಆಗಿದೆ. ಇಲ್ಲಿನ ಸಮಸ್ಯೆಗಳ ಕುರಿತು ಮಾಹಿತಿ ಪಡೆಯಲು ಸ್ವಲ್ಪ ಸಮಯ ಬೇಕಾಗಿದೆ. ಕರ ವಸೂಲಿ ಹಾಗೂ ಕುಡಿಯುವ ನೀರಿನ ಸಮಸ್ಯೆಗೆ ಪರಿಹಾರ ಕಲ್ಪಿಸಲಾಗುವುದು. ಉದ್ಯೋಗ ಖಾತ್ರಿ ಯೋಜನೆಯಡಿ ಉದ್ಯೋಗ ನೀಡಲು ಬಜೆಟ್ ಕೊರತೆ ಇದೆ. ಈ ಕುರಿತು ಮೇಲಧಿಕಾರಿಗಳ ಗಮನಕ್ಕೆ ತಂದು ಅಗತ್ಯ ಕ್ರಮಕ್ಕೆ ಮನವಿ ಮಾಡಲಾಗುವುದು ಎಂದು ಭರವಸೆ ನೀಡಿದರು. ಹುಣಚಪ್ಪ ಮೈನಾಳ, ಖಾದರಸಾಬ್ ಆಂದೋಲ, ಬಾಸುಮಯ್ಯ, ಸಾತಲಿಂಗಪ್ಪ ನಂದೂರ, ಶಿವಾನಂದ ಕೌಲಗಿ, ಸೋಮಣ್ಣ ಕಲಬುರಗಿ, ಪ್ರಭುಲಿಂಗ ಹುಣಸಿಹಡಲಗಿ, ಮಂಜುನಾಥ ಸರಡಗಿ, ಶಿವು ಕುಸಾಳ, ಶಿವಕುಮಾರ ವಾಗ್ಮಡಿ, ಮೋಸಿನ್ ಜಮಾದಾರ, ಗೋವಿಂದ, ಶರಣು ಕೊತ್ವಾಳ, ಲಚ್ಚಪ್ಪ ನಾಟಿಕಾರ, ಹುಸೇನಿ ವಾಗ್ಮಡೆ, ಯಲ್ಲಪ್ಪ ವಾಗ್ಮಡೆ, ಯಲ್ಲಪ್ಪ ಸಂಡಗಿ, ದಸ್ತಗೀರ್ ಬಾಸಗಿ, ರಫೀಕ್ ಬಂದರವಾಡ, ರಾಮಣ್ಣ ಮೈಂದರಗಿ, ಶ್ರೀಶೈಲ ಬಂತನಾಳ, ಚಂದ್ರಕಾಂತ ಬೆಣ್ಣೆಶಿರೂರ, ಮಲ್ಲಿಕಾರ್ಜುನ ಸೇರಿ ಅನೇಕರು ಇದ್ದರು.