ವಿಧಾನ ಪರಿಷತ್ ಚುನಾವಣೆಯಲ್ಲಿಅಡ್ಡ ಮತದಾನ | ವಿಜಯೇಂದ್ರ ಹೇಳಿಕೆಗೆ ಹೈಕಮಾಂಡ್ , ಹಿರಿಯರ ಅಸಮ್ಮತಿ

Contributed byKeerthi Prasad|Vijaya Karnataka
legislative council elections disagreement from high command and seniors against vijayendras statement
ವಿಕ ಸುದ್ದಿಲೋಕ ಬೆಂಗಳೂರು ಪರಿಷತ್ ಚುನಾವಣೆಯಲ್ಲಿಅಡ್ಡ ಮತದಾನ ಮಾಡಿದ ಬಿಜೆಪಿ ಶಾಸಕರನ್ನು ಪತ್ತೆ ಹಚ್ಚಲು ಧರ್ಮಸ್ಥಳದಲ್ಲಿಶಾಸಕಾಂಗ ಪಕ್ಷದ ಸಭೆ ನಡೆಸಿ ಆಣೆ ಪ್ರಮಾಣ ಮುಂದಾಗಿರುವ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ನಿರ್ಧಾರಕ್ಕೆ ಸ್ವಪಕ್ಷೀಯ ಶಾಸಕರು, ಮುಖಂಡರ ಅಪಸ್ವರದ ಜತೆಗೆ ಹೈಕಮಾಂಡ್ ಸಹಮತ ಸಿಗದ ಹಿನ್ನೆಲೆಯಲ್ಲಿಆ ಪ್ರಯತ್ನದಿಂದ ಬಿಜೆಪಿ ಹಿಂದೆ ಸರಿದಿದೆ. ಶಿಸ್ತಿನ ಪಕ್ಷದಲ್ಲಿಅಶಿಸ್ತು ಪ್ರದರ್ಶಿಸುವ ಮೂಲಕ ರಾಜ್ಯ ಹಾಗೂ ರಾಷ್ಟ್ರ ಮಟ್ಟದಲ್ಲಿಪಕ್ಷಕ್ಕೆ ಮುಖಭಂಗವಾಗಲು ಕಾರಣರಾದವರ ಪತ್ತೆಗೆ ಶಾಸಕರಿಂದ ಆಣೆ ಪ್ರಮಾಣ ಮಾಡಿಸುವ ಚಿಂತನೆಗೆ ಹೈಕಮಾಂಡ್ ಒಪ್ಪಿಗೆ ದೊರಕಿಲ್ಲ. ರಾಜಕೀಯ ವಲಯದಲ್ಲಿನ ಘಟನಾವಳಿಗೆ ಸಂಬಂಧಪಟ್ಟಂತೆ ಧಾರ್ಮಿಕ ಕೇಂದ್ರದಲ್ಲಿಆಣೆ ಪ್ರಮಾಣದ ಮೊರೆ ಹೋಗುವುದು ಸರಿಯಲ್ಲಎಂದು ಸ್ವಪಕ್ಷೀಯರೇ ಆಕ್ಷೇಪಿಸಿದ್ದರು. ಕೇಂದ್ರದ ವರಿಷ್ಠರು ಸಹ ಶಾಸಕರಿಂದ ಆಣೆ ಪ್ರಮಾಣ ಮಾಡಿಸುವಂತಹ ಪ್ರಯತ್ನ ಬೇಡ. ಶಿಸ್ತು ಉಲ್ಲಂಘಿಸಿ ಅಡ್ಡ ಮತದಾನ ಮಾಡಿದವರನ್ನು ಪತ್ತೆ ಹಚ್ಚಿ ಮಾಹಿತಿ ನೀಡಿ ಅವರ ಮೇಲೆ ನಿಗಾ ವಹಿಸಿದರೆ ಸಾಕು. ಪಕ್ಷ ಸೂಕ್ತ ಸಂದರ್ಭದಲ್ಲಿಕ್ರಮ ಜರುಗಿಸಲಿದೆ ಎಂದು ಸ್ಪಷ್ಟವಾಗಿ ಸೂಚಿಸಿದೆ ಎಂದು ಮೂಲಗಳು ತಿಳಿಸಿವೆ. ಬಹಳಷ್ಟು ಶಾಸಕರು, ಮುಖಂಡರು ಸಹ ಪಕ್ಷದ ಬೆಳವಣಿಗೆಗೆ ಸಂಬಂಧಪಟ್ಟ ವಿಚಾರವಾಗಿ ಧರ್ಮಸ್ಥಳವನ್ನು ಎಳೆದು ತರುವುದು ಸೂಕ್ತ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದರು. ಹಾಗಾಗಿ ಧರ್ಮಸ್ಥಳದಲ್ಲೇ ಶಾಸಕಾಂಗ ಪಕ್ಷದ ಸಭೆ ನಡೆಸಿ ಶಾಸಕರಿಂದ ಆಣೆ ಪ್ರಮಾಣ ಮಾಡಿಸಿ ಪಕ್ಷ ನಿಷ್ಠೆಯನ್ನು ತಿಳಿಯುವ ರಾಜ್ಯಾಧ್ಯಕ್ಷರ ಪ್ರಯತ್ನಕ್ಕೆ ಬ್ರೇಕ್ ಬಿದ್ದಿದೆ. ದಿಲ್ಲಿಯಲ್ಲಿಮಂಗಳವಾರ ವರಿಷ್ಠರ ಭೇಟಿಗೂ ಮೊದಲೇ ಮಾಹಿತಿ ನೀಡಿದ ವಿಧಾನಸಭೆ ಪ್ರತಿಪಕ್ಷ ನಾಯಕ

ಆರ್ . ಅಶೋಕ್ , ‘‘ಧರ್ಮಸ್ಥಳದಲ್ಲಿಶಾಸಕಾಂಗ ಪಕ್ಷದ ಸಭೆ ನಡೆಸುವ ಬಗ್ಗೆ ರಾಜ್ಯಾಧ್ಯಕ್ಷರು ಚರ್ಚಿಸಿದ್ದರು. ನಾನು ಕೂಡ ಈ ವಿಚಾರವಾಗಿ ಪಕ್ಷದ ಹಿರಿಯ ನಾಯಕರೊಂದಿಗೆ ಚರ್ಚೆ ನಡೆಸಿದ್ದೇನೆ. ಬಹುತೇಕ ಶಾಸಕರು ಬೇಡ ಎನ್ನುವ ಅಭಿಪ್ರಾಯ ಹೇಳಿದರು. ಈ ರೀತಿಯ ರಾಜಕೀಯ ಇದೇ ಮೊದಲ ಬಾರಿಗೆ ನಡೆದಿಲ್ಲ. ಧರ್ಮಸ್ಥಳವನ್ನು ಇದರಲ್ಲಿಎಳೆದು ತರುವುದು ಬೇಡ ಎಂದು ನಿರ್ಧರಿಸಿದ್ದೇವೆ. ಹಾಗಾಗಿ ಧರ್ಮಸ್ಥಳದಲ್ಲಿಶಾಸಕಾಂಗ ಪಕ್ಷದ ಸಭೆ ನಡೆಸುತ್ತಿಲ್ಲ,’’ ಎಂದು ಸ್ಪಷ್ಟಪಡಿಸಿದರು.