ಅನುಭವ ಮಿಸ್ ಎಂದ ಡಿಸಿಎಂ

Contributed byKENCHE GOWDA|Vijaya Karnataka
political exclusion for cabinet post discussion between deputy cm and hk patil
ಬೆಂಗಳೂರು: ಸಂಪುಟದಲ್ಲಿಅವಕಾಶ ಮಿಸ್ ಮಾಡಿಕೊಂಡಿರುವ ಹಿರಿಯ ಶಾಸಕ ಎಚ್ .ಕೆ.ಪಾಟೀಲ್ ರನ್ನು ಡಿಸಿಎಂ ಡಾ. ಪರಮೇಶ್ವರ್ ಮಂಗಳವಾರ ಭೇಟಿ ಮಾಡಿ ಒಟ್ಟಿಗೇ ಉಪಹಾರ ಸೇವಿಸಿ ಬಹುಹೊತ್ತು ಚರ್ಚಿಸಿದರು. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಪರಮೇಶ್ವರ್ , ‘‘ನಾವಿಬ್ಬರೂ ಸಮಾನ ಮನಸ್ಕರು. ಮಾಜಿ ಸಿಎಂ ಮೊಯಿಲಿ ಕಾಲದಿಂದಲೂ ಸಂಪುಟದಲ್ಲಿಒಡ ನಾಡಿಗಳಾಧಿಗಿದ್ದವರು. ಪಾಟೀಲ್ ಅವರಿಗೆ ಇರುವ ರಾಜಕೀಯ ಜ್ಞಾನ, ಅನುಭವವು ರಾಜಕೀಯವಾಗಿ ಪಕ್ಷದ ಸರಕಾರಕ್ಕೆ ಬಹಳ ಸಂದರ್ಭದಲ್ಲಿಅನುಕೂಲಧಿವಾಗಿದೆ. ಅದನ್ನು ನಾವು ಮಿಸ್ ಮಾಡಿಕೊಳ್ಳುತ್ತಿದ್ದೇವೆ,’’ ಎಂದು ಬೇಸರ ತೋಡಿಕೊಂಡರು. ಅತೃಪ್ತಿ ತೋಡಿಕೊಂಡ ಪಾಟೀಲ್ : ಸಿಎಂ ಡಿ.ಕೆ.ಶಿವಕುಮಾರ್ ಸಂಪುಟದಲ್ಲಿಅವಕಾಶ ಕೈತಪ್ಪಿರುವ ಬಗ್ಗೆ ಎಚ್ .ಕೆ.ಪಾಟೀಲ್ ಅಸಮಾಧಾನ ತೋಡಿಕೊಂಡರು. ‘‘ಸಚಿವ ಆಗಬೇಕು ಎಂಬುದು ಅಭಿಮಾನಿಗಳ ಅಪೇಕ್ಷೆ. ನನಗೆ ಸಚಿವ ಸ್ಥಾನ ಸಿಗದಿರುವ ಬಗ್ಗೆ ಸಿಎಂ ಮತ್ತು ಎಐಸಿಸಿ ಅಧ್ಯಕ್ಷರನ್ನು ಕೇಳಬಹುದು,’’ ಎಂದು ಪ್ರತಿಕ್ರಿಯಿಸಿದರು. ‘‘ಎಐಸಿಸಿ ಅಧ್ಯಕ್ಷರು ನನಗೆ ಆತ್ಮೀಯರು. ನನ್ನ ನಡುವಿನ ಸಂಬಂಧ ಬಹಳ ಹಳೆಯದು. ಹಿಂದೆಲ್ಲಾಜತೆಯಾಗಿ ಕೆಲಸ ಮಾಡಿದ್ದೇವೆ. ಅವರು ನನ್ನ ಹಿತೈಷಿಗಳೂ ಹೌದು. ಸಂಪುಟ ರಚನೆ ಸಂದರ್ಭದಲ್ಲಿಕೂಡ ಭೇಟಿಯಾಗಿದ್ದೆ,’’ ಎಂದು ಪರೋಕ್ಷವಾಗಿ ಖರ್ಗೆ ಅವರ ಸಂಬಂಧವೂ ನೆರವಿಗೆ ಬಾರದ ಬಗ್ಗೆ ಬೇಸರಿಸಿಕೊಂಡರು.