ವಿಕ ಸುದ್ದಿಲೋಕ ಕೊಡೇಕಲ್ ಶಿಕ್ಷಕ ವೃತ್ತಿ ಎನ್ನುವುದು ಕೇವಲ ಜೀವನೋಪಾಯಕ್ಕೆ ಮಾತ್ರ ಸಿಮೀತವಾಗಿಲ್ಲ ಅದು ಒಂದು ಶ್ರೇಷ್ಠ ಮತ್ತು ಮೌಲ್ಯಯುತ ಸಮಾಜದ ನಿರ್ಮಾಣದ ಜವಾಬ್ದಾರಿ ಎಂದು ಪಿಕೆಪಿಎಸ್ ಬ್ಯಾಂಕ್ ಮಾಜಿ ಅಧ್ಯಕ್ಷ ಶಾಮಸುಂದರ ಜೋಶಿ ಹೇಳಿದರು. ಕೊಡೇಕಲ್ ನಲ್ಲಿ ಕಳೆದ 28 ವರ್ಷಗಳಿಂದ ಶಿಕ್ಷಣ ಇಲಾಖೆಯಲ್ಲಿಶಿಕ್ಷಕರಾಗಿ, ಮುಖ್ಯ ಗುರುಗಳಾಗಿ ವಯೋ ನಿವೃತ್ತಿ ಹೊಂದಿದ ಜೆಟ್ಟೆಪ್ಪ ಬೂದಿಹಾಳ ಅವರ ಬಿಳ್ಕೊಡುಗೆ ಕಾರ ್ಯಕ್ರಮದಲ್ಲಿಮಾತನಾಡಿ, ಶಿಕ್ಷಕ ವೃತ್ತಿ ಅತ್ಯಂತ ಪವಿತ್ರವಾದದು ಅಂತಹ ವೃತ್ತಿಯನ್ನು ಮಾಡುತ್ತಿರುವ ಶಿಕ್ಷಕರು ನಮ್ಮ ಸಮಾಜದ ನಿಜವಾದ ಹಿರೋಗಳು.ಶಿಕ್ಷಕರು ಅಕ್ಷರ ಗೊತ್ತಿಲ್ಲದ ಮಗುವಿಗೆ ಅಕ್ಷರ ಕಲಿಸಿ ದೇಶದ ಭವ್ಯ ಪ್ರಜೆಯನ್ನಾಗಿ ತಯಾರಿಸುತ್ತಾರೆ ಎಂದರು. ಸನ್ಮಾನ ಸ್ವೀಕರಿಸಿ ಮಾತನಾಡಿದ ಜೆಟ್ಟೆಪ್ಪ ಬೂದಿಹಾಳ, ಕಳೆದ 28 ವರ್ಷಗಳಿಂದ ಇಲಾಖೆಯಲ್ಲಿಸೇವೆ ಸಲ್ಲಿಸಿರುವುದು ನನ್ನ ಸೌಭಾಗ್ಯವೇ ಸರಿ, ಗ್ರಾಮೀಣ ಭಾಗದವನಾದ ನಾನು ಇಲಾಖೆಯ ಸೇರಿದ ಆರಂಭದ ದಿನಗಳಿಂದ ಹಿಡಿದು ನಿವೃತ್ತಿ ದಿನಗಳವರೆಗೆ ಇಲಾಖೆಯ
ಅಧಿಕಾರಿಗಳ ಮತ್ತು ಮಿತ್ರರ ಸಹಕಾರವನ್ನು ಎಂದಿಗೂ ಮರೆಯುವಂತಿಲ್ಲಎಂದು ಭಾವುಕರಾಗಿ ಹೇಳಿದರು. ಭೀಮನಗೌಡ ಮಾಲಿಪಾಟೀಲ್ , ಆರ್ .ಎಸ್ .ಕರಡ್ಡಿ. ರಂಗನಾಥ ದೋರಿ, ವೀರಸಂಗಪ್ಪ ಹಾವೇರಿ, ಸೋಮಲಿಂಗಪ್ಪ ದೊರಿ, ಡಾ.ಬಿ.ಬಿ.ಬಿರಾದಾರ, ಚನ್ನಪಪ ತೀರ್ಥ, ನಾಗರಾಜ ದೊಡಮನಿ, ಅಯ್ಯಪ್ಪ ಪಡಶೆಟ್ಟಿ, ಮಲ್ಲುಜಂಗಳಿ, ಚಂದ್ರಶೇಖರ ಹೋಕ್ರಾಣಿ, ಭೀಮನಗೌಎ ಬಿರಾದಾರ, ಕೋರಿಸಂಗಯ್ಯ ಗಡ್ಡದ, ಬಸವರಾಜ ಮಂಟೆ, ವಿ.ಜಿ.ಹಂಡಗಿ ಸೇರಿ ಇತರರಿದ್ದರು. ಓಂಕಾರ ನಾಕೆ ನಿರೂಪಿಸಿದರು. ರಾಚಮ್ಮ ಪೂಜಾರಿ ಸ್ವಾಗತಿಸಿದರು, ಮೌನೇಶ ಹೂಗಾರ ವಂದಿಸಿದರು.