ಸಿದ್ದರಾಮಯ್ಯಗೆ ಧನ್ಯವಾದ

Contributed bysheshu0147@gmail.com|Vijaya Karnataka

ಮಾನ್ಯತೆ ಪಡೆಯದ 1500 ಅತಿಥಿ ಉಪನ್ಯಾಸಕರಿಗೆ ಪರ್ಯಾಯ ಶೈಕ್ಷಣಿಕ ಸಂಯೋಜಕರ ಹುದ್ದೆ ನೀಡುವ ನಿರ್ಣಯ ಕೈಗೊಂಡ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಅಭಿನಂದನೆ ಸಲ್ಲಿಸಲಾಗಿದೆ. ಈ ನಿರ್ಣಯದಿಂದ ಅತಿಥಿ ಉಪನ್ಯಾಸಕರು ಹರ್ಷ ವ್ಯಕ್ತಪಡಿಸಿದ್ದಾರೆ. ಹಾಲಿ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರಿಗೆ ಉದ್ಯೋಗ ಭದ್ರತೆ, ಗೌರವಧನ ಹೆಚ್ಚಳ, ನಿವೃತ್ತಿ ನಂತರದ ಆರ್ಥಿಕ ನೆರವು ನೀಡಲು ಮನವಿ ಮಾಡಲಾಗಿದೆ.

siddaramaiah brings name to chief minister position job security for 1500 guest lecturers

ವಿಕ ಸುದ್ದಿಲೋಕ ಮಂಡ್ಯ

ಮಾನ್ಯತೆ ಪಡೆಯದ 1500 ಅತಿಥಿ ಉಪನ್ಯಾಸಕರ ಿಗೆ ಪರ್ಯಾಯ ಶೈಕ್ಷಣಿಕ ಸಂಯೋಕರ ಹುದ್ದೆ ನೀಡುವ ನಿರ್ಣಯ ಕೈಗೊಂಡ ನಿಕಟಪೂರ್ವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸರಕಾರಿ ಪದವಿ ಕಾಲೇಜುಗಳ ಅತಿಥಿ ಉಪನ್ಯಾಸಕರ ರಾಜ್ಯ ಸಮನ್ವಯ ಸಮಿತಿಯ ರಾಜ್ಯ ಪ್ರಧಾನ ಕಾರ ್ಯದರ್ಶಿ ಬಿ.ಎಸ್ .ನಾಗರಾಜು ಧನ್ಯವಾದ ತಿಳಿಸಿದರು.

ಸಮಿತಿಯಿಂದ ಮಾನ್ಯತೆ ಪಡೆಯದ (ನಾನ್ ಯುಜಿಸಿ) ಅತಿಥಿ ಉಪನ್ಯಾಸಕರ ಪರವಾಗಿ ರಾಜ್ಯದ ನಾನಾ ಕಡೆ ಹೋರಾಟ ನಡೆಸಿದ ಫಲವಾಗಿ ನಿಕಟಪೂರ್ವ ಮುಖ್ಯಮಂತ್ರಿ ಸಿದ್ದರಾಮಯ್ಯ, ನಿಕಟಪೂರ್ವ ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ್ ಒಲವು ತೋರಿದ್ದರು. ರಾಜ್ಯ ಸರಕಾರದ ಗೌರವಧನ ನಿಗದಿಪಡಿಸಿ, ಆರ್ಥಿಕ ಅನುಮೋದನೆ ನೀಡಿ ಪ್ರಸಕ್ತ ಸಾಲಿನಿಂದ ಅನ್ವಯವಾಗುವಂತೆ ತೀರ್ಮಾನ ಮಾಡಿದ್ದಾರೆ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿಹರ್ಷ ವ್ಯಕ್ತಪಡಿಸಿದರು.

ಹಾಲಿ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ದಶಕಗಳಿಂದ ಸೇವೆ ಸಲ್ಲಿಸುತ್ತಿರುವ ಅತಿಥಿ ಉಪನ್ಯಾಸಕರಿಗೆ ಉದ್ಯೋಗ ಭದ್ರತೆ, 7ನೇ ವೇತನ ಆಯೋಗದ ಶಿಫಾರಸಿನ ಅನ್ವಯ ಗೌರವಧನ ಹೆಚ್ಚಳ, ನಿವತ್ತಿ ನಂತರ ಕನಿಷ್ಠ 25 ಲಕ್ಷ ರೂ. ಇಡಿ ಗಂಟು ನೀಡುವ ಬೇಡಿಕೆಯಾದ ಸೇವಾ ಸಕ್ರಮಾತಿ ಮಾಡುವ ಮೂಲಕ ಇತಿಹಾಸ ನಿರ್ಮಿಸಲು ಮನವಿ ಮಾಡಿದರು.

ರಾಜ್ಯ ಸಂಚಾಲಕ ಮಹೇಶ್ , ಮಹಿಳಾ ಕಾರ ್ಯದರ್ಶಿ ಎಸ್ .ಹರ್ಷಿತ, ಜಿಲ್ಲಾಉಪಾಧ್ಯಕ್ಷ ಟಿ.ಜೆ.ದಿಲೀಪ್ , ಜಿಲ್ಲಾಕಾರ ್ಯದರ್ಶಿ ಡಾ.ರಂಜನ್ ಸತ್ಯದಾಸ್ , ರಾಷ್ಟ್ರೀಯ ಹೋರಾಟ ಸಮಿತಿ ಅಧ್ಯಕ್ಷ ಎಂ.ಲಿಂಗರಾಜು ಇದ್ದರು.