ಸೈಬರ್ ಭದ್ರತೆಗೆ ಬೆಸ್ಕಾಂ ಸಧಿಜ್ಜು

Contributed byGirish J.R|Vijaya Karnataka

ಬೆಂಗಳೂರು ವಿದ್ಯುತ್‌ ಸರಬರಾಜು ಕಂಪನಿ, ಬೆಸ್ಕಾಂ, ಗ್ರಾಹಕರ ದತ್ತಾಂಶವನ್ನು ಸುರಕ್ಷಿತವಾಗಿಡಲು ಮತ್ತು ಸೈಬರ್‌ ದಾಳಿಗಳನ್ನು ತಡೆಯಲು ಹೊಸ ಹೆಜ್ಜೆ ಇಡುತ್ತಿದೆ. ಇದಕ್ಕಾಗಿ, ಬೆಸ್ಕಾಂ ಒಂದು ಸುಸಜ್ಜಿತ ಸೈಬರ್‌ ಭದ್ರತಾ ಕಾರ್ಯಾಚರಣೆ ಕೇಂದ್ರವನ್ನು ಸ್ಥಾಪಿಸುತ್ತಿದೆ. ಈ ಕೇಂದ್ರವು ಕೃತಕ ಬುದ್ಧಿಮತ್ತೆಯ ಸಹಾಯದಿಂದ ಕಾರ್ಯನಿರ್ವಹಿಸಲಿದೆ. ಇದು ಸೈಬರ್‌ ವಂಚನೆಗಳನ್ನು ತಡೆಯಲು ಮತ್ತು ಗ್ರಾಹಕರ ಮಾಹಿತಿಯನ್ನು ರಕ್ಷಿಸಲು ಸಹಕಾರಿಯಾಗಲಿದೆ. ಈ ಕೇಂದ್ರವು ನೈಜ ಸಮಯದಲ್ಲಿ ಸೈಬರ್‌ ಬೆದರಿಕೆಗಳಿಗೆ ಪ್ರತಿಕ್ರಿಯಿಸಲಿದೆ.

bescom shivaji a new step in cyber security

ಜೆ.ಆರ್ .ಗಿರೀಶ್ ಬೆಂಗಳೂರು ಜಜ್ಟಿಜಿsh.್ಜ್ಟಃಠಿಜಿಞಛಿsಟ್ಛಜ್ಞಿdಜಿa.್ಚಟಞ ಗ್ರಾಹಕರ ದತ್ತಾಂಶದ ಸಂರಕ್ಷಣೆ ಹಾಗೂ ಸೈಬರ್ ದಾಳಿ ತಡೆಗೆ ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿಯು (ಬೆಸ್ಕಾಂ) ನಿರ್ದಿಷ್ಟ ಸೈಬರ್ ಭದ್ರತಾ ಕಾರ್ಯಾಚರಣೆ ಕೇಂದ್ರ (ಸಿಎಸ್ ಒಸಿ) ಆರಂಭಿಸುತ್ತಿದೆ. ಜಾಗತಿಕವಾಗಿ ಸೈಬರ್ ವಂಚಕರ ಹಾವಳಿ ಹೆಚ್ಚಿದ್ದು, ದೇಶದೆಲ್ಲೆಡೆ ಮೂಲಸೌಕರ್ಯ ಸೇವಾ ಸಂಸ್ಥೆಗಳ ದತ್ತಾಂಶಕ್ಕೆ ಕನ್ನ ಹಾಕುವ ಪ್ರಕರಣಗಳು ವ್ಯಾಪಕವಾಗಿವೆ. ಸೈಬರ್ ವಂಚಕರು ರಾಜ್ಯದಲ್ಲಿಮುಖ್ಯವಾಗಿ ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿಯ (ಬೆಸ್ಕಾಂ) ಹೆಸರು ಬಳಸಿಕೊಂಡು ವಂಚನೆಯ ಖೆಡ್ಡಾಕ್ಕೆ ಕೆಡವುತ್ತಿದ್ದಾರೆ. ಸೈಬರ್ ದಾಳಿಕೋರರು ಬೆಸ್ಕಾಂ ಅಧಿಕಾರಿ ಗಳ ಸೋಗಿನಲ್ಲಿಗ್ರಾಹಕರಿಗೆ ಅನಧಿಕೃತ ಲಿಂಕ್ ಮತ್ತು ಎಪಿಕೆ ಫೈಲ್ ಗಳನ್ನು ಕಳುಹಿಸಿ, ವಿದ್ಯುತ್ ಬಿಲ್ ಪಾವತಿಗೆ ಆ ಲಿಂಕ್ ಗಳು ಅಥವಾ ಅಪ್ಲಿಕೇಶನ್ ಗಳನ್ನು ಬಳಸುವಂತೆ ತಿಳಿಸಿ ವಂಚಿಸುತ್ತಿರುವ ಪ್ರಕರಣಗಳು ದಿನನಿತ್ಯ ವರದಿ ಯಾಗುತ್ತಿವೆ. ಸೈಬರ್ ವಂಚನೆ ಬೆಸ್ಕಾಂಗೆ ದೊಡ್ಡ ಫಜೀತಿ ತಂದಿಟ್ಟಿದ್ದು, ಇದಕ್ಕೆ ಕಡಿವಾಣ ಹಾಕಲು ಸಂಸ್ಥೆ ಸಿಎಸ್ ಒಸಿ ಮೊರೆ ಹೋಗುತ್ತಿದೆ. ಸೈಬರ್ ದಾಳಿ ಎಚ್ಚರಿಕೆ: ಬೆಸ್ಕಾಂ, ರಾಜ್ಯದ ಎಂಟು ಜಿಲ್ಲೆಗಳಿಗೆ ವಿದ್ಯುತ್ ಪೂರೈಕೆಯ ಜವಾಬ್ದಾರಿ ಹೊತ್ತಿದ್ದು, 20 ದಶಲಕ್ಷಕ್ಕೂ ಹೆಚ್ಚು ಗ್ರಾಹಕರಿಗೆ ಸೇವೆ ಒದಗಿಸುತ್ತಿದೆ. ಬೆಸ್ಕಾಂ ವ್ಯಾಪ್ತಿಯಲ್ಲಿ9.83 ಲಕ್ಷದಷ್ಟು ಕೃಷಿ ಪಂಪ್ ಸೆಟ್ ವಿದ್ಯುತ್ ಸಂಪರ್ಕಗಳು, ಕೈಗಾರಿಕಾ ಉದ್ದೇಶದ 1.78 ಲಕ್ಷ ಮತ್ತು ಗೃಹೋಪಯೋಗಿ ಉದ್ದೇಶದ 91.47 ಲಕ್ಷ ವಿದ್ಯುತ್ ಸಂಪರ್ಕಗಳಿವೆ. ವಿದ್ಯುತ್ ಸಂಪರ್ಕಕ್ಕೆ ಸಾರ್ವಜನಿಕರ ಆಧಾರ್ , ಕಟ್ಟಡದ ವಿವರ ಮತ್ತು ವಿಳಾಸದ ಪುರಾವೆಗಳನ್ನು ಸಂಗ್ರಹಿಸಲಾಗುತ್ತದೆ. ಈ ಎಲ್ಲಾವಿವರ ಮತ್ತು ಪುರಾವೆಗಳನ್ನು ಬೆಸ್ಕಾಂ ಡೇಟಾ ಬೇಸ್ ಸರ್ವರ್ ನಲ್ಲಿಸಂಗ್ರಹಿಸ ಲಾಗುತ್ತದೆ. ಸಂಸ್ಥೆಯ ದೈನಂದಿನ ಕಾರ್ಯ ಚಟುವಟಿಕೆಗಳು ಸ್ವಯಂಚಾಲಿತ ಮತ್ತು ಡಿಜಿಟಲೀಕರಣಗೊಳ್ಳುತ್ತಿದ್ದಂತೆ ಸೈಬರ್ ದಾಳಿ ಸಾಧ್ಯತೆ ಹೆಚ್ಚುತ್ತಿದೆ. ಈ ಮಧ್ಯೆ ಕೇಂದ್ರ ವಿದ್ಯುತ್ ಪ್ರಾಧಿಕಾರವು (ಸಿಇಎ) ದೇಶದ ಎಲ್ಲಾವಿದ್ಯುತ್ ಸರಬರಾಜು ಕಂಪನಿಗಳಿಗೆ (ಎಸ್ಕಾಂ) ತಮ್ಮ ಸೇವಾ ವ್ಯವಸ್ಥೆ ಹಾಗೂ ಗ್ರಾಹಕರ ದತ್ತಾಂಶ ಸುರಕ್ಷತೆಯನ್ನು ಖಚಿತ ಪಡಿ ಸಿ ಕೊಳ್ಳುವಂತೆ ನಿರ್ದೇಶನ ನೀಡಿದೆ. ಇದರಿಂದ ಎಚ್ಚೆತ್ತಿರುವ ಬೆಸ್ಕಾಂ, ಗ್ರಾಹಕರು ಹಾಗೂ ಸಂಸ್ಥೆಯ ಹಿತದೃಷ್ಟಿಯಿಂದ ಸಿಎಸ್ ಒಸಿ ಕೇಂದ್ರ ತೆರೆಯುತ್ತಿದೆ. ಎಐ ಕಣ್ಗಾವಲು: ಬೆಂಗಳೂರಿನ ಬೆಸ್ಕಾಂ ಪ್ರಧಾನ ಕಚೇರಿಯಲ್ಲಿಕಾರ್ಯಾರಂಭ ಮಾಡಲಿರುವ ಸಿಎಸ್ ಒಸಿ, ಸಂಪೂರ್ಣವಾಗಿ ಕೃತಕ ಬುದ್ಧಿಮತ್ತೆಯ (ಎಐ) ಕಣ್ಗಾವಲಿನಲ್ಲಿಕಾರ್ಯ ನಿರ್ವಹಿಸಲಿದೆ. ಬೆಸ್ಕಾಂ, ಡಿಜಿಟಲ್ ರೂಪಾಂತರ ಮತ್ತು ಸ್ಮಾರ್ಟ್ ಮೀಟರ್ ಅಳವಡಿಕೆ ತ್ವರಿತಗೊಳಿಸಿರುವುದರಿಂದ ಸಿಎಸ್ ಒಸಿ ಕೇಂದ್ರವು ಮಾಹಿತಿ ತಂತ್ರಜ್ಞಾನ ಹಾಗೂ ಕಾರ್ಯಾಚರಣಾ ತಂತ್ರಜ್ಞಾನ ವ್ಯವಸ್ಥೆಯನ್ನು ರಕ್ಷಿಸುತ್ತದೆ ಎಂದು ನಿರೀಕ್ಷಿಸಲಾಗಿದೆ. ‘‘ಸಿಎಸ್ ಒಸಿ, ಕೃತಕ ಬುದ್ಧಿಮತ್ತೆ ಮತ್ತು ಯಂತ್ರ ಕಲಿಕೆಯ ಪರಿಕರಗಳನ್ನು ಹೊಂದಿರುವ ಕಂಪನಿಯ ಮೊದಲ ಪೂರ್ಣ ಪ್ರಮಾಣದ ಭದ್ರತಾ ಕಾರ್ಯಾಚರಣೆ ಕೇಂದ್ರವಾಗಿರುತ್ತದೆ. ಈ ಕೇಂದ್ರವು ನೈಜ ಸಮಯದಲ್ಲಿಸೈಬರ್ ದಾಳಿ ಅಥವಾ ಬೆದರಿಕೆಗಳಿಗೆ ಪ್ರತಿಕ್ರಿಯಿಸುತ್ತದೆ,’’ ಎಂದು ಬೆಸ್ಕಾಂ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ. ‘‘ಸಿಎಸ್ ಒಸಿ ನಿರ್ವಹಿಸುವ ಕೆಲ ಪ್ರಕರಣ ಗಳಲ್ಲಿದುರ್ಬಲ ಸ್ಕ್ಯಾ ನ್ ಗಳು, ಪಾಸ್ ವರ್ಡ್ ಕ್ರ್ಯಾಕಿಂಗ್ , ಮಾಲ್ ವೇರ್ ದಾಳಿ, ಸಂಸ್ಥೆಯ ವೆಬ್ ಸೈಟ್ ಗೆ ಅನಧಿಕೃತ ಪ್ರವೇಶ ಮತ್ತು ಸೇವೆಯ ನಿರಾಕರಣೆ ಸೇರಿವೆ. ಈ ಕೇಂದ್ರ ವನ್ನು ಸಂಸ್ಥೆಯ ಮೊಬೈಲ್ ಅಪ್ಲಿ ಕೇ ಶನ್ ಗಳು, ವೆಬ್ ಪ್ಲಾಟ್ ಫಾಮ್ ರ್ ಗಳು ಮತ್ತು ಸಾರ್ವಜನಿಕ ಕ್ಲೌಡ್ ಮೂಲ ಸೌಕ ರ ್ಯದ ಸೇವೆಗಳೊಂದಿಗೆ ಸಂಯೋಜಿಸ ಲಾಗು ತ್ತದೆ,’’ ಎಂದು ಅಧಿಕಾರಿಗಳು ಹೇಳಿದ್ದಾರೆ.