8ಮಹೇಶ13
ಹಿಂದೂ ಶಕ್ತಿ ಸಮ್ಮೇಳನದಲ್ಲಿಪರಮಾತ್ಮ ಮಹಾರಾಜ ಶ್ರೀ ಸಲಹೆ (ಕಿಕ್ಕರ್ )
ದೇಶದಲ್ಲಿಹಿಂದೂಗಳು ಜಾಗೃತರಾಗಲಿ (ಹೆಡ್ )
ವಿಕ ಸುದ್ದಿಲೋಕ ಧಾರವಾಡ
ಪ್ರಸ್ತುತ ದಿನಗಳಲ್ಲಿಭಾರತ ಇಂದು ಹಿಂದೂಗಳದ್ದು ಎನ್ನುವ ಹಾಗಿಲ್ಲ. ಭಾರತ ದೇಶದಲ್ಲಿಹಿಂದೂಗಳ ಅಸ್ತಿತ್ವ ಕ್ರಮೇಣ ಕಡಿಮೆಯಾಗುತ್ತಿದೆ ಎಂದು ಧಾರವಾಡ ಶ್ರೀ ಕ್ಷೇತ್ರ ದ್ವಾರಪುರದ ಪರಮಾತ್ಮ ಮಹಾರಾಜ ಸ್ವಾಮಿಗಳು ಹೇಳಿದರು.
ನಗರದ ಕುಮಾರೇಶ್ವರ ನಗರದ ಹಿಂದೂ ಸಮ್ಮೇಳನ ಸಮಿತಿಯಿಂದ ಕುಮಾರೇಶ್ವರ ನಗರದ ಈಶ್ವರ ದೇವಸ್ಥಾನದ ಆವರಣದ ಹಾನಗಲ್ ಕುಮಾರಸ್ವಾಮೀಜಿ ವೇದಿಕೆಯಲ್ಲಿಆಯೋಜಿಸಿದ ಹಿಂದೂ ಶಕ್ತಿ ಸಮ್ಮೇಳನದಲ್ಲಿಅವರು ಮಾತನಾಡಿದರು.
ಹಿಂದೂಗಳು ಇನ್ನಾದರೂ ನಿದ್ರೇಯಿಂದ ಎದ್ದು ಜಾಗೃತರಾಗಬೇಕು. ಭಾರತದ 20 ರಾಜ್ಯಗಳಲ್ಲಿಮಾತ್ರ ಹಿಂದೂಗಳಿದ್ದು, ಹೀಗೆ ಮುಂದುವರಿದರೆ ಭಾರತ ದೇಶ ಎಲ್ಲಿಗೆ ತಲುಪುತ್ತಿದೆ? ಇದನ್ನು ಗಂಭೀರವಾಗಿ ಪರಿಗಣಿಸದಿದ್ದರೆ ಗಂಡಾಂತರ ಬರುತ್ತದೆ ಎಂದರು.
ಡಾ. ಮಲ್ಲಪ್ಪ ಬಂಡಿ, ಸಾಹಿತಿ ಡಾ. ಸಂಗಮೇಶ ಸವದತ್ತಿಮಠ,ಕುಮಾರೇಶ್ವರ ನಗರದ ಹಿಂದೂ ಸಮ್ಮೇಳನ ಸಮಿತಿ ಅಧ್ಯಕ್ಷ ಜಿ.ಜಿ. ಹಿರೇಮಠ ಮಾತನಾಡಿದರು.
ಬಾಳೇಶ ಹುಣಶ್ಯಾಳ, ಪ್ರಕಾಶ ಬಾಳಿಕಾಯಿ, ಎಂ.ಐ. ಕಳ್ಳಿಗುಡ್ಡ, ಸಂತೋಷ ದೇವರಡ್ಡಿ, ವಿಠ್ಠಲ ಅಂಕುಶಕರ, ಶ್ರೀನಿವಾಸ ಕುಲಕರ್ಣಿ ಇತರರು ಇದ್ದರು.
ಫೋಟೊ: 8ಮಹೇಶ13
ಧಾರವಾಡ ಕುಮಾರೇಶ್ವರ ನಗರದ ಹಿಂದೂ ಸಮ್ಮೇಳನ ಸಮಿತಿಯಿಂದ ಆಯೋಜಿಸಿದ ಹಿಂದೂ ಶಕ್ತಿ ಸಮ್ಮೇಳನವನ್ನು ಶ್ರೀ ಪರಮಾತ್ಮ ಮಹಾರಾಜ ಸ್ವಾಮಿಗಳು ಉದ್ಘಾಟಿಸಿದರು.

