ಬೈಂದೂರು: ರಂಗಶ್ರೀ -ರಂಗಹಬ್ಬ-2026ರ ಸಮಾರೋಪ

Contributed byramubijoor@gmail.com|Vijaya Karnataka

ಬೈಂದೂರಿನಲ್ಲಿ ರಂಗಶ್ರೀ -ರಂಗಹಬ್ಬ-2026ರ ಸಮಾರೋಪ ಸಮಾರಂಭ ನಡೆಯಿತು. ಲಾವಣ್ಯ ರಂಗತಂಡದ ಐದು ದಶಕಗಳ ಸಾಧನೆಯನ್ನು ಅಧ್ಯಕ್ಷ ಡಾ. ಗೋವಿಂದ ಬಾಬು ಪೂಜಾರಿ ಶ್ಲಾಘಿಸಿದರು. ಹವ್ಯಾಸಿ ಯಕ್ಷಗಾನ ಕಲಾವಿದ ಉಮೇಶ ಶ್ಯಾನುಭಾಗ್‌ ಬಿಜೂರು ಅವರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಹಲವು ಗಣ್ಯರು ಭಾಗವಹಿಸಿದ್ದರು.

bhadraavati inauguration of northeast indian dairy assistance center

ವಿಕ ಸುದ್ದಿಲೋಕ ಬೈಂದೂರು

ಯಾವುದೋ ಕ್ಷಣದಲ್ಲಿಮೂಡಿದ ಉತ್ಸಾಹ ಆರದಂತೆ ನೋಡಿಕೊಂಡು ಸಾಧನೆಯಾಗಿ ಪರಿವರ್ತಿಸಿಕೊಳ್ಳುವುದು ಸುಲಭದ ಕೆಲಸವಲ್ಲ. ಬೈಂದೂರಿನ ಲಾವಣ್ಯ ರಂಗತಂಡ ಐದು ದಶಕಗಳುದ್ದಕ್ಕೂ ತನ್ನ ಉತ್ಸಾಹವನ್ನು ಜೀವಂತವಾಗಿರಿಸಿಕೊಂಡು ಬೆಳೆದುಬಂದ ಬಗೆ ನಿಜಕ್ಕೂ ಗಮನಾರ್ಹ ಎಂದು ಉಪ್ಪುಂದ ಶ್ರೀ ವರಲಕ್ಷಿತ್ರ್ಮೕ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಡಾ. ಗೋವಿಂದ ಬಾಬು ಪೂಜಾರಿ ಹೇಳಿದರು.

ಬೈಂದೂರು ಶಾರದಾ ವೇದಿಕೆಯಲ್ಲಿಭಾನುವಾರ ಲಾವಣ್ಯದ ಸ್ಥಾಪಕಾಧ್ಯಕ್ಷ ದಿ. ಯು. ಉಪ್ಪುಂದ ಶ್ರೀನಿವಾಸ ಪ್ರಭು ಸ್ಮರಣಾರ್ಥ ಆಯೋಜನೆಯ ರಂಗಶ್ರೀ -ರಂಗಹಬ್ಬ-2026ರ ಸಮರೋಪ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಕಿರಿಮಂಜೇಶ್ವರ ನಿವೃತ್ತ ಶಿಕ್ಷಕ ಸದಾಶಿವ ಶ್ಯಾನುಭೋಗ್ ಶುಭಶಂಸನೆಗೈದರು. ಹವ್ಯಾಸಿ ಯಕ್ಷಗಾನ ಕಲಾವಿದ ಉಮೇಶ ಶ್ಯಾನುಭಾಗ್ ಬಿಜೂರು ಅವರನ್ನು ಸನ್ಮಾನಿಸಲಾಯಿತು. ರಂಗಸ್ಥಳ ಉಪ್ಪುಂದ ಅಧ್ಯಕ್ಷ ರಾಜಾರಾಮ ಭಟ್ , ಸುರಭಿ ಅಧ್ಯಕ್ಷ ಆನಂದ ಮದ್ದೋಡಿ, ಬೈಂದೂರು ಸೇನೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಗಿರೀಶ ಬೈಂದೂರು, ನಾವುಂದ ಗ್ರಾಪಂ ಅಧ್ಯಕ್ಷ ನರಸಿಂಹ ದೇವಾಡಿಗ, ತೆರಿಗೆ ಸಲಹೆಗಾರ ಮಂಜುನಾಥ ಪಿ. ಶೆಟ್ಟಿ, ಡಾ. ಬಿ. ಆರ್ . ಅಂಬೇಡ್ಕರ್ ಮಹಿಳಾ ಸಂಘದ ಅಧ್ಯಕ್ಷೆ ಸುಶೀಲಾ ಶಿರೂರು, ಲಾವಣ್ಯ ಅಧ್ಯಕ್ಷ ನರಸಿಂಹ ನಾಯಕ್ , ಉಪಾಧ್ಯಕ್ಷರಾದ ರವೀಂದ್ರ ಶ್ಯಾನುಭಾಗ್ , ರಾಮ ಕೆರೆಕಟ್ಟೆ, ಕಾರ್ಯದರ್ಶಿ ವಿಶ್ವನಾಥ ಆಚಾರ್ಯ ಉಪಸ್ಥಿತರಿದ್ದರು. ಮಂಜುನಾಥ ಶಿರೂರು ಸ್ವಾಗತಿಸಿ, ನಾಗರಾಜ ಯಡ್ತರೆ ನಿರೂಪಿಸಿದರು ಹರೇಗೋಡು ಉದಯ್ ಆಚಾರ್ಯ ವಂದಿಸಿದರು

ಫೊಟೋಫೈಲ್ : 10ಆರ್ ಸಮಾರೋಪ - ರಂWಶ್ರೀ ರಂಗಹಬ್ಬ-2026ರ ಸಮರೋಪ ಸಮಾರಂಭದಲ್ಲಿಹವ್ಯಾಸಿ ಯಕ್ಷಗಾನ ಕಲಾವಿದ ಉಮೇಶ ಶ್ಯಾನುಭಾಗ್ ಬಿಜೂರು ಅವರನ್ನು ಸನ್ಮಾನಿಸಲಾಯಿತು.