ಕಲಿತು ಉತ್ತಮ ಭವಿಷ್ಯ ರೂಪಿಸಿಕೊಳ್ಳಿ

Contributed bymaheshbadiger05@gmail.com|Vijaya Karnataka

ಧಾರವಾಡದ ಜೆಎಸ್‌ಎಸ್‌ ಕನ್ನಡ ಮಾಧ್ಯಮ ಪ್ರೌಢಶಾಲೆಯಲ್ಲಿ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭ ನಡೆಯಿತು. ಜೆಎಸ್‌ಎಸ್‌ ಆಡಳಿತಾಧಿಕಾರಿ ಅರಿಹಂತ ಪ್ರಸಾದ ಮಾತನಾಡಿ, ವಿದ್ಯಾರ್ಥಿಗಳು ಗುರುಗಳ ಮಾರ್ಗದರ್ಶನದಲ್ಲಿ ಉತ್ತಮ ಭವಿಷ್ಯ ರೂಪಿಸಿಕೊಳ್ಳಬೇಕು ಎಂದರು. ಸ್ಪರ್ಧಾತ್ಮಕ ಯುಗದಲ್ಲಿ ಕ್ರಿಯಾಶೀಲರಾಗಿ, ಆತ್ಮವಿಶ್ವಾಸದಿಂದ ಮುನ್ನಡೆಯಲು ಸಲಹೆ ನೀಡಿದರು. ಐಟಿಐ ಕಾಲೇಜು ಪ್ರಾಚಾರ್ಯ ಮಹಾವೀರ ಉಪಾಧ್ಯೆ, ಮುಖ್ಯಾಧ್ಯಾಪಕಿ ಮೈನಾವತಿ ದಿವಟೆ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು.

guidance for your childrens future the flying birds of the mango branch

6ಮಹೇಶ2

ಕಲಿತು ಉತ್ತಮ ಭವಿಷ್ಯ ರೂಪಿಸಿಕೊಳ್ಳಿ

ವಿಕ ಸುದ್ದಿಲೋಕ ಧಾರವಾಡ

ವಿದ್ಯೆ ಕಲಿಸಿದ ಗುರು ದೇವರಿಗೆ ಸಮಾನ, ಜನ್ಮ ಕೊಟ್ಟ ತಂದೆ ತಾಯಿ ಹಾಗೂ ಜನ್ಮಭೂಮಿ ಮರೆಯಬೇಡಿ. ವಿದ್ಯಾರ್ಥಿಗಳು ಗುರುಗಳು ತೋರಿಸುವ ಉತ್ತಮ ಮಾರ್ಗದಲ್ಲಿಸಾಗಿ ಉತ್ತಮ ಭವಿಷ್ಯ ರೂಪಿಸಿಕೊಳ್ಳಬೇಕು ಎಂದು ಜೆಎಸ್ ಎಸ್ ಆಡಳಿತಾಧಿಕಾರಿ ಅರಿಹಂತ ಪ್ರಸಾದ ಹೇಳಿದರು.

ನಗರದ ವಿದ್ಯಾಗಿರಿಯ ಜೆಎಸ್ ಎಸ್ ಕನ್ನಡ ಮಾಧ್ಯಮ ಪ್ರೌಢಶಾಲೆ ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭ ಉದ್ಘಾಟಿಸಿ ಮಾತನಾಡಿದರು.

ಇಂದಿನ ಸ್ಪರ್ಧಾತ್ಮಕ ಯುಗದಲ್ಲಿಮಕ್ಕಳು ಕ್ರಿಯಾಶೀಲರಾಗಿ ಚಟುವಟಿಕೆ ಉಳ್ಳವರಾಗಿ ಆತ್ಮವಿಶ್ವಾಸ ರೂಢಿಸಿಕೊಂಡು ಮುಂದೆ ಸಾಗಬೇಕು ಇತ್ತೀಚೆಗೆ ಕೃತಕ ಬುದ್ಧಿಮತ್ತೆಯ ಪ್ರಭಾವ ಹೆಚ್ಚಾಗಿದ್ದು ಮಕ್ಕಳು ಈಗಿನಿಂದಲೇ ಶಿಸ್ತು ರೂಢಿಸಿಕೊಂಡು ಉತ್ತಮ ಶಿಕ್ಷಣ ಪಡೆದು ಉತ್ತಮ ಬದುಕು ರೂಪಿಸಿಕೊಳ್ಳಿ ಎಂದರು.

ಐಟಿಐ ಕಾಲೇಜು ಪ್ರಾಚಾರ್ಯ ಮಹಾವೀರ ಉಪಾಧ್ಯೆ ಮಾತನಾಡಿ, ವಿದ್ಯಾರ್ಥಿಗಳು ಎಸ್ ಎಸ್ ಎಲ್ ಸಿ ನಂತರ ತಮ್ಮ ಆಸಕ್ತಿಯ ಕೋರ್ಸ್ ಗಳನ್ನು ಆಯ್ಕೆ ಮಾಡಿ ಚೆನ್ನಾಗಿ ಕಲಿಯಿರಿ. ಇಲ್ಲಿಸಿಗುವ ನೈತಿಕ ಶಿಕ್ಷಣ ನಿಮ್ಮ ಜೀವನಕ್ಕೆ ದಾರದೀಪವಾಗಲಿ ಎಂದರು.

ಶಾಲೆ ಮುಖ್ಯಾಧ್ಯಾಪಕಿ ಮೈನಾವತಿ ದಿವಟೆ ಮಾತನಾಡಿ, ವಿದ್ಯೆ ಎಂಬ ಎರಡಕ್ಷರ ಮನುಷ್ಯನನ್ನು ಉನ್ನತ ಮಟ್ಟಕ್ಕೆ ಕೊಂಡೊಯ್ಯುತ್ತದೆ. ವಿದ್ಯಾರ್ಥಿಗಳು ಉತ್ತಮ ಶಿಕ್ಷಣ ಪಡೆದು ಪ್ರಪಂಚದ ಅನ್ವೇಷಣೆಗೆ ಹೊರಡಲು ಸಿದ್ದರಾಗಿ ನಿಮ್ಮ ಭವಿಷ್ಯ ಉಜ್ವಲವಾಗಲಿ ಎಂದು ಮಕ್ಕಳಿಗೆ ಹಾರೈಸಿದರು.

ಶೀತಲ್ ಕುಂದರ್ , ಮಂಜುನಾಥ ದಾಸನಕೊಪ್ಪ ಇತರರು ಇದ್ದರು.

ಫೋಟೊ: 6ಮಹೇಶ2

ಧಾರವಾಡ ಜೆಎಸ್ ಎಸ್ ಕನ್ನಡ ಮಾಧ್ಯಮ ಪ್ರೌಢಶಾಲೆಯ ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭ ನಡೆಯಿತು.