9ಮಹೇಶ11
ಮತದಾರರ ಪಟ್ಟಿ ಪರಿಷ್ಕರಣೆ ಪ್ರಾರಂಭ
ವಿಕ ಸುದ್ದಿಲೋಕ ಧಾರವಾಡ
ಹು-ಧಾ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿಬರುವ 72, 73 ಮತ್ತು 74 ವಿಧಾನಸಭಾ ಮತಕ್ಷೇತ್ರಗಳಿಗೆ ಸಂಬಂಧಿಸಿದಂತೆ. ಭಾರತ ಚುನಾವಣಾ ಆಯೋಗದ ನಿರ್ದೇಶನದ ಮೇರೆಗೆ ಮುಂಬರುವ ದಿನಗಳಲ್ಲಿಮತದಾರರ ಪಟ್ಟಿ ಪರಿಷ್ಕರಣೆ 2026 ಕಾರ್ಯ ಪ್ರಾರಂಭವಾಗಲಿದೆ ಎಂದು ಪಾಲಿಕೆ ಆಯುಕ್ತ ಡಾ. ರುದ್ರೇಶ ಘಾಳಿ ತಿಳಿಸಿದ್ದಾರೆ.
ಈ ಕುರಿತು ಪ್ರಕಟಣೆ ನೀಡಿರುವ ಅವರು, ಈ ಕಾರ್ಯದ ಪೂರ್ವ ತಯಾರಿಯಲ್ಲಿ2025ರಲ್ಲಿ40 ವರ್ಷಕ್ಕಿಂತ ಮೇಲ್ಪಟ್ಟ ಮತದಾರರನ್ನು 2002ರಲ್ಲಿನ ಮತದಾರರ ಪಟ್ಟಿಯಲ್ಲಿರುವ ಹೆಸರಿನೊಂದಿಗೆ ತಾಳೆ ಮಾಡಿ ಮತದಾರರನ್ನು ಗುರುತಿಸಿ ಮ್ಯಾಪಿಂಗ್ ಮಾಡಿಕೊಂಡು ಜತೆಗೆ ಮ್ಯಾಪಿಂಗ್ ಮಾಡಲಾದ ಮತದಾರರ ಕುಟುಂಬ ಸಂತತಿಯವರೊಂದಿಗೆ ಜೋಡಣೆ ಕಾರ್ಯ ಕೈಗೊಂಡು ಪೂರ್ಣಗೊಳಿಸಲು ಚುನಾವಣಾ ಆಯೋಗ ನಿರ್ದೇಶನ ನೀಡಿದೆ.
ಮತಗಟ್ಟೆ ಮಟ್ಟದ ಅಧಿಕಾರಿ(ಬಿಎಲ್ ಒ)ಗಳು ಪ್ರತಿ ಮನೆ- ಮನೆ ಸಮೀಕ್ಷೆ ಕೈಗೊಂಡು ಮ್ಯಾಪಿಂಗ್ ಕಾರ್ಯ ಕೈಗೊಂಡಿದ್ದರೂ ಸಹ ಈ ಕಾರ್ಯದಲ್ಲಿನಿರೀಕ್ಷಿತ ಪ್ರಮಾಣದಲ್ಲಿಪ್ರಗತಿಯಾಗದಿರುವುದರಿಂದ ಪಾಲಿಕೆಯ ವ್ಯಾಪ್ತಿಯಲ್ಲಿನ ಮತದಾರರು ಸಹಕಾರ ನೀಡಬೇಕು ಎಂದು ವಿನಂತಿಸಿದ್ದಾರೆ.
ಮತದಾರರು ತಮ್ಮ ಹಾಗೂ ತಮ್ಮ ಕುಟುಂಬ ಸದಸ್ಯರ ಪ್ರಸ್ತುತ ಮತದಾರರ ಪಟ್ಟಿಯನ್ನು 2002ರ ಮತದಾರರ ಪಟ್ಟಿಯೊಂದಿಗೆ ಮ್ಯಾಪಿಂಗ್ ಆಗಿರುವುದನ್ನು ನಿಮ್ಮ ಮತಗಟ್ಟೆ ಮಟ್ಟದ ಅಧಿಕಾರಿಗಳನ್ನು ಸಂಪರ್ಕಿಸಿ ಪರಿಶೀಲಿಸಿಕೊಳ್ಳಬೇಕು. ಮ್ಯಾಪಿಂಗ್ ಆಗದಿದ್ದಲ್ಲಿ 2002 ಮತದಾರರ ಪಟ್ಟಿಯಲ್ಲಿನ ನಿಮ್ಮ ಮಾಹಿತಿಯನ್ನು ಇಂದೇ ನಿಮ್ಮ ಮತಗಟ್ಟೆ ಮಟ್ಟದ ಅಧಿಕಾರಿ (ಬಿಎಲ್ ಒ) ಅವರಿಗೆ ನೀಡಿ ಮಾಪಿಂಗ್ ಮಾಡಿಸಿಕೊಳ್ಳಬೇಕು ಎಂದು ತಿಳಿಸಿದ್ದಾರೆ.
ಕುಟುಂಬ ಸದಸ್ಯರಲ್ಲಿಮೃತರಾದವರನ್ನು ಮತದಾರರ ಪಟ್ಟಿಯಿಂದ ತೆಗೆದು ಹಾಕಲು ಮರಣ ಪ್ರಮಾಣಪತ್ರವನ್ನು ಬಿಎಲ್ ಒ ಅವರಿಗೆ ಸಲ್ಲಿಸಿ ನಮೂನೆ-7ರ ಅರ್ಜಿಯನ್ನು ನಮೂದಿಸಿಕೊಳ್ಳಬೇಕು.
ಮಾಹಿತಿಗೆ ತಮ್ಮ ಮತಗಟ್ಟೆ ಮಟ್ಟದ ಅಧಿಕಾರಿಗಳನ್ನು ಅಥವಾ ವಿಧಾನಸಭಾ ಮತಕ್ಷೇತ್ರದ ಚುನಾವಣೆ ಕಾರ್ಯಾಲಯಕ್ಕೆ ಭೇಟಿ ನೀಡಿ, ಮಾಹಿತಿ ಪಡೆದುಕೊಳ್ಳಬೇಕು. ಎಲ್ಲಮತದಾರರು ಇದರ ಸದುಪಯೋಗ ಪಡೆದುಕೊಳ್ಳುವಂತೆ ಪ್ರಕಟಣೆಯಲ್ಲಿತಿಳಿಸಿದ್ದಾರೆ.
ಫೋಟೊ: 9ಮಹೇಶ11
ಡಾ. ರುದ್ರೇಶ ಘಾಳಿ

