ವಿಕ ಸುದ್ದಿಲೋಕ, ಉಪ್ಪಿನಂಗಡಿ
ಸಮಾಜದಲ್ಲಿಸಹಬಾಳ್ವೆ, ಬಾಂಧವ್ಯ ಮತ್ತಷ್ಟು ಬೆಸೆಯಲಿ, ಇಫ್ತಾರ್ ಕೂಟದಂತಹ ಒಳ್ಳೆಯ ಕಾರ್ಯಕ್ರಮ ಪ್ರೇರಣೆ ಆಗಲಿ ಎಂದು ಉಪ್ಪಿನಂಗಡಿಯ ಹಿರಿಯ ವೈದ್ಯ ಡಾ. ಎಂ.ಆರ್ . ಶೆಣೈ ಹೇಳಿದರು.
ಅವರು ಭಾನುವಾರ ದ.ಕ. ಜಿಲ್ಲಾರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಉಪ್ಪಿನಂಗಡಿ ಸ್ಪೋರ್ಟಿಂಗ್ ಕ್ಲಬ್ ಮತ್ತು ಉಬಾರ್ ಡೋನರ್ಸ್ ವತಿಯಿಂದ ನಡೆದ ಇಫ್ತಾರ್ ಕೂಟ ಸಮಾರಂಭವನ್ನು ಉದ್ಘಾಟಿಸಿ
ಮಾತನಾಡಿದರು. ಮುಖ್ಯ ಅತಿಥಿ ಡಾ. ನಿರಂಜನ ರೈ ಮಾತನಾಡಿ, ಸಮಾಜದಲ್ಲಿರುವ ಸೌಹಾರ್ದತೆಯ ಒಗ್ಗಟ್ಟು ತೋರಿಸಲು ಇಫ್ತಾರ್ ಕೂಟ ಪ್ರೇರಣೆಯಾಗಲಿ, ಹೊಸ ತಲೆಮಾರಿನ ಯುವಕರಿಗೆ ಈ ಕಾರ್ಯಕ್ರಮ ಮಾದರಿ ಆಗಲಿ ಎಂದರು. ಸಮದ್ ಅನ್ಸಾರಿ ದುವಾಃ ನೆರವೇರಿಸಿದರು.
ನಿವೃತ್ತ ಶಿಕ್ಷಕ ವಿನ್ಸೆಂಟ್ ಫರ್ನಾಂಡಿಸ್ , ಡಾ. ರಾಜಾರಾಂ ಮಾತನಾಡಿದರು. ನೆಕ್ಕಿಲಾಡಿ ಮಸೀದಿ ಅಧ್ಯಕ್ಷ ಮಹಮ್ಮದ್ ಹಾಜಿ ನೆಕ್ಕಿಲಾಡಿ, ಉಪ್ಪಿನಂಗಡಿ ಕೇಂದ್ರ ಜುಮಾ ಮಸೀದಿ ಕಾರ ್ಯದರ್ಶಿ ಶುಕೂರ್ ಹಾಜಿ ಶುಕ್ರಿಯಾ, ವರ್ತಕ ಸಂಘದ ಅಧ್ಯಕ್ಷ ಪ್ರಶಾಂತ್ ಡಿಕೋಸ್ತ, ಕಾರ ್ಯದರ್ಶಿ ಅಬ್ದುಲ್ ರಹಿಮಾನ್ ಯುನಿಕ್ , ರೋಟರಿ ಸಂಸ್ಥೆಯ ಅಜೀಝ್ ಬಸ್ತಿಕ್ಕಾರ್ , ಅಬೂಬಕ್ಕರ್ ಪುತ್ತು, ಉಬಾರ್ ಡೋನರ್ಸ್ ಅಧ್ಯಕ್ಷ ಶಬೀರ್ ಕೆಂಪಿ, ಗೌರವಾಧ್ಯಕ್ಷ ರಫೀಕ್ ಮಾಸ್ಟರ್ , ಸಲಹೆ ಯು.ಟಿ. ತೌಸೀಫ್ , ನಾನಾ ಸಂಘಟನೆಗಳ ಪದಾಧಿಕಾರಿಗಳಾದ ವೆಂಕಟೇಶ್ ಕುಟ್ಟಿ, ಕೇಶವ ಲಕ್ಷ್ಮೀ ನಗರ, ಇಸ್ಮಾಯಿಲ್ ತಂಙಳ್ , ಶಫೀಕ್ ಅರಫಾ, ನಝೀರ್ ಮಠ, ಝಕರಿಯಾ ಕೊಡಿಪ್ಪಾಡಿ, ಶುಕೂರ್ ಮೇದರಬೆಟ್ಟು, ಅಯ್ಯೂಬ್ ದೇಂತಾರ್ , ಹಮೀದ್ ಕರಾವಳಿ, ಅಬ್ದುಲ್ ರಹಿಮಾನ್ ರಹಿಮಾನ್ ಮಠ, ಮಹಮ್ಮದ್ ಕೆಂಪಿ, ಶುಕೂರ್ ಮೇದರಬೆಟ್ಟು, ಯೂಸುಫ್ ಪೆದಮಾಲೆ, ಸಿದ್ದಿಕ್ ಮೇದರಬೆಟ್ಟು, ಮೋನು ಪಿಲಿಗೂಡು, ಬಶೀರ್ ಪೆರಿಯಡ್ಕ, ಆಚಿ ಕೆಂಪಿ, ಯು.ಟಿ. ಫೌಝರ್ , ಅನಸ್ ದಿಲ್ದಾರ್ , ಲತೀಫ್ ನಿನ್ನಿಕಲ್ ಮತ್ತಿತರರು ಉಪಸ್ಥಿತರಿದ್ದರು. ಯು.ಟಿ. ಇರ್ಷಾದ್ ಸ್ವಾಗತಿಸಿ, ವಂದಿಸಿದರು.
ಫೊಟೋ-10ಯುಪಿಪಿಐ-ಇಫ್ತಾರ್ ಕೂಟ.

