ತಿ. ನರಸೀಪುರದ ಫಿಲೇಚರ್ ಭೂಮಿ ಕ್ರೀಡಾಂಗಣಕ್ಕೆ ನೀಡುವ ಪ್ರಸ್ತಾವ ಕೈಬಿಟ್ಟ ಸರಕಾರ

Contributed byrajeeva.cj@timesofindia.com|Vijaya Karnataka

ಸರ್ಕಾರವು ತಿ. ನರಸೀಪುರದ ಫಿಲೇಚರ್‌ಭೂಮಿ ಕ್ರೀಡಾಂಗಣಕ್ಕೆ ನೀಡುವ ಪ್ರಸ್ತಾವವನ್ನು ಕೈಬಿಟ್ಟಿದೆ. ಕೆಎಸ್‌ಐಸಿ ನಿಗಮದ ಭೂಮಿಯನ್ನು ಅನ್ಯ ಉದ್ದೇಶಕ್ಕೆ ಬಳಸುವ ವಿರೋಧಕ್ಕೆ ಮಣಿದು ಈ ನಿರ್ಧಾರ ಕೈಗೊಳ್ಳಲಾಗಿದೆ. ಕೆಎಸ್‌ಐಸಿ ಸೀರೆಗಳಿಗೆ ಹೆಚ್ಚಿನ ಬೇಡಿಕೆಯಿದ್ದರೂ, ಕಾರ್ಖಾನೆಗಳನ್ನು ಮುಚ್ಚುವ ಪ್ರಯತ್ನದ ಬಗ್ಗೆ ಚರ್ಚೆ ನಡೆಯಿತು. ಕಾರ್ಖಾನೆಗಳ ವಿಸ್ತರಣೆ ಮತ್ತು ಉತ್ಪಾದನೆ ಹೆಚ್ಚಳಕ್ಕೆ ಕ್ರಮ ಕೈಗೊಳ್ಳಲಾಗುತ್ತಿದೆ.

government withdraws proposal for t narsipuras playground controversies arise in philatcher bhoomi stadium

 ಮೊದಲ ಪುಟದಿಂದ ಮುಖ್ಯಮಂತ್ರಿಯವರ ತವರು ಜಿಲ್ಲೆಯಲ್ಲೇ ನಿಗಮದ ಭೂಮಿಯನ್ನು ಅನ್ಯ ಉದ್ದೇಶಕ್ಕೆ ಬಳಕೆಗೆ ಸೃಷ್ಟಿಯಾದ ವಿರೋಧಕ್ಕೆ ಕೊನೆಗೂ ಮಣಿದಿರುವ ಸರಕಾರ ನಿಗಮದ ಜಾಗ ಬಳಕೆಯನ್ನು ಕೈಬಿಡುವುದಾಗಿ ಹೇಳುವ ಮೂಲಕ ವಿವಾದಕ್ಕೆ ಅಂತ್ಯ ಹಾಡುವ ಪ್ರಯತ್ನ ಮಾಡಿದರು. ಪ್ರಶ್ನೋತ್ತರ ವೇಳೆ ಬಿಜೆಪಿಯ ಟಿ.ಎಸ್ .ಶ್ರೀವತ್ಸ, ‘‘ಕೆಎಸ್ ಐಸಿ ತಯಾರಿಸುವ ಗುಣಮಟ್ಟದ ರೇಷ್ಮೆ ಸೀರೆ ಗೆ ಬಹಳ ಬೇಡಿಕೆ ಇದೆ. ಸೀರೆಗಾಗಿ ಮಹಿಳೆಯರು ನಸುಕಿನ 3 ಗಂಟೆಯಿಂದ 6.30ರವರೆಗೆ ಸಾಲಿನಲ್ಲಿನಿಂತು ಟೋಕನ್ ಪಡೆಯುತ್ತಾರೆ. ನಿತ್ಯ 250 ಸೀರೆಗಳನ್ನಷ್ಟೇ ತಯಾರಿಸ ಲಾಗುತ್ತಿದ್ದು, ಉತ್ಪಾದನೆ ಹೆಚ್ಚಿಸಬೇಕು,’’ ಎಂದು ಮನವಿ ಮಾಡಿದರು. ಅದಕ್ಕೆ ಉತ್ತರಿಸಿದ ಸಚಿವ ಕೆ.ವೆಂಕಟೇಶ್ , ‘‘ಕೆಎಸ್ ಐಸಿ ನಿಗಮದ ಕಾರ್ಖಾನೆಗಳಲ್ಲಿನಿತ್ಯ 350ರಿಂದ 400 ಸೀರೆಗಳನ್ನು ತಯಾರಿಸಲಾಗುತ್ತಿದೆ. ಗುಣಮಟ್ಟಕ್ಕೆ ಒತ್ತು ನೀಡಲಾಗಿದೆ. ಯರ್ರಾಬಿರ್ರಿ ತಯಾರಿಸಿ ಸಣ್ಣಪುಟ್ಟ ದೋಷವಿದ್ದರೂ ಗ್ರಾಹಕರು ಖರೀದಿಸದೆ ಬಿಸಾಡಿ ಹೋಗುತ್ತಾರೆ. ಎಲ್ಲೆಂದ ರಲ್ಲಿಯಾವ್ಯಾವುದೇ ರೇಷ್ಮೆ ನೂಲು ತಂದು ತರಾತುರಿಯಲ್ಲಿನೇಯ್ಗೆ ಸಾಧ್ಯವಿಲ್ಲ. ಗುಣಮಟ್ಟದ ಸೀರೆ ಉತ್ಪಾದನೆ ಹೆಚ್ಚಳಕ್ಕೆ ಒತ್ತು ನೀಡಲಾಗಿದೆ,’’ ಎಂದು ಹೇಳಿದರು. ‘‘ಕೆಎಸ್ ಐಸಿ ಸೀರೆಗಳಿಗೆ ಬಹಳ ಬೇಡಿಕೆಯಿದೆ. ಆದರೆ ಸಣ್ಣಪುಟ್ಟ ದೋಷವಿರುವ ಸೀರೆಗಳನ್ನು ಶೇ.25-30ರಷ್ಟು ರಿಯಾಯಿತಿ ದರದಲ್ಲಿಮಾರಾಟ ಮಾಡಲಾಗುತ್ತದೆ. ಇದಕ್ಕೆ ಭಾರಿ ಬೇಡಿಕೆಯಿದ್ದು ಡಿಸ್ಕೌಂಟ್ ಇರುವ ದಿನಗಳಲ್ಲಷ್ಟೇ ಗ್ರಾಹಕರು ಮುಂಜಾನೆಯಿಂದಲೇ ಸಾಲುಗಟ್ಟಿ ನಿಲ್ಲುವುದು ಕಂಡುಬಂದಿದೆ,’’ ಎಂದು ತಿಳಿಸಿದರು. ಸರಕಾರದಿಂದ ಮನೆ ಹಾಳು ಕೆಲಸ: ಈ ನಡುವೆ, ಪ್ರತಿಪಕ್ಷ ನಾಯಕ ಆರ್ .ಅಶೋಕ್ , ‘‘ಕೆಎಸ್ ಐಸಿ ಸೀರೆಗಳಿಗೆ ಬಹಳ ಬೇಡಿಕೆಯಿಂದ ಬಡಾಯಿ ಕೊಚ್ಚಿಕೊಳ್ಳುವ ಸರಕಾರ ನಿಗಮದ ಕೆಲಸಗಾರರಿಗೆ 3000 ರೂ. ನೀಡುತ್ತಿದ್ದು, ನೇಮಕಾತಿ ಮಾಡಿಕೊಂಡವರಿಗೆ 15,000 ರೂ. ವೇತನ ನೀಡುತ್ತಿದೆ. ಕಾಂಗ್ರೆಸ್ ಸರಕಾರ ಮನೆಹಾಳು ಕೆಲಸ ಮಾಡಿದೆ. ಕೆಎಸ್ ಐಸಿ ಈ ಬಾರಿ 96 ಕೋಟಿ ರೂ. ಲಾಭ ಗಳಿಸಿದ್ದರೂ ಮುಚ್ಚಲು ಮುಂದಾಗಿದೆ. ಮೈಸೂರು ಮಹಾರಾಜರು ನೀಡಿದ್ದ 12 ಎಕರೆ ಜಾಗದಲ್ಲಿ5 ಎಕರೆಯನ್ನು ಕ್ರೀಡಾಂಗಣ ನಿರ್ಮಾಣಕ್ಕೆ ಮುಂದಾಗಿದೆ. ಇದರ ಅಗತ್ಯವೇನು,’’ ಎಂದು ಪ್ರಶ್ನಿಸಿದರು. ‘‘ನಿಗಮದ ರೇಷ್ಮೆ ಸೀರೆ ಖರೀದಿಗೆ ಜನ ನಸುಕಿನ ಮೂರು ಗಂಟೆಗೆ ಸಾಲುಗಟ್ಟಿ ನಿಲ್ಲುತ್ತಾರೆ. ಒಂದೇ ಗಂಟೆಯಲ್ಲಿಸೀರೆಗಳೆಲ್ಲಾಮಾರಾಟವಾಗುತ್ತವೆ. ಸರಕಾರದ ಶೇ.90ರಷ್ಟು ಸಂಸ್ಥೆ, ನಿಗಮಗಳು ಲಾಭದಲ್ಲಿನಡೆಯುವುದಿಲ್ಲ. ಹಾಗಿರುವಾಗ ಲಾಭದಲ್ಲಿರುವ ಕೆಎಸ್ ಐಸಿ ನಿಗಮವನ್ನು ಸರಕಾರ ಮುಚ್ಚಲು ಮುಂದಾಗಿದೆ ಎಂದರೆ ಅದರ ಹಿಂದೆ ಲಾಬಿ ಇದೆ ಎಂಬುದು ಸ್ಪಷ್ಟ. ಚೀನಾದಿಂದ ರೇಷ್ಮೆ ಖರೀದಿಸಲು, ಖಾಸಗಿಯವರಿಗೆ ಲಾಭ ಮಾಡಿಕೊಡಲು ಸರಕಾರ ಇಂತಹ ಕೃತ್ಯಕ್ಕೆ ಮುಂದಾಗಿದೆಯೇ? ಯಾವುದೇ ಕಾರಣಕ್ಕೂ ನಿಗಮದ ಕಾರ್ಖಾನೆಗಳನ್ನು ಮುಚ್ಚಬಾರದು,’’ ಎಂದು ಸರಕಾರವನ್ನು ಒತ್ತಾಯಿಸಿದರು. ಕಾರ್ಖಾನೆ ಮುಚ್ಚದೆ ಉದ್ಧಾರ ಮಾಡಿ: ಈ ನಡುವೆ ಸಚಿವ ಬೈರತಿ ಸುರೇಶ್ , ‘‘ಕೆಎಸ್ ಐಸಿ ಸೀರೆ ಬಹಳ ಬೇಡಿಕೆಯಿದ್ದು, ಸೀರೆಗಾಗಿ ತಿಂಗಳು ಕಾಯಬೇಕಾದ ಸ್ಥಿತಿ ಇದೆ. ಕೆಎಸ್ ಐಸಿ ಕಾರ್ಖಾನೆಗಳನ್ನು ಮುಚ್ಚಬಾರದು. ಬದಲಿಗೆ ಕಾರ್ಖಾನೆಗಳನ್ನು ಉದ್ಗಾರ ಮಾಡುವಂತಾಗಬೇಕು,’’ ಎಂದಿದ್ದು ಗಮನ ಸೆಳೆಯಿತು. ಬಳಿಕ ಮಾತನಾಡಿದ ಕೆ.ವೆಂಕಟೇಶ್ , ‘‘ನಿಗಮದ ಕಾರ್ಖಾನೆ ವಿಸ್ತರಣೆ ಯೋಜನೆಯೂ ಇದೆ. ಸೀರೆ ಮಾರಾಟ ಸರಳಗೊಳಿಸಲು ಹಾಗೂ ಗ್ರಾಹಕರಿಗೆ ಸೀರೆಗಳನ್ನು ಒದಗಿಸಲು ರೇಷ್ಮೆ ನೇಯ್ಗೆ ಕಾರ್ಖಾನೆಯ ಸಂಯೋಜಿತ ರೇಷ್ಮೆ ನೇಯ್ಗೆ, ಘಟಕ- 2ರಲ್ಲಿ10 ಇ- ಜಕಾರ್ಡ್ ಮಗ್ಗಗಳನ್ನು ಮತ್ತು ಚನ್ನಪಟ್ಟಣ ಘಟಕದಲ್ಲಿ20 ಇ- ಜಕಾರ್ಡ್ ಯಂತ್ರ ಸ್ಥಾಪಿಸಲಾಗಿದೆ,’’ ಎಂದು ಹೇಳಿ ಚರ್ಚೆಗೆ ತೆರೆ ಎಳೆದರು.