ಅಳ್ನಾವರ

Contributed bymaheshbadiger05@gmail.com|Vijaya Karnataka

ಅಳ್ನಾವರದ ಸೇಂಟ್ ತೆರೇಜಾ ಬಿ.ಎಡ್. ಕಾಲೇಜಿನಲ್ಲಿ ಹದಿಹರೆಯದ ಸಮಸ್ಯೆಗಳ ಕುರಿತು ಕಾರ್ಯಕ್ರಮ ನಡೆಯಿತು. ಮನೋವೈದ್ಯೆ ಡಾ. ಸುಜ್ಞಾನಿದೇವಿ ಪಾಟೀಲ ಅವರು ಹದಿಹರೆಯದ ವಿದ್ಯಾರ್ಥಿಗಳ ಸಮಸ್ಯೆಗಳ ಬಗ್ಗೆ ವಿವರಿಸಿದರು. ಪೋಷಕರು ಮಕ್ಕಳಿಗೆ ಮಾರ್ಗದರ್ಶನ ನೀಡಬೇಕು ಎಂದು ಅವರು ಹೇಳಿದರು. ತಂತ್ರಜ್ಞಾನದ ದುರ್ಬಳಕೆಯ ಬಗ್ಗೆಯೂ ತಿಳುವಳಿಕೆ ನೀಡಲಾಯಿತು. ಈ ಕಾರ್ಯಕ್ರಮದಲ್ಲಿ ಹಲವು ಗಣ್ಯರು ಭಾಗವಹಿಸಿದ್ದರು.

guidance for parents to assist children in adolescence

8ಮಹೇಶ2

ಪೋಷಕರು ಮಕ್ಕಳಿಗೆ ಮಾರ್ಗದರ್ಶನ ನೀಡಲಿ

ವಿಕ ಸುದ್ದಿಲೋಕ ಧಾರವಾಡ

ಹದಿಹರೆಯವು ವಿದ್ಯಾರ್ಥಿ ಜೀವನದ ಸೂಕ್ಷ್ಮಘಟ್ಟ ಮತ್ತು ಅತ್ಯಂತ ಸವಾಲಿನ ಸಮಯವೂ ಹೌದು ಎಂದು ಖ್ಯಾತ ಮನೋ ಆರೋಗ್ಯ ವೈದ್ಯೆ ಡಾ. ಸುಜ್ಞಾನಿದೇವಿ ಪಾಟೀಲ ಹೇಳಿದರು.

ಅಳ್ನಾವರದ ಸೇಂಟ ತೆರೇಜಾ ಬಿ.ಎಡ್ .ಕಾಲೇಜಿನಲ್ಲಿಧಾರವಾಡ ಕರ್ನಾಟಕ ವಿದ್ಯಾವರ್ಧಕ ಸಂಘದ ಶಿಕ್ಷಣ ಮಂಟಪವು ಆಯೋಜಿಸಿದ್ದ ಹದಿಹರೆಯದ ಸಮಸ್ಯೆ ಸವಾಲು ಹಾಗೂ ಪರಿಹಾರ ವಿಷಯ ಕುರಿತು ಮಾತನಾಡಿದರು.

ಹದಿಹರೆಯದಲ್ಲಿವಿದ್ಯಾರ್ಥಿಗಳು ಭಾವನಾತ್ಮಕವಾಗಿ, ಶಾರೀರಿಕವಾಗಿ ಹಾಗೂ ಹಾರ್ಮೋನಗಳು ಬದಲಾವಣೆಯಾಗುವುದರಿಂದ ಒಂದು ರೀತಿಯ ಖಿನ್ನತೆ, ಆತಂಕ, ಕೀಳರಿಮೆಗೆ ಒಳಗಾಗುತ್ತಾರೆ. ಇಂತಹ ಸಂಧಿಗ್ಧ ಸ್ಥಿತಿಯಲ್ಲಿವಿದ್ಯಾರ್ಥಿಗಳು ದುಶ್ಚಟಕ್ಕೆ ಒಳಗಾಗಿ ದಾರಿ ತಪ್ಪುವ ಸಾಧ್ಯತೆಗಳಿರುತ್ತವೆ ಮತ್ತು ಬದುಕಿನ ಅನಿಶ್ಚಿತತೆ ಅವರನ್ನೂ ಕಾಡುತ್ತದೆ. ಇಂದಿನ ಶಿಕ್ಷಣ ಕ್ರಮವ ಕೇವಲ ಜ್ಞಾನಕ್ಕೆ ಸೀಮಿತವಾಗಿದ್ದು, ವಿದ್ಯಾರ್ಥಿಗಳಲ್ಲಿಭಾವನಾತ್ಮಕ ಬುದ್ಧಿವಂತಿಕೆ, ಒತ್ತಡ ನಿರ್ವಹಣೆ, ಸಂವಹಣಾ ಕೌಶಲ್ಯ, ಸಾಮರ್ಥ್ಯ ಬೆಳೆಸದಂತಾಗಿದೆ. ಪೋಷಕರು ಒತ್ತಡ ಹೇರದೆ ಅಗತ್ಯ ಮಾರ್ಗದರ್ಶನ ಸಲಹೆ ನೀಡಬೇಕು. ತಂತ್ರಜ್ಞಾನದ ದುರ್ಬಳಕೆಯ ಬಗ್ಗೆಯೂ ತಿಳಿಸಿ ಒಳ್ಳೆಯ ಹವ್ಯಾಸ ಬೆಳೆಸಿಕೊಳ್ಳುವ ಅವಕಾಶ ಕಲ್ಪಿಸಬೇಕೆಂದರು.

ಪ್ರಾಚಾರ್ಯ ಫಾ. ಅಲ್ವಿನ್ ಸುಧೀರ ಮಾತನಾಡಿ, ಹದಿಹರೆಯದಲ್ಲಿವಿದ್ಯಾರ್ಥಿಗಳಲ್ಲಿಸಹಜವಾಗಿ ಮನಸ್ಸು ಚಂಚಲ ಸ್ವಭಾವ ಹೊಂದಿರುತ್ತದೆ ಎಂದರು.ಫಾ. ಜೋಸೆಫ್ ಲೋಪೆಸ್ ,ಪ್ರೌಢ ಶಾಲೆ ಮುಖ್ಯಾಧ್ಯಾಪಕ ಕೆ.ಸಿ. ಪಟ್ಟಣಶೆಟ್ಟಿ ,ಕವಿವ ಸಂಘದ ಕಾರ್ಯಕಾರಿ ಸಮಿತಿ ಸದಸ್ಯ ಶಿವಾನಂದ ಭಾವಿಕಟ್ಟಿ , ಪ್ರೊ. ಪಿ. ಆರ್ . ನಾಗರಾಳ ಮಾತನಾಡಿದರು.

ಅಳ್ನಾವರ ತಾಲೂಕು ಕಸಾಪ ಅಧ್ಯಕ್ಷ ಗುರುರಾಜ ಸಬನೀಸ್ , ವಿನಾಯಕ ಪಾಟೀಲ, ಎಂ.ಬಿ. ಕಣವಿ, ಶಂಕರ ಕುಂಬಿ, ಶಿಲ್ಪಾ ಕುರಹಟ್ಟಿ, ಆರ್ .ಎಂ. ಕ್ಯಾಮನಗೌಡ್ರ, ಶಿವಾನಂದ ಹಡಪದ, ವೀರಣ್ಣ ಒಡ್ಡೀನ, ಸೌಮ್ಯಶ್ರೀ, ಪೂನಂ ಪಾಟೀಲ ಇತರರು ಇದ್ದರು.

ಫೋಟೊ: 8ಮಹೇಶ 2::::::

ಅಳ್ನಾವರದ ಸೇಂಟ ತೆರೇಜಾ ಬಿ.ಎಡ್ . ಕಾಲೇಜಿನಲ್ಲಿಧಾರವಾಡ ಕರ್ನಾಟಕ ವಿದ್ಯಾವರ್ಧಕ ಸಂಘದ ಶಿಕ್ಷಣ ಮಂಟಪವು ಆಯೋಜಿಸಿದ್ದ ಕಾರ್ಯಕ್ರಮವನ್ನು ಫಾ. ಜೋಸೆಫ್ ಲೋಪೆಸ್ ಉದ್ಘಾಟಿಸಿದರು.