ವಹಿವಾಟಿಗೆ ಪೆಟ್ಟು; ರಸ್ತೆ ದುರಸ್ತಿಗೆ ಪಟ್ಟು (ಹೆಡ್ )
ಮಲ್ಲೂರು ರಸ್ತೆ ಅವ್ಯವಸ್ಥೆ: ವ್ಯಾಪಾರಸ್ಥರು, ವಾಹನ ಸವಾರರ ಸಂಕಷ್ಟ
ಬ್ಯಾಡಗಿ ಆರ್ಥಿಕತೆಗೆ ರಸ್ತೆ ಅಭಿವೃದ್ಧಿ ಅಗತ್ಯ
ಗಣೇಶ ಅರ್ಕಾಚಾರಿ
ವಿಕ ಸುದ್ದಿಲೋಕ ಬ್ಯಾಡಗಿ
ಅಂತಾರಾಷ್ಟ್ರೀಯ ಖ್ಯಾತಿಯ ಬ್ಯಾಡಗಿ ಮೆಣಸಿನಕಾಯಿ ಮಾರುಕಟ್ಟೆಗೆ ಹೊಂದಿಕೊಂಡಿರುವ ಮಲ್ಲೂರು ರಸ್ತೆ ಅಭಿವೃದ್ಧಿ ಕಾಣದೆ ವ್ಯಾಪಾರ ವಹಿವಾಟು ಮೇಲೆ ಪರಿಣಾಮ ಬೀರುತ್ತಿದೆ.
ಸ್ಥಳೀಯ ಮಾರುಕಟ್ಟೆಯಿಂದ ಪುರಸಭೆಗೆ ಲಕ್ಷಾಂತರ ರೂ.ಆದಾಯ ಬರುತ್ತಿದ್ದರೂ ಈ ರಸ್ತೆ ಅಭಿವೃದ್ಧಿ ಪಡಿಸಲು ಮುಂದಾಗಿಲ್ಲಎಂಬ ಕೂಗು ವ್ಯಾಪಾರಸ್ಥರು ಹಾಗೂ ವಾಹನ ಸವಾರರಿಂದ ಕೇಳಿಬರುತ್ತಿದೆ.
ಬ್ಯಾಡಗಿ ಮಾರುಕಟ್ಟೆ ವಿಸ್ತಾರವಾಗುತ್ತಿರುವ ಕಾರಣ ಮಾರುಕಟ್ಟೆಯಲ್ಲಿಜಾಗದ ಕೊರತೆ ಹೆಚ್ಚುತ್ತಾ ಸಾಗಿದೆ. ಇದರಿಂದಾಗಿ ಮಾರುಕಟ್ಟೆಗೆ ಹೊಂದಿಕೊಂಡಿರುವ ಮಲ್ಲೂರ ರಸ್ತೆಯಲ್ಲಿಭೂಮಿಗೆ ಬೆಲೆ ಬಂದಿದೆ. ಇಲ್ಲಿಕೋಟ್ಯಂತರ ಹಣ ಕೊಟ್ಟು ಜಾಗ ಖರೀದಿ ಮಾಡಿ ಕೋಲ್ಡ್ ಸ್ಟೋರೇಜ್ ಗಳು, ಖಾರದ ಪುಡಿ ಘಟಕ ನಿರ್ಮಾಣ ಮಾಡಿಕೊಂಡು ಪುರಸಭೆಗೆ ಪ್ರತಿ ವರ್ಷ ಟ್ಯಾಕ್ಸ್ ಕಟ್ಟುತ್ತಿದ್ದರೂ ಉತ್ತಮ ರಸ್ತೆ ಇಲ್ಲದೇ ಮಾಲೀಕರು ಪರದಾಡುವಂತಾಗಿದೆ.
ವಾಹನ ದಟ್ಟಣೆ ಹೆಚ್ಚಳ:
ತರೆದತಳ್ಳಿ-ಮಲ್ಲೂರು ರಸ್ತೆಯಲ್ಲೇ ಸಾಕಷ್ಟು ಮೆಣಸಿನಕಾಯಿ ಪುಡಿ ತಯಾರಿಕಾ ಘಟಕಗಳು, ವಿವಿಧ ಕೈೖಗಾ ರಿಕೆಗಳು ಹಾಗೂ ಗೋದಾಮು ಕಾರ್ಯನಿರ್ವಹಿಸುತ್ತಿವೆ. ಅಲ್ಲದೆ ಇದೇ ಭಾಗದಲ್ಲಿ15ಕ್ಕೂ ಹೆಚ್ಚು ಕೋಲ್ಡ್ ಸ್ಟೋರೇಜ್ ಗಳು ನಿರ್ಮಾಣವಾಗಿದ್ದು, ಬ್ಯಾಡಗಿ ಮೆಣಸಿನಕಾಯಿ ಸಂಗ್ರಹ ಹಾಗೂ ವಹಿವಾಟಿಗೆ ಪ್ರಮುಖ ಕೇಂದ್ರವಾಗಿದೆ. ಪ್ರತಿ ದಿನವೂ ನೂರಾರು ಲಾರಿಗಳು, ಟ್ರ್ಯಾಕ್ಟರ್ ಗಳು ಹಾಗೂ ಇತರ ವಾಹನಗಳು ಸಂಚರಿಸುತ್ತಿರುವುದರಿಂದ ವಾಹನ ದಟ್ಟಣೆ ಹೆಚ್ಚಾಗಿದೆ.
ಸಂಚಾರ ಅಯೋಮಯ:
ರಸ್ತೆ ಹದಗೆಟ್ಟಿರುವುದರಿಂದ ವಾಹನ ಸಂಚಾರಕ್ಕೆ ತೀವ್ರ ತೊಂದರೆ ಉಂಟಾಗುತ್ತಿದೆ. ಮಳೆಗಾಲದಲ್ಲಿಸಂಪೂರ್ಣ ಕೆಸರಿನಿಂದ ಕೂಡಿದರೆ, ಬೇಸಿಗೆಯಲ್ಲಿಧೂಳು ಎದ್ದು ವ್ಯಾಪಾರಸ್ಥರು ಹಾಗೂ ಸ್ಥಳೀಯ ನಿವಾಸಿಗಳಿಗೆ ತೊಂದರೆಯಾಗುತ್ತಿದೆ. ಅಲ್ಲದೇ ಎರಡು ವಾಹನ ಸಂಚಾರ ಅಸಾಧ್ಯ. ಸರಕು ಸಾಗಾಟಕ್ಕೂ ಅಡಚಣೆ ಉಂಟಾಗುತ್ತಿರುವುದು ಸಾಕಷ್ಟು ತೊಂದರೆಗೆ ಕಾರಣವಾಗಿದೆ
ದ್ವಿಮುಖ ರಸ್ತೆ ನಿರ್ಮಾಣ ಅಗತ್ಯ:
ಇತ್ತೀಚೆಗೆ ಸುಮಾರು 20 ಕೋಟಿ ರೂ.ನÜಲ್ಲಿಶಿಡೆನೂರು-ಬ್ಯಾಡಗಿ ರಸ್ತೆ ಅಭಿವೃದ್ಧಿಪಡಿಸಿ ಲೋಕಾರ್ಪಣೆ ಮಾಡಲಾಗಿದೆ. ಆದರೆ ಆ ರಸ್ತೆಯಿಂದ ಪುರಸಭೆಗೆ ಒಂದು ರೂ.ಸಹ ಆದಾಯ ಸೃಷ್ಟಿಯಾಗುವುದಿಲ್ಲ. ಇನ್ನೊಂದೆಡೆ ಮಲ್ಲೂರು ರಸ್ತೆಯ ವ್ಯಾಪಾರಸ್ಥರು ಪುರಸಭೆಗೆ ಪ್ರತಿ ವರ್ಷ ಲಕ್ಷಾಂತರ ರೂ.ತೆರಿಗೆ ಪಾವತಿಸುತ್ತಿದ್ದರೂ ರಸ್ತೆ ಅಭಿವೃದ್ಧಿಗೆ ಮುಂದಾಗದಿರುವುದು ಅಲ್ಲಿನ ಮಾಲೀಕರ ಅಸಮಾಧಾನಕ್ಕೆ ಕಾರಣವಾಗಿದೆ
ರಸ್ತೆ ನಿರ್ಮಾಣ ಅಗತ್ಯ:
ಮಲ್ಲೂರ ರಸ್ತೆಯಲ್ಲಿಮೆಣಸಿನಕಾಯಿ ವ್ಯಾಪಾರ, ಗೋದಾಮು ಹಾಗೂ ಕೈಗಾರಿಕೆ ಹೆಚ್ಚಿರು ವುದರಿಂದ ಆರ್ಥಿಕ ಚಟುವಟಿಕೆಗೆ ಈ ರಸ್ತೆ ಪ್ರಮುಖವಾಗಿದೆ. ಜನಪ್ರತಿನಿಧಿಗಳು ಇತ್ತ ಗಮನ ಹರಿಸಿ ಉತ್ತಮ ರಸ್ತೆ ಮಾಡಿದರೆ ಬ್ಯಾಡಗಿ ಆರ್ಥಿಕತೆಗೆ ಬಲ ತುಂಬಲಿದೆ.
ಕೋಟ್
ಹತ್ತಾರು ಕೋಲ್ಡ್ ಸ್ಟೋರೆಜ್ ಸೇರಿದಂತೆ ಖಾರದ ಪುಡಿ ತಯಾರಿಕಾ ಘಟಕಗಳ ಮಾಲೀಕರು ಪ್ರತಿ ವರ್ಷ ಪುರಸಭೆಗೆ ಲಕ್ಷಾಂತರ ತೆರಿಗೆ ಪಾವತಿ ಮಾಡುತ್ತೇವೆ. ಉತ್ತಮ ರಸ್ತೆ ನಮ್ಮ ಹಕ್ಕು. ನಾವು ತೆರಿಗೆ ಪಾವತಿಗೆ ಸೀಮಿತವಾಗಿದ್ದೇವೆಯೆ? ಕೂಡಲೇ ಮಲ್ಲೂರು ರಸ್ತೆಯನ್ನು ಸುಸಜ್ಜಿತವಾಗಿ ಅಭಿವೃದ್ಧಿಪಡಿಸಿ ಸಂಚಾರಕ್ಕೆ ಅನುಕೂಲ ಮಾಡಿಕೊಡಬೇಕು.
- ಬಸವರಾಜ ಛತ್ರದ, ಪುರಸಭೆ ಮಾಜಿ ಅಧ್ಯಕ್ಷ
ಕೋಟ್ .
ಮೆಣಸಿನಕಾಯಿ ಹೊತ್ತು ತರುವ ನೂರಾರು ದೊಡ್ಡ ಲಾರಿಗಳಿಗೆ ಕಿಷ್ಕಿಂದೆಯಂತಿರುವ ರಸ್ತೆ ಸಾಕಷ್ಟು ಅನಾನುಕೂಲ ಸೃಷ್ಟಿಸುತ್ತದೆ. ಇದೇ ರಸ್ತೆ ಮಾರ್ಗದಲ್ಲಿಹಲವು ಕೋಲ್ಡ್ ಸ್ಟೋರೆಜ್ ಗಳು ತಲೆ ಎತ್ತಲಿದ್ದು, ಆದ್ದರಿಂದ ಮಲ್ಲೂರ ರಸ್ತೆ ಅಭಿವೃದ್ಧಿ ಅತ್ಯಗತ್ಯ.
- ಬಸವರಾಜ ಸುಂಕಾಪುರ, ವರ್ತಕ
ಫೋಟೊ-10ಬಿವೈಡಿ3-
ಬ್ಯಾಡಗಿ ಪಟ್ಟಣದ ಮಲ್ಲೂರ ರಸ್ತೆ

