12ರಿಂದ ವರ್ಧಂತಿ ಉತ್ಸವ

Contributed bynagarajmadguni@gmail.com|Vijaya Karnataka

ಯಲ್ಲಾಪುರದಲ್ಲಿ ಶ್ರೀ ಲಕ್ಷ್ಮೀನಾರಾಯಣ ವೆಂಕಟ್ರಮಣ ಮಠದ 43ನೇ ವರ್ಧಂತಿ ಉತ್ಸವ ಮಾರ್ಚ್ 12 ರಿಂದ 16 ರವರೆಗೆ ನಡೆಯಲಿದೆ. ಗೋವಾ ಪರ್ತಗಾಳಿ ಜೀವೋತ್ತಮ ಮಠಾಧೀಶ ಶ್ರೀ ವಿದ್ಯಾಧಿತೀರ್ಥ ಶ್ರೀಪಾದರ ಸಾನಿಧ್ಯದಲ್ಲಿ ಕಾರ್ಯಕ್ರಮಗಳು ಜರುಗಲಿವೆ. ಉತ್ಸವದಲ್ಲಿ ಸ್ವಾಗತ ಮೆರವಣಿಗೆ, ಪಾದಪೂಜೆ, ದೇವತಾ ಪ್ರಾರ್ಥನೆ, ಹವನ, ಅಭಿಷೇಕ, ಭೀಕ್ಷಾ ಸೇವೆ, ಪಲ್ಲಕ್ಕಿ ಉತ್ಸವ, ಅಷ್ಟಾವಧಾನ ಸೇವೆ ಹಾಗೂ ತಪ್ತ ಮುದ್ರಾಧಾರಣೆ ನಡೆಯಲಿವೆ. ಸಮಾರೋಪ ಕಾರ್ಯಕ್ರಮ 16ರಂದು ಜರುಗಲಿದೆ.

goa partagal 43rd vardhanthi festival announced

ಯಲ್ಲಾಪುರ: ಪಟ್ಟಣದ ಶ್ರೀಲಕ್ಷಿತ್ರ್ಮೕನಾರಾಯಣ ವೆಂಕಟ್ರಮಣ ಮಠದ 43ನೇ ವರ್ಧಂತಿ ಉತ್ಸವ ಮಾ.12 ರಿಂದ 16 ರವರೆಗೆ ಗೋವಾ ಪರ್ತಗಾಳಿ ಜೀವೋತ್ತಮ ಮಠಾಧೀಶ ಶ್ರೀ ವಿದ್ಯಾಧಿತೀರ್ಥ ಶ್ರೀಪಾದ ವಡೇರ

ಸಾನ್ನಿಧ್ಯದಲ್ಲಿನಡೆಯಲಿದೆ.

12ರಂದು ಸಂಜೆ 7ಕ್ಕೆ ಶ್ರೀಗಳ ಸ್ವಾಗತ ಮೆರವಣಿಗೆ, ಪಾದಪೂಜೆ, ಶ್ರೀಗಳಿಂದ ಆಶೀರ್ವಚನ ನಡೆಯಲಿದೆ.

14ರಂದು ವರ್ಧಂತಿ ಉತ್ಸವದ ಅಂಗವಾಗಿ ದೇವತಾ ಪ್ರಾರ್ಥನೆ, ಗಣಪತಿ ಪೂಜೆ, ಲಘು ವಿಷ್ಣು ಹವನ, ಶತಕಲಶಾಭಿಶೇಕ, ಶ್ರೀಗಳ ಪಾದಪೂಜೆ, ಭೀಕ್ಷಾ ಸೇವೆ, ಸಂಜೆ ಪಲ್ಲಕ್ಕಿ ಉತ್ಸವ ಅಷ್ಟಾವಧಾನ ಸೇವೆ ನಡೆಯಲಿದೆ.

15ರಂದು ಏಕಾದಶಿ ಪ್ರಯುಕ್ತ ತಪ್ತ ಮುದ್ರಾಧಾರಣೆ, 16 ರಂದು ಸಮಾರೋಪ ಕಾರ್ಯಕ್ರಮ ನಡೆಯಲಿದೆ ಎಂದು ವೆಂಕಟ್ರಮಣ ಮಠದ ಅಧ್ಯಕ್ಷ ವಿನಾಯಕ ಪೈ ಪ್ರಕಟಣೆಯಲ್ಲಿತಿಳಿಸಿದ್ದಾರೆ.