ಸಮಾಜದ ಅಭಿವೃದ್ಧಿಗೆ ಮಹಿಳೆ ಮೂಲ ಶಕ್ತಿ (ಹೆಡ್ )

Contributed byraghukgjd1@gmail.com|Vijaya Karnataka

ಗಜೇಂದ್ರಗಡದ ಅಕ್ಕನ ಬಳಗವು ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಆಚರಿಸಿತು. ಮಹಿಳೆಯರು ಸಂಘಟಿತರಾಗಿ ತಮ್ಮ ಹಕ್ಕುಗಳನ್ನು ಪಡೆಯಬೇಕು ಎಂದು ಪ್ರೇಮಾ ಅಂಗಡಿ ಹೇಳಿದರು. ಮಹಿಳೆಯರ ಶೋಷಣೆಗೆ ಇತಿಹಾಸವೇ ಸಾಕ್ಷಿ ಎಂದರು. ಅಕ್ಕನ ಬಳಗದ 8ನೇ ವಾರ್ಷಿಕೋತ್ಸವವೂ ನಡೆಯಿತು. ಮಹಿಳಾ ಆರಕ್ಷಕರು ಸೇರಿದಂತೆ ಹಲವರನ್ನು ಸನ್ಮಾನಿಸಲಾಯಿತು. ಜಾನಪದ ಕಾರ್ಯಕ್ರಮಗಳು ನಡೆದವು.

unity for your rights the power in womens awakening

ಗಜೇಂದ್ರಗಡ ಅಕ್ಕನ ಬಳಗದಿಂದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ (ಬಾಕ್ಸ್ )

ಸಮಾಜದ ಅಭಿವೃದ್ಧಿಗೆ ಮಹಿಳೆ ಮೂಲ ಶಕ್ತಿ (ಹೆಡ್ )

ವಿಕ ಸುದ್ದಿಲೋಕ ಗಜೇಂದ್ರಗಡ

ಸಮಾಜ ಅಭಿವೃದ್ಧಿಗೆ ಮೂಲ ಶಕ್ತಿಯಾಗಿರುವ ಮಹಿಳೆಯರು ದೇಶದ ಪ್ರಗತಿಗೆ ಬುನಾದಿಯಾಗಿದ್ದಾರೆ. ಸಂಘಟಿತರಾಗುವ ಮೂಲಕ ತಮ್ಮ ಹಕ್ಕನ್ನು ಪಡೆದುಕೊಳ್ಳಬೇಕು. ಒಗ್ಗಟ್ಟಿನಲ್ಲಿಬಲವಿದೆ ಎನ್ನುವುದನ್ನು ಅರಿತು ಮಹಿಳೆಯರು ಮಾನಸಿಕವಾಗಿ ಸಿದ್ದಗೊಳ್ಳಬೇಕು. ಮಹಿಳೆಯ ಮೇಲಿನ ಶೋಷಣೆಗೆ ಇತಿಹಾಸವೇ ಸಾಕ್ಷಿ ಒದಗಿಸುತ್ತದೆ ಎಂದು ಬೈಲಹೊಂಗಲದ ಪತ್ರಿಬಸವೇಶ್ವರ ಅನುಭವ ಮಂಟಪದ ಅಧ್ಯಕ್ಷೆ ಪ್ರೇಮಾ ಅಂಗಡಿ ಹೇಳಿದರು.

ಸ್ಥಳೀಯ ಅಕ್ಕನ ಬಳಗದ ಕಾರ್ಯಾಲಯ ಆವರಣದಲ್ಲಿನಡೆದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಮತ್ತು ಅಕ್ಕನ ಬಳಗದ 8ನೇ ವಾರ್ಷಿಕೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

1908 ರಲ್ಲಿಅಮೇರಿಕಾದ ಸಿದ್ಧ ಉಡುಪು ತಯಾರಿಕಾ ಘಟಕದಲ್ಲಿಪುರುಷ ಮತ್ತು ಮಹಿಳೆಯರು ಸಮಾನವಾಗಿ ಕೆಲಸ ಮಾಡಿದರೂ ಸಹಿತ ಮಹಿಳೆಯರಿಗೆ ಕಡಿಮೆ ವೇತನ ಕೊಡುತ್ತಿದ್ದರು. ಆ ತಾರತಮ್ಯ ನೀತಿ ಖಂಡಿಸಿ ಮಹಿಳೆಯರು ಪ್ರತಿಭಟಿಸಿದರು. ಅಂದಿನಿಂದ ವಿಶ್ವಸಂಸ್ಥೆ ಮಾ.8 ರಂದು ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಗೆ ಕರೆ ನೀಡಿತು ಎಂದರು.

ಅಕ್ಕನ ಬಳಗದ ಅಧ್ಯಕ್ಷೆ ಸಂಯುಕ್ತ ಬಂಡಿ ಮಾತನಾಡಿ, ಮಹಿಳೆಯರು ಎಲ್ಲರಂಗಗಳಲ್ಲಿತಮ್ಮ ಸಾಮರ್ಥ್ಯ ನಿರೂಪಿಸುತ್ತ ಬಂದಿದ್ದಾರೆ. ಪುರುಷ ಪ್ರಧಾನ ಸಮಾಜದಲ್ಲಿಮಹಿಳೆಯರಿಗೆ ಅವಕಾಶಗಳು ಕಡಿಮೆ. ಆದರೆ ಸಿಕ್ಕ ಅವಕಾಶಗಳನ್ನು ಸದುಪಯೋಗ ಪಡಿಸಿಕೊಂಡು ಸಾಧನೆ ಮಾಡಬೇಕಿದೆ. ಈ ನಿಟ್ಟಿನಲ್ಲಿಅಕ್ಕನಬಳಗ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಬಂದಿದೆ ಎಂದು ಹೇಳಿದರು.

ಮಹಿಳಾ ಆರಕ್ಷಕಿ ಮಾಲತಿ ಶಿಗಿಹಳ್ಳಿ, ಮಂಜುಳಾ ಕೌಜಗೇರಿ, ಭಾಗ್ಯ ಆಲೂರ, ಲಕ್ಷಿ ್ಮ ದೊಡ್ಡಮನಿ, ರಜಿಯಾ ಬನ್ನಿಗೋಳ ಸನ್ಮಾನಿತರಾದರು. ಅರುಣೋದಯ ಕಲಾ ತಂಡದಿಂದ ಜನಾಪದ ಕಾರ್ಯಕ್ರಮ ನಡೆಯಿತು.

ಸುವರ್ಣ ನಂದಿಹಾಳ, ಬಸಮ್ಮ ಸಾಲಿಮಠ, ರಾಜಮ್ಮ ಹುಲಿ, ಗೀತಾ ಕಂಬಳ್ಯಾಳ, ಲೀಲಾವತಿ ಸವಣೂರ,ಅನಸೂಯಾ ವಾಲಿ, ಇಂದಿರಾ ತೇಲಿ,ವಿಜಯಲಕ್ಷಿ ್ಮ ಚಟ್ಟೇರ, ಸುಜಾತ ಮೆಣಸಗಿ, ರಾಜೇಶ್ವರಿ ಅರಹುಣಸಿ, ರೇಖಾ ವೀರಾಪೂರ, ಸುಕನ್ಯಾ ಹೊಗರಿ, ಸುಜಾತ ಅಪ್ಪಣ್ಣವರ, ವನಿತಾ ಘಾಟಗೆ, ರಶ್ಮಿ ಸಜ್ಜನರ, ಮಂಜುಳಾ ಕೋರ ಧಾನ್ಯಮಠ, ಸುಮಾ ಲಕ್ಕುಂಡಿಮಠ, ಕೀರ್ತಿ ಕೊಟಗಿ, ಶಿವಲೀಲಾ ಸಿಂಹಾಸನ, ಸುಜಾತ ಮುದಗಲ್ಲ, ಸಂಗೀತ ಗಾಣಗೇರ, ಶರಣಮ್ಮ ಅಂಗಡಿ ಇನ್ನಿತರರಿದ್ದರು.

ಫೋಟೊ: 10ಜಿಜೆಡಿ 5:

ಗಜೇಂದ್ರಗಡ ಅಕ್ಕನ ಬಳಗದಿಂದ ನಡೆದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಬೈಲಹೊಂಗಲದ ಪತ್ರಿಬಸವೇಶ್ವರ ಅನುಭವ ಮಂಟಪದ ಅಧ್ಯಕ್ಷೆ ಪ್ರೇಮಾ ಅಂಗಡಿ ಉದ್ಘಾಟಿಸಿದರು. ಸಂಯುಕ್ತಾ ಬಂಡಿ ಇನ್ನಿತರರು ಇದ್ದರು.