ವಿಕ ಸುದ್ದಿಲೋಕ ತುಮ್ಮಿನಕಟ್ಟಿ
ವಿಶ್ವ ಮಹಿಳಾ ದಿನವೇ ಕೇಂದ್ರ ಸರಕಾರ ಅಡುಗೆ ಅನಿಲದ ಬೆಲೆ ಏರಿಸಿದೆ, ಇದು ಅಚ್ಚೇದಿನ್ ಎಂದು ಶಾಸಕ ಪ್ರಕಾಶ ಕೋಳಿವಾಡ ಟೀಕಿಸಿದರು.
ಅವರು ರಾಣೇಬೆನ್ನೂರು ತಾಲೂಕಿನ ಯಲಬಡಗಿ ಗ್ರಾಮದಲ್ಲಿಮಂಗಳವಾರ ಜಿಪಂ ಇಲಾಖೆಯಿಂದ ಸಿ.ಎಂ.ಐ.ಡಿ.ಪಿ ಯೋಜನೆಯಡಿ ಹಲಗೇರಿ-ತುಮ್ಮಿನಕಟ್ಟಿ ರಸ್ತೆಯಿಂದ ಯಲಬಡಗಿವರೆಗೆ ಸಿಸಿ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು. ‘‘ರಾಜ್ಯ ಸರಕಾರದ 5 ಗ್ಯಾರಂಟಿ ಯೋಜನೆಗಳಿಂದ ಜನರ ನೆಮ್ಮದಿಯ ಹಾಗೂ ಸ್ವಾಭಿಮಾನದ ಜೀವನ ನಡೆಸುತ್ತಿದ್ದಾರೆ. ನಿಮ್ಮ ದುಡ್ಡನ್ನು ಗ್ಯಾರಂಟಿ ಯೋಜನೆಗಳ ಮೂಲಕ ನಿಮಗೆ ವಾಪಸ್ ಕೊಟ್ಟರೆ ಬಿಜೆಪಿಯವರು ಟೀಕಿಸುತ್ತಿದ್ದಾರೆ. ಅವರಿಗೆ ಜನರ ದುಡ್ಡು ಜನರಿಗೆ ಮರು ಬಳಕೆ ಬೇಕಾಗಿಲ್ಲ,’’ ಎಂದು ದೂರಿದರು.
ಗ್ರಾಮದ ಮುಖಂಡರಾದ ನಾಗರಾಜ ಬಿಷ್ಟಣ್ಣನವರ, ರಾಮನಗೌಡ, ಸಿದ್ದಪ್ಪ ಬಣಕಾರ,, ಕರಬಸಪ್ಪ ಬುಳ್ಳಾಪುರ, ಶೇಖಪ್ಪ ಬಿಷ್ಟಣ್ಣನವರ, ದಾನಪ್ಪ ಬಿಷ್ಟಣ್ಣನವರ, ಶಿವನಗೌಡ ಹೊರಕೇರಿ, ಸುರೇಶ ಭಾನುವಳ್ಳಿ, ವೀರನಗೌಡ ಗೌಡ್ರ, ಜಯಪ್ಪ ಬಣಕಾರ, ಚನ್ನಪ್ಪಗೌಡ್ರ, ಭರಮಗೌಡ ಗೌಡರ, ಸಿದ್ದಪ್ಪ ಬಿಷ್ಟಣ್ಣನವರ. ಮಾಲತೇಶ ಬಣಕಾರ, ಇದ್ದರು.
10 ಟಿಎಂಕೆ 01
ರಾಣೇಬೆನ್ನೂರು ತಾಲೂಕಿನ ಯಲಬಡಗಿ ಗ್ರಾಮದಲ್ಲಿಜಿಪಂ ಇಲಾಖೆಯಿಂದ ಸಿಸಿ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಶಾಸಕ ಪ್ರಕಾಶ ಕೋಳಿವಾಡ ಭೂಮಿಪೂಜೆ ನೆರವೇರಿಸಿದರು.

