ಪ್ರೋತ್ಸಾಹಧನ ಸೌಲಭ್ಯಕ್ಕೆ ಅರ್ಜಿ ಆಹ್ವಾನ
ಯಾದಗಿರಿ: 2023-24ನೇ ಸಾಲಿನ ನಗರಸಭೆ ನಿಧಿ ಅನುದಾನದಡಿ ವಿಶೇಷ ಚೇತನರ ಕಲ್ಯಾಣಕ್ಕಾಗಿ ಸರಬ್ರಲ್ ಪಾಲಿಸಿ, ಮಸ್ಕೂಲರ್ ಡಿಸ್ಟೊ್ರೕಪಿ, ಪಾರ್ಕಿನ್ಸನ್ಸ್ ಮತ್ತು ಮಲ್ಟಿಪಲ್ ಸ್ಲೆತ್ರೖರೂಸಿಸ್ ಆಟಸಂ, ಬೌದ್ಧಿಕ ವಿಕಲತೆ ಮತ್ತು ಬಹುವಿನ, ವಿಶೇಷ ಚೇತನರ (ಶ್ರವಣ ಅಂಧತ್ವ) ಆರೈಕೆದಾರರ ಪ್ರೋತ್ಸಾಹಧನ ಸೌಲಭ್ಯಕ್ಕೆ ಅರ್ಜಿ ಆಹ್ವಾನಿಸಲಾಗಿದೆ ಎಂದು ಶಹಾಪುರ ನಗರಸಭೆ ಪೌರಾಯುಕ್ತ ಜೀವನಕುಮಾರ ತಿಳಿಸಿದ್ದಾರೆ. ಶೇ. 5ರಷ್ಟು ಯೋಜನೆ ಕಾರ್ಯಕ್ರಮದಲ್ಲಿವಿಶೇಷ ಚೇತನರ ಕಲ್ಯಾಣಕ್ಕಾಗಿ ಸರಬ್ರಲ್ ಪಾಲಿಸಿ, ಮಸ್ಕೂಲರ್ ಡಿಸ್ಟೊ್ರೕಪಿ, ಪಾರ್ಕಿನ್ಸನ್ಸ್ ಮತ್ತು ಮಲ್ಟಿಪಲ್ ಸ್ಲೆತ್ರೖರೂಸಿಸ್ ಆಟಸಂ, ಬೌದ್ಧಿಕ ವಿಕಲತೆ ಮತ್ತು ಬಹುವಿಧದ ವಿಶೇಷ ಚೇತನರ (ಶ್ರವಣ ಅಂಧತ್ವ) ಆರೈಕೆದಾರರು ಪ್ರೋತ್ಸಾಹಧನ ಪಡೆಯಲು ದಾಖಲಾತಿಗಳನ್ನು ಅರ್ಜಿಯೊಂದಿಗೆ ಕಡ್ಡಾಯವಾಗಿ ಲಗತ್ತಿಸಬೇಕು. ದಾಖಲಾತಿಗಳು ಗೆಜೆಟೆಡ್ ಅಧಿಕಾರಿಗಳಿಂದ ದೃಢೀಕರಿಸಿ ಮಾ.25 ರೊಳಗೆ ಸಲ್ಲಿಸಬೇಕು. ನಂತರ ಬಂದ ಅರ್ಜಿಗಳನ್ನು ತಿರಸ್ಕರಿಸಲಾಗುವುದು. ಅಪೂರ್ಣ ದಾಖಲಾತಿ ಹೊಂದಿರುವ ಅರ್ಜಿಗಳನ್ನು ಪರಿಗಣಿಸಲಾಗುವುದಿಲ್ಲ. ಹೆಚ್ಚಿನ ಮಾಹಿತಿಗಾಗಿ ನಗರಸಭೆ ಕಾರ್ಯಾಲಯದ ವಿಷಯ ನಿರ್ವಾಹಕರಿಗೆ ಕಛೇರಿ ಸಮಯದಲ್ಲಿಸಂಪರ್ಕಿಸಬಹುದು ಎಂದು ತಿಳಿಸಿದ್ದಾರೆ.
ಪಕ್ಕಾ ಮನೆ ನಿರ್ಮಾಣ ಸಹಾಯಧನ ಸೌಲಭ್ಯಕ್ಕೆ ಅರ್ಜಿ
ಯಾದಗಿರಿ: ಶಹಾಪೂರ ನಗರಸಭೆ ವತಿಯಿಂದ 2023-24, 2024-25, 2025-26ನೇ ಸಾಲಿನ ಎಸ್ ಎಫ್ ಸಿ ಅನುದಾನದಡಿಯಲ್ಲಿಪರಿಶಿಷ್ಟ ಪಂಗಡ ಜನಾಂಗದವರಿಗೆ ಪಕ್ಕಾ ಮನೆ ನಿರ್ಮಾಣ ಸಹಾಯಧನ ಸೌಲಭ್ಯಕ್ಕೆ ಅರ್ಜಿ ಆಹ್ವಾನಿಸಲಾಗಿದೆ ಎಂದು ಶಹಾಪೂರ ನಗರಸಭೆ ಪೌರಾಯುಕ್ತ ಜೀವನಕುಮಾರ ತಿಳಿಸಿದ್ದಾರೆ.
ಪಕ್ಕಾ ಮನೆ ನಿರ್ಮಾಣಕ್ಕಾಗಿ ಸಹಾಯಧನ ಪಡೆಯಲು ದಾಖಲಾತಿಗಳನ್ನು ಅರ್ಜಿಯೊಂದಿಗೆ ಕಡ್ಡಾಯವಾಗಿ ಲಗತ್ತಿಸಬೇಕು. ನಮೂನೆ-3, ಆಸ್ತಿ ತೆರಿಗೆ ಪಾವತಿಸಿದ ರಸೀದಿ, ಬಿಪಿಎಲ್ ಪಡಿತರ ಚೀಟಿ, ಜಾತಿ ಮತ್ತು ಆದಾಯ ಪ್ರಮಾಣ ಪತ್ರ, ವಾಸಸ್ಥಳ ಪ್ರಮಾಣ ಪತ್ರ, ಆಧಾರ ಕಾರ್ಡ್ ಮತ್ತು ಚುನಾವಣೆ ಗುರುತಿನ ಚೀಟಿ, ಬ್ಯಾಂಕ್ ಪಾಸ್ ಬುಕ್ ಪ್ರತಿಗೆ ಗೆಜೆಟೆಡ್ ಅಧಿಕಾರಿಗಳಿಂದ ದೃಢೀಕರಿಸಿ ಮಾ.25ರ ಒಳಗೆ ಸಲ್ಲಿಸಬೇಕು. ನಂತರ ಬಂದ ಅರ್ಜಿಗಳನ್ನು ತಿರಸ್ಕರಿಸಲಾಗುವುದು, ಅದೇ ರೀತಿ ಅಪೂರ್ಣ ದಾಖಲಾತಿ ಹೊಂದಿರುವ ಅರ್ಜಿಗಳನ್ನು ಪರಿಗಣಿಸಲಾಗುವುದಿಲ್ಲ. ಹೆಚ್ಚಿನ ಮಾಹಿತಿಗಾಗಿ ನಗರಸಭೆ ಕಾರ್ಯಾಲಯದ ವಿಷಯ ನಿರ್ವಾಹಕರಿಗೆ ಕಛೇರಿ ಸಮಯದಲ್ಲಿಸಂಪರ್ಕಿಸಬಹುದು ಎಂದು ತಿಳಿಸಿದ್ದಾರೆ.

